ಚೈತ್ರ ಕುಂದಾಪುರಳನ್ನು ಸುಬ್ರಹ್ಮಣ್ಯಕ್ಕೆ ಕರೆಸಿದ ದುಷ್ಟಶಕ್ತಿಗಳನ್ನು ಓಡಿಸಬೇಕು:ಎನ್.ಎಸ್. ರಾಜೇಶ್

Advt_Headding_Middle
Advt_Headding_Middle

“ಪರವೂರಿನಿಂದ ನಮ್ಮ ಊರಿಗೆ ಬಂದು ಇಲ್ಲಿನವರ ಮೇಲೆ ಹಲ್ಲೆ ನಡೆಸುವವರಿಗೆ ಊರವರು ಯಾರೂ ಬೆಂಬಲ ನೀಡ ಬಾರದು. ಚೈತ್ರ ಕುಂದಾಪುರಳನ್ನು ಇಲ್ಲಿಗೆ ಕರೆಸಿದ ದುಷ್ಟ ಶಕ್ತಿಗಳನ್ನು ಊರಿನಿಂದ ಓಡಿಸಬೇಕು“ ಎಂದು ಗ್ರಾಮ ಪಂಚಾಯತ್ ಸದಸ್ಯ ಊರಿನ ಮುಖಂಡರಲ್ಲೊಬ್ಬರಾದ ಎನ್.ಎಸ್. ರಾಜೇಶ್ ಕರೆ ನೀಡಿದರು.

ಅವರು ಅ.೨೫ರಂದು ಸಂಜೆ ಸುಬ್ರಹ್ಮಣ್ಯದ ರಥಬೀದಿ ಜಂಕ್ಷನ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುzಶಿಸಿ ಮಾತನಾಡಿದರು.
“ಚೈತ್ರ ಕುಂದಾಪುರ ಆಶಿತ್ ಕಲ್ಲಾಜೆಯವರೊಂದಿಗೆ ಫೋನ್‌ನಲ್ಲಿ ಮಾತನಾ ಡುವಾಗಲೂ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದ್ದಾಳೆ. ಈ ರೀತಿ ಮಾತನಾಡುವ ಆಕೆ ಹಿಂದುತ್ವಕ್ಕೆ ಏನು ಕೊಡುಗೆ ಕೊಡಬಹುದು?‘’ ಎಂದು ಪ್ರಶ್ನಿಸಿದ ರಾಜೇಶ್ ಎನ್.ಎಸ್. “ಹಣಕ್ಕಾಗಿ ಬಂದು ಭಾಷಣ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಪದ್ಧತಿಯ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾಳೆ. ಅವಳಿಗೆ ಈಗಾಗಲೇ ದೇವರು ತಕ್ಕ ಶಿಕ್ಷೆಯನ್ನು ಕರುಣಿಸಿದ್ದಾರೆ“ ಎಂದರು.

“ಸರ್ಪ ಸಂಸ್ಕಾರದ ಕುರಿತ ಅವಳ ಭಾಷಣದ ಕುರಿತು ಗುರುಪ್ರಸಾದ್ ಮತ್ತು ಆಶಿತ್ ಕಲ್ಲಾಜೆಯವರು ವಾಟ್ಸಾಪ್ ಮತ್ತು ಫೇಸ್ ಬುಕ್‌ಗಳಲ್ಲಿ ವಿವರಿಸ್ತಾರೆ-ಅದರ ಬಗ್ಗೆ ವಾದ ಮಾಡ್ತಾರೆ – ಅದರ ಬಗ್ಗೆ ಪ್ರತಿವಾದ ಕೂಡಾ ಬಂದಿದೆ. ಒಂದು ತಿಂಗಳು ನಡೆದ ವಾದ ಪ್ರತಿವಾದದ ಬಗ್ಗೆ ಅವಳು ಸೈಬರ್ ಕ್ರೈಂಗೆ ಅಥವಾ ಪೋಲೀಸರಿಗೆ ದೂರು ನೀಡಬಹುದಿತ್ತು. ಗುರುಪ್ರಸಾದ್ ಪಂಜರವರನ್ನು ಕರ್ಕೊಂಡು ಹೋಗಿ ಎನ್‌ಕ್ವಯರಿ ಮಾಡಿಸಬಹುದಿತ್ತು. ಅದು ಬಿಟ್ಟು ಕುಂದಾಪುರದಿಂದ ಗೂಂಡಾಗಳನ್ನು ಕರೆದುಕೊಂಡು ಸುಬ್ರಹ್ಮಣ್ಯಕ್ಕೆ ಬಂದು ಹಲ್ಲೆ ನಡೆಸಿರುವುದನ್ನು ನೋಡಿದರೆ ಅದು ಅವರಿಗೆ ಅಂತ್ಯ“ ಎಂದು ಅವರು ಹೇಳಿದರು .

“ಪವಿತ್ರ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ಕಪ್ಪುಚುಕ್ಕೆ ಬರುವ ಪ್ರಯತ್ನ ಯಾರಾದರೂ ಮಾಡಿದರೆ ಇಡೀ ಊರವರು ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಹೋರಾಡುತ್ತೇವೆ’‘ ಎಂದು ರಾಜೇಶ್ ಹೇಳಿದರು.

ಸ್ವಾಗತ ಭಾಷಣ ಮಾಡಿದ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ರಾವ್ “ಸುಬ್ರಹ್ಮಣ್ಯ ಕ್ಷೇತ್ರದ ಹೆಸರು ಹಾಳು ಮಾಡಲು ಪ್ರಯತ್ನ ಪಟ್ಟವರಿಗೆ ಸುಬ್ರಹ್ಮಣ್ಯ ದೇವರು ಇಲ್ಲಿಗೇ ಕರೆಸಿ ಸನ್ಮಾನ ಮಾಡಿದ್ದಾರೆ“ ಎಂದರು.

ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕೂಜುಗೋಡು ಮಾತನಾಡಿ, “ ಹಿಂದೂ ಸಂಘಟನೆಯವರೇ ಹಿಂದೂ ಸಂಘಟನೆಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆಂದರೆ, ಆಕೆ ಅನ್ಯಕೋಮಿನವರಿಗೆ ಹುಟ್ಟಿರಬೇಕು“ ಎಂದರಲ್ಲದೆ “ಸುಬ್ರಹ್ಮಣ್ಯನೇ ನನ್ನ ಬಾಯಲ್ಲಿ ಹೇಳಿಸಿರಬೇಕು ಎಂಬ ಮಾತನ್ನು ಅವಳು ಹೇಳಿದ್ದಾಳೆ. ನಿನ್ನಂತಹ ಕೆಟ್ಟ ಹೆಂಗಸಿನ ಬಾಯಲ್ಲಿ ಸುಬ್ರಹ್ಮಣ್ಯ ದೇವರು ಬರಲಿಕ್ಕಿಲ್ಲ’‘ ಎಂದರು.

ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ “ಎತ್ತಣ ಕುಂದಾ ಪುರ-ಎತ್ತಣ ಸುಬ್ರಹ್ಮಣ್ಯ? ನೀವು ಹಿಂದುತ್ವದ ಫೈರ್ ಬ್ರಾಂಡ್ ಎನ್ನುತ್ತಾರೆ. ಆದರೆ ಹಿಂದೂ ಯುವಕರ ಮೇಲೆಯೇ ಹಲ್ಲೆ ನಡೆಸುವುದು ನಿಮ್ಮ ಹಿಂದುತ್ವವೇ? ನಿಮ್ಮನ್ನು ಆ ಸುಬ್ಬಪ್ಪ ದೇವರೇ ನೋಡಿಕೊಳ್ಳುತ್ತಾರೆ“ ಎಂದರು.
ಹಿಂದೂ ಕಾರ್ಯಕರ್ತರಾದ ಲಕ್ಷ್ಮೀಶ ಗಬಲಡ್ಕಮಾತನಾಡಿ “ಪಾಪ ವಿಮೋಚನಾ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ಬಂದು ಪಾಪ ಹೆಚ್ಚುಗೊಳಿಸುವ ಕೃತ್ಯ ಮಾಡಬಾರದು. ಚೈತ್ರಳ ಹಿಂದೆ ನಿಂತು ಇದನ್ನೆಲ್ಲ ಮಾಡಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲಾ ಘಟನೆಗಳಿಂದಾಗಿ ಅವಳು ಅಂತರ್ ಪಿಶಾಚಿಯಾಗಿದ್ದಾಳೆ“ ಎಂದರು.

ಕುಕ್ಕೆ ದೇವಳದ ಮಾಜಿ ಟ್ರಸ್ಟಿ ಹಾಗೂ ಹೋರಾಟಗಾರ ಕಿಶೋರ್ ಶಿರಾಡಿ ಮಾತನಾಡಿ “ನಾನು ಚೈತ್ರಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಆಕೆ ತಾಕತ್ತಿದ್ದರೆ ರಜಾಕ್‌ಗೋ, ಸೆಬಾಸ್ಟಿಯನ್ ಗೊ ಹೊಡೆಯಲಿ-ಹಿಂದೂಗಳಿಗೆ ಅಲ್ಲ’‘ ಎಂದರಲ್ಲದೆ, “ಸುಬ್ರಹ್ಮಣ್ಯದ ಜನ ದೇವಸ್ಥಾನದ ಪರವಾಗಿ ಒಗ್ಗಟ್ಟಾಗಿದ್ದಾರೆ. ಈ ಹೋರಾಟ ನಿರಂತರ ನಡೆಯಬೇಕೆಂದು ನಮಗಾರಿಗೂ ಇಲ್ಲ. ಧಾರ್ಮಿಕ ನಾಯಕರುಗಳು ಬಂದು ಮಾತುಕತೆಯಲ್ಲಿ ವಿವಾದ ಇತ್ಯರ್ಥ ಪಡಿಸಬೇಕು. ದೇವಸ್ಥಾನದಲ್ಲಿ ನಡೆಯಬೇಕಾದ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿಗಳನ್ನು ಬೇರೆಯಾರೂ ಅನಧಿಕೃತವಾಗಿ ನಡೆಸಬಾರದು. ಇಲ್ಲಿ ಯಾರೂ ಧಮ್ಕಿ ಕೊಟ್ಟು ಮಾತನಾಡಿಲ್ಲ-ಚಡ್ಡಿ ಬಿಚ್ಚಿ ಓಡಿಸುವ ಮಾತನ್ನಾಡಿಲ್ಲ. ಆದ್ದರಿಂದ ಇದಕ್ಕೆ ಕೌಂಟರ್‌ಆಗಿ ಇನ್ನೊಂದು ಸಭೆಯನ್ನು ಯಾರೂ ಮಾಡಬೇಡಿ. ಧಾರ್ಮಿಕ ಪ್ರವಚನ ಮಾಡಿ. ಮಾರ್ಗದರ್ಶನ ಮಾಡಿ. ದೇವಸ್ಥಾಣಕ್ಕೆ ಧಕ್ಕೆ ಬರುವಂತಹ ಕೆಲಸ ಯಾರಾದರೂಮಾಡಿದರೆ ಜೀವ ಇರುವ ತನಕ ಹೋರಾಡುತ್ತೇವೆ“ ಎಂದರು.

ಮಾಜಿ ಗ್ರಾ.ಪಂ. ಸದಸ್ಯೆ ಲಕ್ಷ್ಮೀ ಸುಬ್ರಹ್ಮಣ್ಯ ಹಾಗೂ ಹಾಲಿ ಗ್ರಾ.ಪಂ. ಸದಸ್ಯ ಹರಿಣಾಕ್ಷಿ ಕಲ್ಲಾಜೆ ಮಾತನಾಡಿ ‘’ಚೈತ್ರ ಕುಂದಾಪುರ ಸುಬ್ರಹ್ಮಣ್ಯಕ್ಕೆ ಬಂದು ಮಾಡಿರುವ ಗೂಂಡಾಗಿರಿಯನ್ನು ಖಂಡಿಸುವುದಾಗಿ ಹೇಳಿದರು. “ಮಹಿಳಾ ಶಕ್ತಿ ಪ್ರದರ್ಶನಕ್ಕೂ ತಾವು ಸಿದ್ಧ“ ವೆಂದರು.

ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ವಿಮಲ ರಂಗಯ್ಯ ಮಾತನಾಡಿ “ಆವಾಜ್ ಹಾಕುವ ರೂಢಿ ಬೆಳೆಸಿಕೊಂಡಿರುವ ಚೈತ್ರಳ ಮೇಲೆ ಸುಬ್ರಹ್ಮಣ್ಯದ ಊರವರು ಯಾರೂಕೈಮಾಡಿಲ್ಲ. ರಕ್ಷಣೆಗಾಗಿ ಇರುವ ಕಾನೂನನ್ನೇ ತಿರುಚಿ ದೂರುಕೊಡುವ ಆಕೆ ಹೆಣ್ಣೇ ಅಲ್ಲ“ ಎಂದರಲ್ಲದೆ, “ಇಲ್ಲಿ ಬಂದು ದೇವರ ವಿರುದ್ಧ ಭಾಷಣ ಮಾಡಿ ಹೋದ ಒಂದೇ ತಿಂಗಳಲ್ಲಿ ದೇವರು ಅವಳನ್ನು ಸುಬ್ರಹ್ಮಣ್ಯಕ್ಕೇ ಕರೆಸಿ ಪರಿಣಾಮ ತೋರಿಸಿ ಕೊಟ್ಟಿದ್ದಾರೆ“ ಎಂದರು.

ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಹೋರಾಟದ ಮುಂದಾಳು ಶಿವರಾಮ ರೈಯವರು “ಗುರುಪ್ರಸಾದ್ ಪಂಜರವರು ಸುಬ್ರಹ್ಮಣ್ಯ ಕ್ಷೇತ್ರದ ಕ್ಷೇತ್ರ ವಿಧಿಯ ಪರವಾಗಿ ಬರೆದರು. ಇದನ್ನು ಆಕೆ ವಿರೋಧಿಸಿದರು. ಇದರಿಂದಾಗಿ ಘಟನೆ ನಡೆದಿದೆ. ನಮ್ಮಲ್ಲಿ ಕೆಲವರು ದೇವಸ್ಥಾನದ ಅನ್ನವನ್ನೇ ತಿಂದು ದೇವಸ್ಥಾನಕ್ಕೇ ಎರಡು ಬಗೆಯುವವರಿದ್ದಾರೆ. ಬೆಂಗಳೂರಿನ ಪ್ರಸನ್ನ ಚೈತ್ರರನ್ನು ಇಲ್ಲಿಗೆ ಕರೆಸಿದ್ದು“ ಎಂದು ಹೇಳಿದರಲ್ಲದೆ “ಇಲ್ಲಿ ಸೇರಿದವರೆಲ್ಲರೂ ಜಾಗ್ರತೆಯಾಗಿರಿ -ಅರುಣ್ ಕುಮಾರ್ ಪುತ್ತಿಲ ನಿಮ್ಮ ಚಡ್ಡಿ ಜಾರಿಸಲು ಬರಬಹುದು. ಅರುಣ್ ಕುಮಾರ್ ಪುತ್ತಿಲ ನಿಜವಾದ ಹಿಂದೂ ನಾಯಕರಾಗಿದ್ದರೆ ವಿವಾದ ಸರಿಪಡಿಸಲು ಪ್ರಯತ್ನಿಸಬೇಕಾಗಿತ್ತು. ಅವರಲ್ಲದಿದ್ದರೆ ಪೀಠಾಧಿಪತಿಗಳಾದರೂ ಇದನ್ನು ಸರಿಪಡಿಸಬೇಕು ಎಂದು ಹೇಳಿದರು.
ಪ್ರತಿಭಟನಾ ಸಭೆ ಮುಗಿದ ಬಳಿಕ ಮೆರವಣಿಗೆಯಲ್ಲಿ ಪೋಲೀಸ್ ಠಾಣೆಗೆ ಹೋದ ನೂರಾರು ಮಂದಿ ಎ.ಎಸ್.ಐ. ಚಂದಪ್ಪರೊಡನೆ ಮನವಿ ನೀಡಿ ’ಚೈತ್ರ ಕುಂದಾಪುರ ಸುಳ್ಳು ದೂರು ನೀಡಿದ್ದು ಅದನ್ನು ಕೂಲಂಕುಶ ಪರಿಶೀಲಿಸದೆ ಕೇಸು ಮಾಡಬಾರದು“ ಎಂದು ಒತ್ತಾಯಿಸಿದರು.

ಚೈತ್ರಾಳನ್ನು ನಾವು ಕರೆದಿಲ್ಲ, ಮಠಕ್ಕೂ ಘಟನೆಗೂ
ಯಾವುದೇ ಸಂಬಂಧವಿಲ್ಲ: ಸ್ವಾಮೀಜಿ ಸ್ಪಷ್ಟನೆ

ಚೈತ್ರ ಹಾಗೂ ಗುರುಪ್ರಸಾದ್ ಪಂಜ ನಡೆದ ಹೊಡೆದಾಟದ ಘಟನೆಗೂ ಸಂಪುಟ ನರಸಿಂಹ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮೀ ಜಿಯವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಅ.೨೪ರಂದು ಚೈತ್ರಾ ಸುಬ್ರ ಹ್ಮಣ್ಯಕ್ಕೆ ಬರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇದು ಅವರವರ ವೈಯಕ್ತಿಕ ಹೇಳಿಕೆಗಳಿಂದ ಉಂಟಾದ ಪರಿಣಾಮ. ಮಠಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠಗಳೆರಡೂ ತಮ್ಮಷ್ಟಕ್ಕೆ ಕೆಲಸ ನಿರ್ವ ಹಿಸುತ್ತಿವೆ. ಈ ಹಿಂದೆ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಮಠದ ಭಕ್ತ ವೃಂದ ನಡೆಸಿದ ಸುಧರ್ಮ ಸಭೆಗೆ ಚೈತ್ರಾಳನ್ನು ಕರೆಸಿದ್ದು ಕಾರ್ಯಕ್ರಮ ಆಯೋಜಕರೇ ಹೊರತು ಮಠವಲ್ಲ. ಕಾರ್ಯಕ್ರಮ ಮಠದ ಆವರಣದಲ್ಲಿ ನಡೆದದ್ದು ಹೊರತು ಪಡಿಸಿದರೆ ಮಠಕ್ಕೂ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನ ಹಾಗೂ ಮಠಗಳೆರಡೂ ತಮ್ಮ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದು ಚೈತ್ರಾ ಕುಂದಾ ಪುರ ಹಾಗೂ ಗುರುಪ್ರಸಾದ್‌ರ ವೈಯಕ್ತಿಕ ಹೇಳಿಕೆಗಳನ್ನು ಮಠದ ವಿಚಾರಕ್ಕೆ ತಳುಕು ಹಾಕುವುದು ಸರಿಯಲ್ಲ ಎಂದಿದ್ದಾರೆ. ಮಠ ಮತ್ತು ದೇವಸ್ಥಾನಗಳ ಮದ್ಯೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ, ತಿಕ್ಕಾಟ ತರುವ ಕೆಲಸವನ್ನು ಮಾಡಿರು ವುದು ಸರಿಯಲ್ಲ. ಇಂತಹ ಘಟನೆ ಕ್ಷೇತ್ರಕ್ಕೆ ಶೋಭೆ ತರುವುದಿಲ್ಲ. ವೈಯಕ್ತಿಕ ಹೇಳಿಕೆಗಳು ಇಷ್ಟೊಂದು
ಮುಂದುವರಿದಾಗ ಮುಖಂಡರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿ ಸಬಹುದಿತ್ತು. ಈ ರೀತಿಯ ಘಟನೆ ಅನಿರೀಕ್ಷಿತ ಮತ್ತು ಕ್ಷೇತ್ರಕ್ಕೆ ಕಳಂಕ ತರುವಂತದ್ದು ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಫೇಸ್‌ಬುಕ್ ಚರ್ಚೆಯಲ್ಲಿ ನಾವಿಲ್ಲ : ಮುಂಡೋಡಿ

