Breaking News

ಫೆ.5,11 : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ ಕಾರ್ಯಕ್ರಮ

Advt_Headding_Middle
Advt_Headding_Middle


ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬರುವ ೨೦೧೯ ನೇ ಫೆ.೦೫ ರಿಂದ ೧೧ ರವರೆಗೆ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಪುನ: ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದೆ.
ಬ್ರಹ್ಮಕಲಶೋತ್ಸವದ ಸಿದ್ಧತೆಗಾಗಿ ವಿವಿಧ ಸಮಿಗಳನ್ನು ರಚಿಸಲಾಗಿದ್ದು ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ ಎಂದು ಬ್ರಹ್ಲಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥ ಹೇಳಿದರು.
ಅವರು ಅ.೨೭ ರಂದು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಬ್ರಹ್ಮಕಲಶೋತ್ಸವದ ಜೊತೆಗೆ ವಾರ್ಷಿಕ ಜಾತ್ರೆಯೂ ನಡೆಯಲಿದ್ದು, ದೇವಸ್ಥಾನದಲ್ಲಿ ಅಗತ್ಯದ ಕೆಲಸಗಳು ನಡೆಯುತ್ತಿದೆ. ಹೊಸ ನಾಗನಕಟ್ಟೆಗೆ ಭೂಮಿ ಪೂಜೆಯು ನಡೆದಿದ್ದು ನಾಗನ ಕಟ್ಟೆಯ ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಸುಮಾರು ೫೦ ಲಕ್ಷ ಅಂದಾಜು ವೆಚ್ಚದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಐವರ್ನಾಡು ಗ್ರಾಮದ ಒಳಗೆ ಧನ ಸಂಗ್ರಹ ಮಾಡಲಿದ್ದೇವೆ. ಬೈಲುವಾರು ಸಮಿತಿಗಳನ್ನು ಮಾಡಿದ್ದು ಸಮಿತಿಯ ಅಧ್ಯಕ್ಷರುಗಳು ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡಲಿದ್ದಾರೆ. ೭ ದಿನವೂ ಸಾಂಸ್ಕತಿಕ ಕಾರ್ಯಕ್ರಮ ಮತ್ತು ೫ ದಿನ ಧಾರ್ಮಿಕ ಸಭೆಯನ್ನು ನಡೆಸುವುದೆಂದು ನಿರ್ಣಯಿಸಲಾಗಿದೆ. ಜಿಲ್ಲೆಯ ಸ್ವಾಮೀಜಿಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಲೆಪ್ಪಾಡಿ ಗಣಪಯ್ಯ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ಸದಸ್ಯರಾದ ಶಿವರಾಮ ಗೌಡ ನೆಕ್ರೆಪ್ಪಾಡಿ, ಶ್ರೀಮತಿ ಪದ್ಮಾವತಿ ಮಡ್ತಿಲ, ಜನಾರ್ಧನ ಗೌಡ ಕೊಪ್ಪಳ, ಸುಗಂಧಿನಿ ಚೆಮ್ನೂರು, ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ಕೋಶಾಧಿಕಾರಿ ಬೆಳ್ಯಪ್ಪ ಗೌಡ ದೇರಾಜೆ,ಪ್ರಧಾನ ಕಾರ್ಯದರ್ಶಿ ಮಾಧವ ಭಟ್ ಶೃಂಗೇರಿ, ಬೈಲುವಾರು ಸಮಿತಿಯ ರವಿನಾಥ ಮಡ್ತಿಲ,ಜಯಪ್ರಸಾದ್ ನಾಟಿಕೇರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.