ರೋಟರಿ ಕ್ಲಬ್ ಸುಳ್ಯ: ಜಂಟಿ ಸಭೆ ಹಾಗೂ ಸಹಾಯ ಹಸ್ತ

Advt_Headding_Middle
Advt_Headding_Middle

ಇನ್ನರ್‌ವ್ಹೀಲ್ ಕ್ಲಬ್ ಜೆ.ಪಿ. ನಗರ ಬೆಂಗಳೂರು ಇವರು ಕೊಡಗು ಜಿಲ್ಲೆ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸಿದ ಮೊತ್ತವನ್ನು ರೊಟರಿ ಕ್ಲಬ್ ಸುಳ್ಯದ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಗೆ ಸಮರ್ಪಿಸಿದೆ.ಅ. ೨೪ರಂದು ರೋಟರಿ ಕ್ಲಬ್ ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಸುಳ್ಯ, ಇನ್ನರ್‌ವ್ಹೀಲ್ ಕ್ಲಬ್ ಜೆ.ಪಿ. ನಗರ ಬೆಂಗಳೂರು ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಸುಳ್ಯ ಜಂಟಿ ಸಭೆ ಹಾಗೂ ಸಹಾಯ ಹಸ್ತ ಕಾರ್ಯಕ್ರಮ ಜರಗಿತು.
ಜೆ.ಪಿ. ನಗರ ಬೆಂಗಳೂರು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಧನುಜಾ, ಉಪಾಧ್ಯಕ್ಷೆ ಮಮತಾ, ದಿವ್ಯಾ ಹಾಗೂ ಕ್ರಿಯೇಟಿವ್ ಸಿನರ್ಜೇಸ್ ಗ್ರೂಪ್‌ನ ಹರೀಶ್ ಮತ್ತು ಜಿತೇಂದ್ರರೊಂದಿಗೆ ರೂ. ೨ ಲಕ್ಷವನ್ನು ರೋಟರಿ ಕ್ಲಬ್ ಸುಳ್ಯಕ್ಕೆ ಹಸ್ತಾಂತರಿಸಲಾಗಿದೆ. ರೋಟರಿ ಅಧ್ಯಕ್ಷ ದಯಾನಂದ ಆಳ್ವ, ಶಾಲಾ ಸಂಚಾಲಕ ಜಿತೇಂದ್ರ ಎನ್.ಎ., ಸೀತಾರಾಮ ರೈ ಸವಣೂರು, ರಾಮಚಂದ್ರ ಅಗ್ರೋ, ಜಗದೀಶ್ ಅಡ್ತಲೆ, ಕಾರ್ಯದರ್ಶಿ ಡಾ. ಗುರುರಾಜ ವೈಲಾಯ, ಡಾ. ಪುರುಷೋತ್ತಮ, ಇನ್ನರ್‌ವ್ಹೀಲ್ ಅಧ್ಯಕ್ಷರಾದ ಮಮತಾ ಮಡ್ತಿಲ, ಕಾರ್ಯದರ್ಶಿ ಡಾ. ಹರ್ಷಿತಾ ಉಪಸ್ಥಿತರಿದ್ದರು. ಸನತ್ ಅಗ್ರೋ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.