ಸುಬ್ರಹ್ಮಣ್ಯದಲ್ಲಿ ನಡೆದಿರುವ ಹೊಡೆದಾಟದ ಘಟನೆಗೂ ದೇವಸ್ಥಾನಕ್ಕೂ ಸಂಬಂಧವಿಲ್ಲ. ದೇವಸ್ಥಾನದ ಸೇವಾ ವಿಧಾನದ ಬಗ್ಗೆ ಚೈತ್ರ ಕುಂದಾಪುರ ಆಡಿದ ಮಾತುಗಳಿಗೆ ನಮ್ಮ ವಿರೋಧ ವಿದೆ. ಆದರೆ ಫೇಸ್‌ಬುಕ್ ಚರ್ಚೆಯಲ್ಲಿ ನಾವಿಲ್ಲ. ದೇವಳದ ವಿಚಾರವಾಗಿ ಚೈತ್ರ ಆಡಿದ ಮಾತುಗಳ ಬಗೆಗೆ ದೇವರೇ ಫಲ ಕರುಣಿಸುತ್ತಾರೆ ಎಂಬ ಅಭಿಪ್ರಾಯವನ್ನು ನಾವು ಮೊದಲಿ ನಿಂದಲೂ ತಳೆದಿದ್ದೆವು. ಈಗಲೂ ನಮ್ಮ ನಿಲುವು ಅದೇ“ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

————
ಇಲ್ಲದವರ ಮೇಲೆ ದೂರು
ಈ ಹೊಡೆದಾಟದ ಪ್ರಕರಣ ನಡೆದ ಸಂದರ್ಭದಲ್ಲಿ ಹೋರಾಟಗಾರ ಕಿಶೋರ್ ಶಿರಾಡಿ ಅಲ್ಲಿ ಇರಲಿಲ್ಲ. ಯಾರದೋ ಚಿತಾವಣೆಯಲ್ಲಿ ಇವರ ಹೆಸರನ್ನು ಚೈತ್ರಾ ಕುಂದಾಪುರ ಸೇರಿಸಿದ್ದಾರೆ ಎಂದು ಸುಬ್ರಹ್ಮಣ್ಯದ ಹಲವರು ಹೇಳುತ್ತಿದ್ದಾರೆ.
ದುಷ್ಯಂತ ಗೌಡ ಮತ್ತು ತೀರ್ಥರಾಮ ಎಂಬವರು ಕೂಡಾ ಸ್ಥಳದಲ್ಲಿ ಇರಲಿಲ್ಲವೆಂದು ಹೇಳಲಾಗುತ್ತಿದೆ. ಫೇಸ್ ಬುಕ್‌ನಲ್ಲಿ ಚೈತ್ರಾ ವಿರುದ್ಧ ಕಮೆಂಟ್ ಹಾಕುವುದರಲ್ಲಿ ಅವರಿಬ್ಬರೂ ಇರುವ ಕಾರಣ ಅವರ ಹೆಸರು ಸೇರಿಸಿರಬಹುದು ಎಂದು ಹೇಳಲಾಗುತ್ತಿದೆ.

ವೈಯಕ್ತಿಕ ನಿಂದನೆಗಾಗಿ ಕೇಳ ಬಂದೆ : ಚೈತ್ರಾ

ಸರ್ಪಸಂಸ್ಕಾರವನ್ನು ಸಾಮೂಹಿಕವಾಗಿ ಮಾಡುವುದು ಶಾಸ್ತ್ರ ಬದ್ಧವಲ್ಲ ಎಂಬ ಕಾರಣಕ್ಕಾಗಿ, ಮಠದ ಸುಧರ್ಮ ಸಭೆಯಲ್ಲಿ ನಾನು ಅದರ ಬಗ್ಗೆ ಮಾತನಾಡಿದ್ದೆ. ನಂತರ ಅದರ ಬಗ್ಗೆ ಪರವಿರೋಧ ಚರ್ಚೆಗಳು ಬಂದವು. ಅದರ ಬಗ್ಗೆ ನನ್ನ ಆಕ್ಷೇಪ ಇಲ್ಲ. ಆದರೆ ನಾನು ೫೦೦ ರೂ ಕೊಟ್ಟರೆ ಮುಸ್ಲಿಮರ ಜತೆಗೆ ಹೋಗುತ್ತೇನೆ. ಯಾರ ಯಾರ ಒಟ್ಟಿಗೆ ಮಲಗುವವಳು -ಸೂಳೆ ಎಂದು ಮುಂತಾಗಿ ಗುರುಪ್ರಸಾದ್ ಪಂಜ ಗ್ರೂಪಲ್ಲಿ ಹಾಕತೊಡಗಿದ್ದರಿಂದ ಸಹಿಸಲಾರದೆ ನಾನು ಕೇಳಬೇಕೆಂದು ಗುರುಪ್ರಸಾದ್‌ಗೆ ಫೋನ್ ಮಾಡಿದ್ದೆ. ಮಠದ ಸ್ವಾಮೀಜಿ ಉಪವಾಸ ಕೂತಿದ್ದಾಗ ನನಗೆ ಬಂದು ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾನು ಸುಬ್ರಹ್ಮಣ್ಯದ ಮಠ ಕ್ಕೆಂದು ಬಂದಿದ್ದೆ. ಬಂದಿರುವಾಗಲೇ ಈ ಫೇಸ್‌ಬುಕ್‌ಗಳ ವಿಚಾ ರವನ್ನು ಮುಗಿಸಿಬಿಡೋಣ ಎಂದು ಗುರುಪ್ರಸಾದ್‌ಗೆ ಫೋನ್ ಮಾಡಿದ್ದೆ. ಆತ ರಿಸೀವ್ ಮಾಡದೆ ಸಂಜೆ ೪ ಗಂಟೆಗೆ ಆಶಿತ್ ಕಲ್ಲಾಜೆ ನನ್ನ ಫೋನ್‌ಗೆ ಕರೆ ಮಾಡಿದ ನನಗೆ ಅವಾಚ್ಯವಾಗಿ ಆತ ಬೈದು ಬರಲು ಹೇಳಿದ. ಅದಕ್ಕಾಗಿ ನಾನು ಪಂಜಕ್ಕೆ ಹೋಗಿ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಬಂದೆ. ನನ್ನ ಚೈನ್ ಕದ್ದಿದ್ದಾರೆ ಎಂದು ಚೈತ್ರಾ ಕುಂದಾಪುರ ಅ. ೨೫ರಂದು ಬೆಳಿಗ್ಗೆ ಸುಳ್ಯ ಆಸ್ಪತ್ರೆಯಲ್ಲಿ ಸುದ್ದಿಯೊಂದಿಗೆ ಪ್ರತಿಕ್ರಿಯಿಸಿದರು.

