Breaking News

ಬೆಳ್ಳಾರೆ: ದಾರುಲ್ ಹುದಾದಲ್ಲಿ ಸಾದಾತ್ ಆಂಡ್ ನೇರ್ಚೆ

Advt_Headding_Middle
Advt_Headding_Middle

ಬೆಳ್ಳಾರೆಯ ದಾರುಲ್ ಹುದಾ ವತಿಯಿಂದ ಅಹ್ದಲ್ ಬುಖಾರಿ ಶಿಹಾಬ್ ಸಾದಾತುಗಳನ್ನು ಅನುಸ್ಮರಿಸುವ ‘ಬೃಹತ್ ಸಾದಾತ್ ಆಂಡ್ ನೇರ್ಚೆ’ಯು ದಾರುಲ್ ಹುದಾ ಕ್ಯಾಂಪಸಿನಲ್ಲಿ ಅಕ್ಟೋಬರ್ 23, 24, 25 ದಿನಾಂಕಗಳಲ್ಲಿ ಅದ್ದೂರಿಯಾಗಿ ಜರುಗಿತು. ಮತ ಪ್ರಭಾಷಣ, ಬುರ್ದಾ ಕವಾಲಿ, ಖತಮುಲ್ ಖುರಾನ್, ಮದ್ಹೇ ರಸೂಲ್, ಅನುಸ್ಮರಣಾ ಸಂಗಮ ಮತ್ತು ದುಆ ಸಮ್ಮೇಳನ ನಡೆಯಿತು.


ಅಕ್ಟೋಬರ್ ೨೩ ಸಾಯಂಕಾಲ ಸ್ವಾಗತ ಸಮಿತಿಯ ವರ್ಕಿಂಗ್ ಚಯರ‍್ಮಾನ್ ಉಸ್ಮಾನ್ ಹಾಜಿ ಚೆನ್ನಾವರರವರು ಧ್ವಜಾರೋಹಣಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾತ್ರಿ ಪ್ರಮುಖ ವಾಗ್ಮಿ ನೌಫಲ್ ಸಖಾಫಿ ಕಳಸರವರು ಪ್ರಭಾಷಣಗೈದರು. ಎರಡನೇ ದಿನವಾದ ಬುಧವಾರ ರಾತ್ರಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂರವರ ನೇತೃತ್ವದಲ್ಲಿ ಬುರ್ದಾ ಮತ್ತು ಕವಾಲಿ ನಡೆಯಿತು. ಎಸ್.ಎಸ್.ಎಫ್ ಕೇರಳ ರಾಜ್ಯ ಸಾಹಿತ್ಯೋತ್ಸವದಲ್ಲಿ ವಿಜೇತ ತಂಡವು ಆಕರ್ಷಕ ಕವಾಲಿ ಪ್ರದರ್ಶಿಸಿತು. ಅಲ್ಲದೆ ಕೇರಳದ ಪ್ರಖ್ಯಾತ ಗಾಯಕರು ಭಾಗವಹಿಸಿದ್ದರು.

ಅಕ್ಟೋಬರ್ ೨೫ ರಂದು ಬೆಳಿಗ್ಗೆ ಸಯ್ಯಿದ್ ಖಾಸಿಮ್ ಅಲ್ ಅಹ್ದಲ್‌ರವರ ನೇತೃತ್ವದಲ್ಲಿ ಖತಮುಲ್ ಖುರಾನ್, ಮೌಲಿದ್ ಮತ್ತು ಅನುಸ್ಮರಣಾ ಸಂಗಮವು ನಡೆಯಿತು. ಮದ್ಯಾಹ್ನ ನಂತರ ನಡೆದ ‘ಇಲಾ ಸಬೀಲಿ ರಬ್ಬಿಕ’ ಎಂಬ ದಅವಾ ಸೆಶನಿನಲ್ಲಿ ಖ್ಯಾತ ಚಿಂತಕ ಎಸ್.ಪಿ ಹಂಝ ಸಖಾಫಿಯವರು ‘ದಅವಾ ರಂಗದ ಹೊಸ ರೂಪಗಳು’ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ನಂತರ ನಡೆದ ಮಾಸಿಕ ಸ್ವಲಾತ್‌ಗೆ ಅಸ್ಸಯ್ಯದ್ ಸಂಶುದ್ದೀನ್ ಬಾಅಲವಿ ತಂಙಳ್ ಉದ್ಯಾವರರವರು ನೇತೃತ್ವ ನೀಡಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭವು ಗುರುವಾರ ರಾತ್ರಿ ದಾರುಲ್ ಹುದಾ ರೂವಾರಿ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್‌ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು. ವಿಶ್ವವಿಖ್ಯಾತ ವಿದ್ಯಾಸಮುಚ್ಚಯ ಜಾಮಿಯಾ ಮರ್ಕಝ್ ಕಲ್ಲಿಕೋಟೆ ಇದರ ಅಧ್ಯಕ್ಷರಾದ ಅಸ್ಸಯ್ಯದ್ ಅಲೀ ಬಾಫಖೀ ತಂಙಳ್ ಕೊಯಿಲಾಂಡಿ ಪ್ರಾರಂಭಿಕ ದುಆ ನಡೆಸಿದರು. ಅಸ್ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಮುಖ ಪ್ರಭಾಷಣಗಾರ ಅಬ್ದುಲ್ಲತೀಫ್ ಸಅದಿ ಪಯಶ್ಶಿಯವರು ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ ಮತ್ತು ಎಸ್.ಎಸ್.ಎಫ್ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಕೆ.ಎಂ ಸಿದ್ದೀಖ್ ಮೋಂಟುಗೋಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿಯವರು ಸಮಾರೋಪ ದುಆಕ್ಕೆ ನೇತೃತ್ವ ನೀಡಿದರು. ಅಸ್ಸಯ್ಯದ್ ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಹಸನ್ ಸಖಾಫಿ ಬೆಳ್ಳಾರೆ, ಖಾಲಿದ್ ಅಮ್ಜದಿ ಅಲ್ ಅಫ್ಲಲಿ, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರೂ ಭಾಗವಹಿಸಿದ್ದಾರೆ. ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಸ್ವಾಗತಿಸಿ, ಅಯ್ಯೂಬ್ ತಂಬಿನಮಕ್ಕಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.