ವಿದ್ಯಾಮಾತ ಫೌಂಡೇಶನ್ ವತಿಯಿಂದ ಉಚಿತ ಬ್ಯಾಗ್ ವಿತರಣೆ ಮತ್ತು ಸಂದರ್ಶನ

Advt_Headding_Middle
Advt_Headding_Middle

ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಮತ್ತು ಉದ್ಯೋಗ ಅನ್ವೇಷಣೆಯಲ್ಲಿರುವ ಯುವ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಭಾಗ್ಯೇಶ್ ರೈ ರವರ ನೇತೃತ್ವದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ “ವಿದ್ಯಾಮಾತ ಫೌಂಡೇಶನ್” ಸುಳ್ಯದಲ್ಲಿ ತನ್ನ ಪ್ರಪ್ರಥಮ ಕಾರ್ಯಕ್ರಮವನ್ನು ನೀಡುವುದರ ಮುಖಾಂತರ ಪುತ್ತೂರು ತಾಲೂಕುನಿಂದ ಸುಳ್ಯ ತಾಲೂಕಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.


ಅ. ೨೪ರಂದು ದ.ಕ.ಸ.ಹಿ.ಪ್ರಾ. ಶಾಲೆಯ ಅಮೃತ ಭವನದಲ್ಲಿ ನಡೆದ ವಿದ್ಯಾಮಾತ ಫೌಂಡೇಶನ್‌ನ ಸಹಸಂಸ್ಥೆ “ವಿದ್ಯಾಮಾತ” ದಿ ಹೋಮ್ ಆಫ್ ಯುವರ್ ಡ್ರೀಮ್ ಜಾಬ್ ನ ವತಿಯಿಂದ ಮಂಗಳೂರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಗಳಿಗೆ ಸಂದರ್ಶನ ಏರ್ಪಡಿಸಲಾಗಿತ್ತು. ಸುಳ್ಯ ತಾಲೂಕಿನ ೬೫ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದು, ೨೩ ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಶಾಲೆಯ ಯಸ್ ಡಿ ಯಂ ಸಿ ಅಧ್ಯಕ್ಷ ಶಂಕರ್ ಪೇರಾಜೆ ಉದ್ಘಾಟಿಸಿದರು, ಶಾಲೆಯ ಮುಖ್ಯೋಪಾಧ್ಯಯಿನಿ ಶ್ರೀಮತಿ ಕಲಾವತಿ ಉಪಸ್ಥಿತರಿದ್ದರು. ಶಾಲೆಯ ೧೨ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಮಾತ ವತಿಯಿಂದ ಅಧ್ಯಕ್ಷರಾದ ಭಾಗ್ಯೇಶ್ ರೈ ರವರು ಶಾಲಾ ಬ್ಯಾಗ್ ಗಳನ್ನು ವಿತರಿಸಿದರು. ಪುತ್ತೂರಿನಲ್ಲಿ ೨ ರಾಜ್ಯ ಮಟ್ಟದ ಉದ್ಯೋಗ ಮೇಳಗಳನ್ನು ಮಾಡಿರುವ ವಿದ್ಯಾಮಾತ ಫೌಂಡೇಶನ್ ವತಿಯಿಂದ ಮುಂದಿನ ದಿನಗಳಲ್ಲಿ ಸುಳ್ಯ ತಾಲೂಕಿನಲ್ಲೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಪುತ್ತೂರಿನ ಹಿಂದೂಸ್ತಾನ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ವಿದ್ಯಾಮಾತ ಸಂಸ್ಥೆಯ ನೂತನ ಕಚೇರಿಯನ್ನು ಜಯಕರ್ನಾಟಕ ಸಂಘಟನೆ ಅಧ್ಯಕ್ಷ, ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಮುತ್ತಪ್ಪ ರೈರವರು ಉದ್ಘಾಟಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.