Breaking News

ಭಕ್ತಿ,ಸಂಭ್ರಮದಿಂದ ನಡೆದ ಪೆರುವಾಜೆ ನವರಾತ್ರಿ ಉತ್ಸವ

Advt_Headding_Middle
Advt_Headding_Middle


ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.೮ರಿಂದ ಅ.೧೮ ರವರೆಗೆ ವಿಜೃಂಭಣೆಯಿಂದ ನಡೆಯಿತು.
ಪ್ರತೀ ದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ರಂಗಪೂಜೆ, ಭಕ್ತಾದಿಗಳ ಸಾಮೂಹಿಕ ರಂಗಪೂಜೆ,ಮಹಾಪೂಜೆ ನಂತರ ಪ್ರತಿದಿನ ಅನ್ನಸಂತರ್ಪಣೆ ನಡೆಯಿತು.

ವಾಹನಗಳಿಗೆ ಆಯುಧ ಪೂಜೆ ನಡೆಯಿತು.ದೈವಗಳಿಗೆ ತಂಬಿಲ ಸೇವೆಯು ನಡೆಯಿತು.ಪ್ರತೀ ದಿನ ರಾತ್ರಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅ.೧೯ ರಂದು ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.


ಸಾವಿರಾರು ಜನ ಭಕ್ತಾದಿಗಳು ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು,ಸುಬ್ರಹ್ಮಣ್ಯ ನಿಡ್ವಣ್ಣಾಯ ಕುಮಾರ ಮಂಗಲ ಪವಿತ್ರಪಾಣಿ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್,ಭೋಜರಾಜ ಕಲ್ಕಂಪಾಡಿಗುತ್ತು,ಮಹಾಲಿಂಗ ನಾಯ್ಕ ಪೆಲತ್ತಡ್ಕ,ಶ್ರೀಮತಿ ದೇವಕಿ ಪೂವಪ್ಪ ಪೂಜಾರಿ ಮುಕ್ಕೂರು,ಕಿಶೋರ್ ಕುಮಾರ್ ಪೆರುವಾಜೆ, ಶ್ರೀಮತಿ ಲೀಲಾವತಿ ಎ.ಶೆಟ್ಟಿ ಪೆರುವಾಜೆಗುತ್ತು,ಅಂಗಾರ ಬಜ,ಕರುಣಾಕರ ಗೌಡ ಬೀರುಸಾಗು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.