Breaking News

ಸುಬ್ರಹ್ಮಣ್ಯ ದೇವಸ್ಥಾನದ ವಸತಿ ಗೃಹದ ಪೀಠೊಪಕರಣ ಅಳವಡಿಸಲು ಮುಹೂರ್ತ

Advt_Headding_Middle
Advt_Headding_Middle


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆ ಬಳಿ ನೂತನವಾಗಿ ನಿರ್ಮಿಸಲ್ಪಟ್ಟ ವಸತಿ ಗೃಹಕ್ಕೆ ಪೀಠೋಪಕರಣ ಅಳವಡಿಸುವ ಮುಹೂರ್ತ ಕಾರ್ಯಕ್ರಮ ಅ.೨೪ ರಂದು ನಡೆಯಿತು.

 

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಉದ್ಘಾಟಿಸಿ ೪.೯ ಕೋಟಿ ಮೊತ್ತದಲ್ಲಿ ಈ ವಸತಿ ಗೃಹಕ್ಕೆ ಪಿಟೋಪಕರಣ ಅಳವಡಿಸುವ ಕೆಲಸ ನಡೆಯಲಿದ್ದು ಉತ್ತಮ ಗುಣಮಟ್ಟದ ಮತ್ತು ಆದಷ್ಟು ಶೀಘ್ರವಾಗಿ ಕೆಲಸ ನಡೆಯಲಿ ಎಂದು ಹಾರೈಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಬಲ್ಲೇರಿ, ಮಾದವ ಡಿ, ಕೃಷ್ಣ ಮೂರ್ತಿ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಮಾಸ್ಟರ್ ಪ್ಲಾನ್ ಸದಸ್ಯ ಶಿವರಾಮ ರೈ, ಪೀಠೋಪಕರಣಗಳ ಕಂಟ್ರಾಕ್ಟರ್ ಪ್ರಭಾಕರ ಮಂಗಳೂರು, ಇಂಜಿನಿಯರ್ ಗಳಾದ ಶ್ರೀಕಾಂತ್, ಮೂರ್ತಿ ಎಂ.ಪಿ, ಕೃಷ್ಣ, ಉದಯ ಕುಮಾರ್, ಪ್ರಕಾಶ್ , ಸುಬ್ರಹ್ಮಣ್ಯ, ತಾರಾನಾಥ ಉಪಸ್ಥಿತರಿದ್ದರು. ಗೋಪಾಲ ಭಟ್ ಮತ್ತು ಷಣ್ಮುಖ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.

 

ಈ ವಸತಿ ಗೃಹ ಒಟ್ಟು ೬ ಮಹಡಿ ಹೊಂದಿದ್ದು ಒಟ್ಟು ೧೮೨ ರೂಮ್ ಗಳಿವೆ. ಪ್ರತಿ ರೂಮ್ ನಲ್ಲಿ ಮೂರು ಅಥವಾ ಎರಡು ಬೆಡ್, ಕಪಾಟು, ಚಯರ್, ಸ್ಟೂಲ್ ಸ್ಕೀನ್ ಮುಂತಾದವುಗಳನ್ನು ಒಳಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.