ಸುಬ್ರಹ್ಮಣ್ಯ ಸಂಪೂರ್ಣ ಬಂದ್, ಊರವರಿಂದ ಮೆರವಣಿಗೆ

Advt_Headding_Middle
Advt_Headding_Middle


ಚೈತ್ರಾ ಕುಂದಾಪುರ ಮತ್ತು ಸಂಗಡಿಗರು ಸುಬ್ರಹ್ಮಣ್ಯಕ್ಕೆ ಬಂದು ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ವೈಯಕ್ತಿಕವಾಗಿ ನಿಂದಿಸಿ ಕಮೆಂಟ್ ಹಾಕಿದರೆಂಬ ಕಾರಣಕ್ಕಾಗಿ ಗುರುಪ್ರಸಾದ್ ಪಂಜ ಮತ್ತು ಆಶಿತ್ ಕಲ್ಲಾಜೆಯವರನ್ನು ಪ್ರಶ್ನಿಸಿದ ಹಾಗೂ ಆ ಸಂದರ್ಭದಲ್ಲಿ ಹೊಡೆದಾಟವಾಗಿ ಗುರುಪ್ರಸಾದ್ ಪಂಜರವರ ಮೇಲೆ ಹಲ್ಲೆಯಾದ ಘಟನೆ ನಡೆದಿದ್ದು, ಈ ಘಟನೆಯನ್ನು ಖಂಡಿಸಿ ಸುಬ್ರಹ್ಮಣ್ಯದಲ್ಲಿ ಇಂದು ಕರೆನೀಡಲಾಗಿರುವ ಸುಬ್ರಹ್ಮಣ್ಯ ಬಂದ್ ಪೂರ್ಣವಾಗಿ ನಡೆದಿದೆ.

ಸುಬ್ರಹ್ಮಣ್ಯದ ನೂರಾರು ಮಂದಿ ಚೈತ್ರಾ ಕುಂದಾಪುರರಿಗೆ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸುತ್ತಿದ್ದಾರೆ. ಕುಕ್ಕೆ ದೇವಳದಿಂದ ಹೊರಟ ಮೆರವಣಿಗೆಯು ಕುಮಾರಧಾರದವರೆಗೆ ಹೋಗಿ ಅಲ್ಲಿಂದ ಮತ್ತೆ ದೇವಸ್ಥಾನದತ್ತ ಹಿಂತಿರುಗುತ್ತಿದೆ. ಸಂಜೆ ೪ ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.