ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ಥಂಭಕ್ಕೆ ಸುಳ್ಯದಿಂದ ಕೊಡಿಮರ ; ಮೆರವಣಿಗೆ ಮೂಲಕ ದೇವಳಕ್ಕೆ

Advt_Headding_Middle
Advt_Headding_Middle

 

ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ಥಂಭಕ್ಕೆ ಅ.೨೯ರಂದು ಶಿವನಿಗೆ ಪ್ರಿಯವಾದ ಆರ್ಧ್ರಾ ನಕ್ಷತ್ರದಂದು ಬೆಳಿಗ್ಗೆ ನೂತನ ಕೊಡಿಮರ ಉದ್ಘಾಟನೆಗೊಂಡು ವೈಭವದ ಮೆರವಣಿಗೆ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಸಾಗುತ್ತಿದೆ.
 ಸುಳ್ಯದ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಅನೆಕ್ಕಾರು ದಿ. ಬಾಬು ಗೌಡ, ಶಿವಮ್ಮ ದಂಪತಿಯವರ ಜಮೀನಿನಲ್ಲಿದ್ದ ಮರವನ್ನು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಸಮರ್ಪಣೆ ಮಾಡಲು ನಿರ್ಧರಿಸಿದಂತೆ ನೂತನ ಧ್ವಜಸ್ಥಂಭದ ಕೊಡಿಮರಕ್ಕೆ ಅ.೨೮ರಂದು ಮರದ ಶಿರಛೇದನ ಮುಹೂರ್ತ ಮಾಡಿ ಸುಮಾರು ೭೦ ಫೀಟ್ ಉದ್ದ, ೮ ಫೀಟ್ ಸುತ್ತಳತೆಯ ಕಿರಳ್‌ಬೋಗಿ ಜಾತಿಯ ಕೊಡಿಮರವನ್ನು ೧೮ ಚಕ್ರಗಳ ಕಂಟೈನರ್ ಲಾರಿಗೆ ಲೋಡ್ ಮಾಡಿ ರಾತ್ರಿ ವೇಳೆ ಪುತ್ತೂರು ದರ್ಬೆ ವೃತ್ತಕ್ಕೆ ತಂದು ನಿಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದೇವಳದ ವ್ಯವಸ್ತಾಪನಾ ಸಮಿತಿ ಸದಸ್ಯರು ಸೇರಿಂದತೆ ಹಲವು ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.