ನಾವು ನಿಂದಿಸಿಲ್ಲ : ಗುರುಪ್ರಸಾದ್

ನಾನು ಆಕೆಯ ಬಗ್ಗೆ ೫೦೦ ರೂ.ಗೆ ಬರುವವಳು ಎಂಬ ಕಮೆಂಟ್ ಹಾಕಿಲ್ಲ. ಆಕೆ ಆಶಿತ್‌ನೊಡನೆ ಪೋನ್‌ನಲ್ಲಿ ಮಾತಾಡುವಾಗ ನನ್ನ ಬಗ್ಗೆ ಹಾಗೆ ಕಮೆಂಟ್ ಹಾಕಿದ್ದೀರಿ? ಎಂದು ಹೇಳುತ್ತಿದ್ದಳು. ನಮ್ಮ ಬಗ್ಗೆ ತಪ್ಪು ಭಾವನೆ ಬರಲಿ ಎಂಬ ಕಾರಣಕ್ಕಾಗಿ ಅವಳು ಹಾಗೆ ಹೇಳಿರಬಹುದು? ಎಂದು ಗುರುಪ್ರಸಾದ್ ಪಂಜ ಅ. ೨೫ರಂದು ಬೆಳಿಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಸುದ್ದಿಯೊಂದಿಗೆ ಹೇಳಿದರು.
ನನಗೆ ಮಧ್ಯಾಹ್ನವೇ ಆನ್‌ನೋನ್ ನಂಬರಿಂದ ಕರೆಬರುತ್ತಿತ್ತು. ಆದರೆ ನಾನು ಮೆಶಿನ್ ರಿಪೇರಿಯಲ್ಲಿದ್ದು ದರಿಂದ ರಿಸೀವ್ ಮಾಡಲಾಗಿರಲಿಲ್ಲ. ಸಂಜೆ ಆಶಿತ್‌ನೊಡನೆ ಆ ನಂಬರಿಗೆ ಕರೆ ಮಾಡಲು ಹೇಳಿದೆ. ಆದ್ದರಿಂದ ಆಶಿತ್ ಆಕೆಗೆ ಕರೆ ಮಾಡಿದ್ದರು“ ಎಂದು ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಚೈತ್ರಾ ಸಂಗಡಿಗರ ಜತೆ ಮಾರಕಾಸ್ತ್ರ ಇತ್ತೇ….?
ಸುಬ್ರಹ್ಮಣ್ಯಕ್ಕೆ ಬಂದು ಗುರುಪ್ರಸಾದ್ ಪಂಜರವರ ಮೇಲೆ ಹಲ್ಲೆ ನಡೆಸಿದ ಚೈತ್ರಾ ಕುಂದಾಪುರ ಮತ್ತು ಸಂಗಡಿಗರಲ್ಲಿ ಮಾರಕಾಸ್ತ್ರಗಳಿದ್ದವು. ರಾಡ್‌ನಿಂದ ಹೊಡೆದು ಗುರುಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಭಾರೀ ಪ್ರಚಾರವಾಗಿದೆ. ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ. ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿಯೂ ಇದೇ ರೀತಿ ಪ್ರಸಾರವಾಗಿದೆ. ಆದರೆ ಇನೋವಾ ಕಾರಿಂದ ಇಳಿದು ವಾಗ್ವಾದ ನಡೆಸುತ್ತಿರುವ ಸಂದರ್ಭದಲ್ಲಿ ಅವರ ಕೈಯಲ್ಲಿ ಮಾರಕಾಸ್ತ್ರಗಳು ಇರುವುದು ಘಟನೆಯ ವೀಡಿಯೋದಲ್ಲಿ ಕಂಡು ಬರುವುದಿಲ್ಲ. ಚೈತ್ರರವರು ಬಂದಿದ್ದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಅದರಲ್ಲಿ ಮಾರಕಾಸ್ತ್ರಗಳು ಇರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಯಕರ ಭೇಟಿ: ಗುರುಪ್ರಸಾದ್ ಪಂಜ ಸುಳ್ಯ ಆಸ್ಪತ್ರೆಗೆ ದಾಖಲಾಗಲು ಬರುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಕೆಪಿಸಿಸಿ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಎಂ. ವೆಂಕಪ್ಪ ಗೌಡರು, ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಗಂಗಾಧರರೊಡನೆ ಆಸ್ಪತ್ರೆಗೆ ಬಂದು ಗುರುಪ್ರಸಾದ್‌ರೊಡನೆ ಮಾತನಾಡಿದರು. ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಪ್ರಮುಖ್ ಜಯಂತ ಮಡಪ್ಪಾಡಿ ಆಸ್ಪತ್ರೆಗೆ ಬಂದಿದ್ದರು. ಮರುದಿನ ಕೆಪಿಸಿಸಿ ಕಾರ್ಯದರ್ಶಿ ಭರತ ಮುಂಡೋಡಿಯವರು ಆಸ್ಪತ್ರೆಗೆ ಬಂದು ಭೇಟಿಯಾದರೆಂದು ತಿಳಿದುಬಂದಿದೆ. ಈಗ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಪ್ರಸಾದ್ ರನ್ನು ಸುಬ್ರಹ್ಮಣ್ಯ-ಪಂಜ ಪರಿಸರದ ನೂರಾರು ಜನ ಹೋಗಿ ಮಾತನಾಡಿ ಬರುತ್ತಿದ್ದಾರೆ.

