Breaking News

ಪೆರುವಾಜೆಯಲ್ಲಿ ಜೆ.ಡಿ.ಅಡಿಟೋರಿಯಂ ಲೋಕಾರ್ಪಣೆ

Advt_Headding_Middle
Advt_Headding_Middle

ಪೆರುವಾಜೆಯಲ್ಲಿ ನೂತನವಾಗಿ ನಿರ್ಮಾಣವಾದ ಪಿ.ಪದ್ಮನಾಭ ಶೆಟ್ಟಿ ಪೆರುವಾಜೆಯವರ ಮಾಲಕತ್ವದ ಜೆ.ಡಿ. ಅಡಿಟೋರಿಯಂ ಅ.22 ರಂದು ಲೋಕಾರ್ಪಣೆಗೊಂಡಿತು.

 

ಸಂಸದರಾದ ನಳಿನ್ ಕುಮಾರ್ ಕಟೀಲು ಅಡಿಟೋರಿಯಂನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳು ಆಶೀರ್ವಚನ ನೀಡಿದರು. ಶಾಸಕ ಎಸ್.ಅಂಗಾರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳ್ಳಾರೆ ಜಕಾರಿಯಾ ಜುಮ್ಮಾ ಮಸೀದಿಯ ಮದರ್ರಿಸ್ ಬಹು.ಮುಹಮ್ಮದ್ ತಾಜುದ್ದೀನ್ ರಹ್ಮಾನಿ ಶುಭಹಾರೈಕೆ ಮಾಡಿದರು. ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಸೂಯ ಭಾಗವಹಿಸಿದ್ದರು.

 

ಗೌರವ ಉಪಸ್ಥಿತರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರಾಜೀವಿ ಆರ್ .ರೈ, ಬೆಳ್ಳಾರೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ,ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ, ಕಾರ್ಪೋರೇಶನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸ್ಮಿತೇಶ್ ವಿ.ಎಸ್.ಬೇಳ ಬದಿಯಡ್ಕ ವಿ.ಎಂ.ಅಡಿಟೋರಿಯಂನ ವಸಂತ ರೈ ಬೇಳ ಭಾಗವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ರತ್ನಾವತಿ ಎನ್.ಶೆಟ್ಟಿ, ಪಿ. ಪದ್ಮನಾಭ ಶೆಟ್ಟಿ, ಶ್ರೀಮತಿ ಸುಜಾತಾ ಪಿ. ಶೆಟ್ಟಿ, ಗಂಗಾಧರ ಶೆಟ್ಟಿ, ಶ್ರೀಮತಿ ಅರುಣಾ ಜಿ. ಶೆಟ್ಟಿ ಉಪಸ್ಥಿತರಿದ್ದರು. ಪಿ. ಪದ್ಮನಾಭ ಶೆಟ್ಟಿ ಸ್ವಾಗತಿಸಿ, ಪ್ರದೀಪ್‌ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

 

ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕ್ಕಾಡ್ ರವರು ರಚಿಸಿ ನಟಿಸಿ ನಿರ್ದೇಶಿಸಿರುವ ಚಾ ಪರ್ಕ ಕಲಾವಿದರಿಂದ ಪನಿಯರೆ ಆವಂದಿನ ಹಾಸ್ಯಮಯ ತುಳುನಾಟಕ ನಡೆಯಿತು.

 

 

ವಿಶೇಷತೆಗಳು
ಪದ್ಮನಾಭ ಶೆಟ್ಟಿ ಪೆರುವಾಜೆಯವರು ನಿರ್ಮಿಸಿದ ಜೆ.ಡಿ.ಅಡಿಟೋ ರಿಯಂ ಬೆಳ್ಳಾರೆ ಪೇಟೆಯಿಂದ ಕಾಲ್ನಡಿಗೆಯ ಅಂತರದಲ್ಲಿದೆ. ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಲಭ್ಯ. ಸ್ವಚ್ಛಂದ ಪರಿಸರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಸಭಾಂಗಣ. ಮದುವೆ, ಸಭೆ, ಸಮಾರಂಭಗಳ ಆಯೋಜನೆಗೆ ಅನುಕೂಲಕರ ವಾತಾವರಣ ಮತ್ತು ಸಕಲ ವ್ಯವಸ್ಥೆ ವಿಶಾಲವಾದ ಭೋಜನ ಕೊಠಡಿ ವೈವಿಧ್ಯಮಯ ಅಲಂಕಾರ ಗಳನ್ನೊಳಗೊಂಡ ಸುಂದರ ವೇದಿಕೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಎಲ್ಲಾ ಶುಭ ಸಭೆ ಸಮಾರಂಭಗಳಿಗೆ ಶುಚಿ-ರುಚಿಯಾದ ಕ್ಯಾಟರಿಂಗ್ ವ್ಯವಸ್ಥೆ ಮತ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.