ಕುಕ್ಕೆ ಸುಬ್ರಹ್ಮಣ್ಯ ಘರ್ಷಣೆ ಪ್ರಕರಣ: ಗುರುಪ್ರಸಾದ್ ಪಂಜ, ಚೈತ್ರಾ ಕುಂದಾಪುರ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು, ಪೊಲೀಸ್ ಕಾವಲು

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ನಿನ್ನೆ ಸಂಜೆ ಸಂಭವಿಸಿದ ಘರ್ಷಣೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡಿದ್ದ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ಕುಂದಾಪುರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರಿಗೂ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಮಠ ಹಾಗೂ ದೇಗುಲದ ನಡುವೆ ಪೂಜಾವಿಧಾನಗಳ ಕುರಿತಂತೆ ನಡೆಯುತ್ತಿರುವ ವಿವಾದದ ಹಿನ್ನಲೆಯಲ್ಲಿ ಗುರುಪ್ರಸಾದ್ ಪಂಜ ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಫೇಸ್‌ಬುಕ್ ಸಮರ ಏರ್ಪಟ್ಟಿತ್ತು. ಗುರುಪ್ರಸಾದ್ ಮತ್ತು ಆತನ ಗೆಳೆಯರು ತನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿ ಕಮೆಂಟ್ ಹಾಕಿದ್ದಾರೆ ಎಂದು ಆರೋಪಿಸಿ ಚೈತ್ರಾ ತನ್ನ ಬೆಂಬಲಿಗರೊಂದಿಗೆ ನಿನ್ನೆ ಸಂಜೆ ಸುಬ್ರಹ್ಮಣ್ಯಕ್ಕೆ ಬಂದು ಗುರುಪ್ರಸಾದ್‌ರನ್ನು ಪ್ರಶ್ನಿಸಿದ್ದರು. ಅವರು ಬರುವ ವಿಚಾರ ಮೊದಲೇ ತಿಳಿದಿದ್ದ ಗುರುಪ್ರಸಾದ್ ಬೆಂಬಲಿಗರು ಕೂಡಾ ಸ್ಥಳದಲ್ಲಿದ್ದರು. ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಹೊಡೆದಾಟವಾಗಿ ಗುರುಪ್ರಸಾದ್‌ರ ಮೇಲೆ ಹಲ್ಲೆ ನಡೆದಿತ್ತು.

ಹಣೆಗೆ ಗಾಯಗೊಂಡಿದ್ದ ಗುರುಪ್ರಸಾದ್ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಪೊಲೀಸ್ ವಶದಲ್ಲಿದ್ದ ಚೈತ್ರ ಕುಂದಾಪುರ ಮತ್ತು ಅವರ ಜೊತೆಗಿದ್ದ 6  ಮಂದಿ ಯುವಕರನ್ನು ಕೂಡಾ ರಾತ್ರಿ ವೇಳೆ ಸುಬ್ರಹ್ಮಣ್ಯ ಪೊಲೀಸರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರಲ್ಲದೆ ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲಾದರು. ಇತ್ತಂಡದ ಮೇಲೆ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿರುವ ಇಬ್ಬರಿಗೂ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.