ಗುರು ತಂಡದ ಮೇಲೆ ಕೇಸು
ಗುರುಪ್ರಸಾದ್ ಪಂಜರವರ ದೂರಿನ ಮೇರೆಗೆ ಚೈತ್ರಾ ಕುಂದಾಪುರ ಮತ್ತು ತಂಡದ ಮೇಲೆ ಕೇಸುದಾಖಲಾಗಿರುವಂತೆಯೇ, ಚೈತ್ರಾ ಕುಂದಾಪುರರವರ ದೂರಿನ ಮೇರೆಗೆ ಗುರುಪ್ರಸಾದ್ ಪಂಜ ಮತ್ತು ಇತರರ ಮೇಲೆ ದೂರು ದಾಖಲಾಗಿದೆ. ಮಹಿಳೆಯನ್ನು ಮುಟ್ಟಿ ಹಲ್ಲೆ ನಡೆಸಿದುದರ ಸಂಬಂಧ ಮಾನಭಂಗ ಯತ್ನದ ಸೆಕ್ಷನ್೩೫೪ ಹಾಗೂ ಚೈನು ಎಳೆದುಕೊಂಡುದುದರ ಸಂಬಂಧ ದರೋಡೆಯ ಸೆಕ್ಷನ್ ೩೯೨ ಸೇರಿದಂತೆ ೫೦೬, ೧೦೩, ೧೦೭ ಮತ್ತು ೧೪೯ರ ಪ್ರಕಾರ ಕೇಸು ದಾಖಲಾಗಿದ್ದು, ಗುರುಪ್ರಸಾದ್ ಪಂಜ, ಆಶಿತ್ ಕಲ್ಲಾಜೆ, ದುಷ್ಯಂತ್ ಗೌಡ, ತೀರ್ಥರಾಮ ಹೆಚ್.ಎನ್. ಮತ್ತು ಕಿಶೋರ್ ಶಿರಾಡಿ ಎಂಬವರು ಹಾಗೂ ಇತರರು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ. ಪ್ರಕರಣದ ಸಂದರ್ಭ ಗುರುಪ್ರಸಾದ್ ಜತೆಗಿದ್ದ ಆಶಿತ್ ಕಲ್ಲಾಜೆ ಬಳಿಕ ಸುಳ್ಯ ಆಸ್ಪತ್ರೆಗೆ ಬಂದಾಗಲೂ ಜತೆಗಿದ್ದರು. ಕೌಂಟರ್ ಕೇಸು ಆಗಿ ಪೊಲೀಸರು ಎರಡೂ ಕಡೆಯವರನ್ನು ಬಂಧಿಸುವ ಸಾಧ್ಯತೆ ಇದೆಯೆಂದು ತಿಳಿದು ಆಶಿತ್ ಆಸ್ಪತ್ರೆಯಲ್ಲಿ ನಿಲ್ಲದೆ ತೆರಳಿರುವುದಾಗಿ ತಿಳಿದುಬಂದಿದೆ. ಈಗ ಅವರೆಲ್ಲ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ.
ಚೈತ್ರಾ ಮತ್ತು ಸಂಗಡಿಗರು ಸುಬ್ರಹ್ಮಣ್ಯಕ್ಕೆ ಬಂದಿದ್ದ ಕೆ.ಎ.೨೦ ಎನ್. ೨೯೯೪ ನಂಬರ್‌ನ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚೈತ್ರಾ ಸಂಗಡಿಗರಿಗೆ ನ್ಯಾಯಾಂಗ ಬಂಧನ,
ಗುರುಪ್ರಸಾದ್ ಪಂಜ ಮಂಗಳೂರಿಗೆ ಮತ್ತು ಪುತ್ತೂರಿಗೆ
ಅ. ೨೪ರಂದು ರಾತ್ರಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗುರುಪ್ರಸಾದ್ ಪಂಜರವರನ್ನು ಮರುದಿನ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು, ತಲೆಯ ಏಟಿನ ಸಿಟಿ ಸ್ಕ್ಯಾನ್ ಮಾಡಲಾಯಿತು. ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ವಾಪಸ್ ಪುತ್ತೂರಿಗೆ ಬಂದು ಹಿತ ಆಸ್ಪತ್ರೆಯಲ್ಲಿ ಗುರುಪ್ರಸಾದ್ ದಾಖಲಾಗಿದ್ದಾರೆ. 

 
ಸಂಜೆ ಚೈತ್ರಾ ಕುಂದಾಪುರ ಮತ್ತು ಅವರ ಸಂಗಡಿಗರಾದ ಹರೀಶ್ ನಾಯಕ್, ಸುದಿನ ಪೂಜಾರಿ, ಹರೀಶ ಖಾರ್ವಿ, ನಿಖಿಲ್, ವಿನಯ ಮತ್ತು ಮಣಿಕಂಠ (ಎಲ್ಲರೂ ಕುಂದಾಪುರದವರು) ರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಲಾಯಿತು. ಅವರ ಮೇಲೆ ಕೊಲೆಯತ್ನದ ಸೆಕ್ಷನ್ ೩೦೭ ಸೇರಿದಂತೆ ೧೦೪, ೧೦೩, ೧೦೭, ೩೨೩, ೪೪೮,೫೦೪,೫೦೬ಗಳನ್ನು ಹಾಕಿರುವ ಕಾರಣ ಜಾಮೀನು ದೊರೆಯದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲ್ಪಟ್ಟರು. ಅವರನ್ನು ರಾತ್ರಿಯೇ ಮಂಗಳೂರಿನ ಸಬ್‌ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ಮರುದಿನ ಅವರಿಗೆ ಜ್ವರ ಬಂದುದರಿಂದ ವೆನ್‌ಲಾಕ್ ಆಸ್ಪತ್ರೆಯ ಕೈದಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಪರ -ವಿರೋಧ ಚರ್ಚೆ
ಸುಬ್ರಹ್ಮಣ್ಯದಲ್ಲಿ ನಡೆದ ಘರ್ಷಣೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಭಾರೀ ಪ್ರಮಾಣದಲ್ಲಿ ನಡೆಯತೊಡಗಿದೆ. ಸುಬ್ರಹ್ಮಣ್ಯಕ್ಕೆ ಬಂದು ಹಲ್ಲೆ ನಡೆಸಿದ ಚೈತ್ರ ಕುಂದಾಪುರರವರನ್ನು ಕಟುವಾಗಿ ಟೀಕಿಸಿ ಹಲವಾರು ಮಂದಿ ಕಮೆಂಟ್ ಹಾಕುತ್ತಿದ್ದರೆ, ಚೈತ್ರ ದುರ್ಗೆ, ಹೆಣ್ಣು ಮಕ್ಕಳಿಗೆ ನಿಂದನೆ ಸರಿಯಲ್ಲ ಮೊದಲಾದ ಕಮೆಂಟ್‌ಗಳನ್ನು ಚೈತ್ರ ಪರ ಇರುವವರು ಹಾಕ ತೊಡಗಿದ್ದಾರೆ.
ಈ ಮಧ್ಯೆ ಮಂಗಳೂರು ಮುಸ್ಲಿಂ ಪೇಜ್ ಎಂಬ ಫೇಸ್‌ಬುಕ್ ಖಾತೆ ಯಲ್ಲಿ ಚೈತ್ರ ಕುಂದಾಫುರರವರ ಬಗ್ಗೆ ಅವಾಚ್ಯವಾಗಿ ಕಮೆಂಟ್‌ಗಳು ಹರಿದಾಡತೊಡಗಿವೆ.

ಸಹಕರಿಸಿದ ಸ್ಥಳೀಯ ಮಹಿಳೆಯರಿಗೆ ಧಿಕ್ಕಾರ
ಚೈತ್ರ ಕುಂದಾಪುರ ಮತ್ತು ಸಂಗಡಿಗರು ಗುರುಪ್ರಸಾದ್ ಪಂಜರೊಡನೆ ಫೇಸ್ ಬುಕ್ ಕಮೆಂಟ್‌ಗಳ ಬಗ್ಗೆ ಪ್ರಶ್ನಿಸಲು ಬಂದಾಗ, ಅವರ ಜತೆಗೆ ಸ್ಥಳೀಯ ಇಬ್ಬರು ಮಹಿಳೆಯರಿದ್ದರು. ಇತ್ತಂಡಗಳ ಮಧ್ಯೆ ಹೊಕೈ ನಡೆದಾಗ ಆ ಮಹಿಳೆಯರು ಚೈತ್ರರನ್ನು ಪೋಲೀಸ್ ಠಾಣೆಗೆ ಕರೆದೊಯ್ದ ರಕ್ಷಿಸಲು ಪ್ರಯತ್ನಿಸಿದ್ದಾರೆಂದು ಪ್ರತಿಭಟನಾ ಸಭೆಯಲ್ಲಿ ಕೆಲವು ಭಾಷಣಕಾರರು ಹೇಳಿ ಖಂಡಿಸಿದರಲ್ಲದೆ, ಕೆಲವರು ಅವರನ್ನು ಖಂಡಿಸಿದರು.

ಮೊಬೈಲ್ ವಶ
ಚೈತ್ರಾ ಮತ್ತು ಇತರರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾಗ ಸುಳ್ಯ ಎಸ್.ಐ. ಮಂಜುನಾಥರವರು ಚೈತ್ರಾರ ಮೊಬೈಲನ್ನು ಪಡೆದು ಕೊಂಡರು. ಅದನ್ನವರು ಹಿಂತಿರುಗಿ ಕೇಳಿದಾಗ ಪರಿಶೀಲನೆಗಾಗಿ ಮೊಬೈಲ್ ಬೇಕಾಗಿದೆ ಎಂದು ಎಸ.ಐ. ಹೇಳಿದರೆನ್ನಲಾಗಿದೆ. ಈ ಸಂದರ್ಭ ಚೈತ್ರಾರವರು ಎಸ್.ಐ.ಯೊಡನೆ ಮಾತಿನ ಚಕಮಕಿ ನಡೆಸಿದರು. ನನ್ನ ಮೊಬೈಲ್‌ನಲ್ಲಿ ಹುಡುಗಿಯರ ಫೊಟೋಗಳಿವೆ. ಅದನ್ನು ನಿಮ್ಮಲ್ಲಿ ಯಾರಾದರೂ ದುರುಪಯೋಗ ಮಾಡುವುದಿಲ್ಲವೆಂದು ಯಾವ ಗ್ಯಾರಂಟಿ? ಮೊಬೈಲ್ ಹಿಂತಿರುಗಿ ಕೊಡಿ ನಾನದಕ್ಕೆ ಲಾಕ್ ಮಾಡಿಕೊಡುತ್ತೇನೆ ಎಂದು ಚೈತ್ರಾ ಹೇಳಿದಾಗ ಎಸ.ಐ. ಕೊಡಲು ನಿರಾಕರಿಸಿದರು. ಪರಿಶೀಲನೆಯ ಬಳಿಕ ಕೊಡುವುದಾಗಿ ಹೇಳಿ ಸಮಾಧಾನಿಸಿದರು.

ಸುಬ್ರಹ್ಮಣ್ಯ ಘಟನೆ ಚಿತ್ರಿಕರಣ : ದೃಶ್ಯ ಮಾಧ್ಯಮ ವರದಿಗಾರನಿಗೆ ಹಲ್ಲೆ ಯತ್ನ, ಬೆದರಿಕೆ ದೂರು ದಾಖಲು
ಸುಬ್ರಹ್ಮಣ್ಯದಲ್ಲಿ ಮಾತಿನ ಚಕಮಕಿಯ ವೇಳೆ ಚಿತ್ರಿಕರಣ ಮಾಡಿದ ಕಹಳೆ ನ್ಯೂಸ್ ದೃಶ್ಯ ಮಾಧ್ಯಮದ ವರದಿಗಾರನಿಗೆ ಹಲ್ಲೆಗೆ ಯತ್ನ ಫೋನ್ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ ಕುರಿತು ಪುತ್ತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಬ್ರಹ್ಮಣ್ಯ ಕುಲ್ಕುಂದ ದಿ| ಕೃಷ್ಣ ಭಟ್ ಎಸ್ ರವರ ಪುತ್ರ ಶಿವಕುಮಾರ್ ಎಸ್.ಕೆ. (೩೫) ದೂರು ದಾರರು. ನಾನು ಕಹಳೆ ನ್ಯುಸ್ ಪುತ್ತೂರು ದೃಶ್ಯ ಮಾಧ್ಯಮದ ವರದಿಗಾರನಾಗಿ ಉದ್ಯೋಗ ಮಾಡುತ್ತಿದ್ದು ಸುಬ್ರಹ್ಮಣ್ಯದಲ್ಲಿ ಅ.೨೪ರಂದು ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ಇವರ ಗುಂಪಿನ ಒಳಗೆ ಸಾರ್ವಜನಿಕ ಸ್ಥಳದಲ್ಲಿ ನಡೆದ ಘರ್ಷಣೆಯನ್ನು ಚಿತ್ರೀಕರಣವನ್ನು ತನ್ನ ಮಾಧ್ಯಮದ ಸೂಚನೆಯಂತೆ ನಡೆಸಿದ್ದಲ್ಲದೆ ನಾನು ಕಳುಹಿಸಿದ ಚಿತ್ರೀಕರಣ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಅಲ್ಲಿ ಸ್ಥಳೀಯವಾಗಿದ್ದ ಕಟ್ಟೆಮನೆ ಸತೀಶ್ ಕೂಜುಗೋಡು ಎಂಬವರು ಚಿತ್ರಿಕರಣ ಮಾಡಿದ್ದಕ್ಕೆ ಮುನಿಸಿಕೊಂಡು ನನಗೆ ಹಲ್ಲೆಗೆ ಯತ್ನಿಸಿದ್ದಾರೆ. ಅಕ್ಟೋಬರ್ ೨೫ರಂದು ನಾನು ಪುತ್ತೂರು ಕಚೇರಿಯಲ್ಲಿದ್ದ ಸಮಯದಲ್ಲಿ ಸಂಜೆ ನನ್ನ ಮೊಬೈಲಿಗೆ ಕರೆ ಮಾಡಿ ಘಟನಾ ಸ್ಥಳದ ವರದಿ ಕುರಿತು ಆಕ್ಷೇಪ ವ್ಯಕ್ತ ಪಡಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿವಕುಮಾರ್ ಅವರು ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೋಲೀಸರು ಐಪಿಸಿ ಸೆಕ್ಷನ್ ೧೮೬೦ (ಯು/ಎಸ್ ೫೦೭) ಐಟಿ ಕಾಯ್ದೆ ೨೦೦೮ (ಯು/ಎಸ್ ೬೬(ಡಿ) ೬೭) ರಡಿ ದೂರು ದಾಖಲಿಸಿಕೊಂಡಿದ್ದಾರೆ.

ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತಿಭಟನೆ
ಸುಬ್ರಹ್ಮಣ್ಯ ಪೇಟೆಯ ಮುಖ್ಯ ಬೀದಿಯಲ್ಲಿ ಸಾಗಿ ಪ್ರತೀ ಅಂಗಡಿ ಹೋಟೆಲ್‌ನವರಿಗೆ ಮರುದಿನ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೫ ಗಂಟೆಯ ವರೆಗೆ ಬಂದ್ ಮಾಡಿ ದೇವಸ್ಥಾನದ ಪರವಾಗಿ ಊರವರು ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಅದರಂತೆ ಮರುದಿನ ಬೆಳಿಗ್ಗೆ ಯಿಂದಲೇ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರದಿಂದ ದೇವಳದ ವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ಪೂರ್ಣವಾಗಿ ಮುಚ್ಚಿದ್ದವು. ಬೆಳಿಗ್ಗೆ ೧೧ ಗಂಟೆ ವೇಳೆಗೆ ಸುಮಾರು ೫೦೦ರಷ್ಟು ಊರವರು ಸೇರಿ ಭಕ್ತರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ವರ್ತಕರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಮೆರವಣಿಗೆ ನಡೆ ಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದೆದುರಿನಿಂದ ಹೊರಟ ಮೆರವಣಿಗೆ ಕುಮಾರಧಾರದ ವರೆಗೆ ಸಾಗಿ -ಅಲ್ಲಿಂದ ಹಿಂತಿರುಗಿ ದೇವಳದ ಸಮೀಪ ಅಂಗಡಿಗುಡ್ಡೆಯಲ್ಲಿರುವ ಆದಿಶೇಷ ಅತಿಥಿಗೃಹದ ಬಳಿ ಮುಕ್ತಾಯ ಗೊಂಡಿತು.
ಬಳಿಕ ಸಂಜೆ ೪ಗಂಟೆಗೆ ಮತ್ತೆ ಆದಿಶೇಷ ಅತಿಥಿಗೃಹ ದ ಬಳಿಸೇರಿದ ಊರವರು ಅಲ್ಲಿಂದ ಮೆರವಣಿಗೆಯಲ್ಲಿ ದೇವಳದೆದುರಿಗೆ ಬಂದು ರಥಬೀದಿಯ ಜಂಕ್ಷನ್ ಬಳಿ ಪ್ರತಿಭಟನಾ ಸಭೆ ನಡೆಸಿದರು. ಸುಮಾರು ಒಂದು ಸಾವಿರ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಗಣನೀಯ ಸಂಖ್ಯೆ ಯಲ್ಲಿ ಇದ್ದುದು ಗಮನ ಸಳೆಯಿತು.

ಪ್ರತಿಭಟನಾಕಾರರಲ್ಲಿ ಕೆಲವು ಯುವಕರು ಗುರುಪ್ರಸಾದ್ ಪಂಜರವರ ಫೋಟೊ ಪ್ರಿಂಟ್ ತೆಗೆಸಿದ ಪೋಸ್ಟರ್‌ಗಳನ್ನು ಹಿಡಿದುಕೊಂಡು “ಐ ಆಮ್ ವಿದ್ ಗುರು“, “ವಿ ಸಪೋರ್ಟ್ ಗುರುಪ್ರಸಾದ್ ಪಂಜ“ ಎಂಬ ಬರಹಗಳನ್ನು ಪ್ರದರ್ಶಿಸುತ್ತಿದ್ದರು. ಚೈತ್ರ ಕುಂದಾಪುರ, ಮಠದ ಪರ ವಾಗಿ, ದೇವಳದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಮಲೆ ಕುಡಿಯರ ಮುಂದಾಳು ಭಾಸ್ಕರ ಬೆಂಡೋಡಿ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.