ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕಿಶೋರ್ ಶಿರಾಡಿ ಮೇಲೆ ಕೇಸು ಖಂಡಿಸಿ ಮಲೆನಾಡು ಹಿತ ರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕಾಶಿಕಟ್ಟೆ ಬಳಿ ಚೈತ್ರಾ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ಇತ್ತಂಡಗಳ ನಡುವೆ ನಡೆದ ಜಟಾಪಟಿ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಇಲ್ಲದ ಮಲೆನಾಡು ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರನ್ನು ಸಿಲುಕಿಸಿ ಅವರನ್ನು ಕೇಸ್‌ನ ಒಳಕ್ಕೆ ತಂದಿರುವುದನ್ನು ಖಂಡಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು ಹಲ್ಲೆ ಸಂಧರ್ಭ ಸ್ಥಳದಲ್ಲಿ ಉಪಸ್ಥಿತರಿಲ್ಲದ ಕಿಶೋರ್ ಶಿರಾಡಿ ಅವರನ್ನು ಪ್ರಕರಣದಲ್ಲಿ ಸೇರಿಸಿರುವದು ಕಂಡು ಬಂದಿದ್ದು ಇದರ ಹಿಂದೆ ಷಡ್ಯಂತ್ರ ಇದೆ ಹಾಗೂ ಘಟನೆ ಸಂಧರ್ಭ ತಾವಿಬ್ಬರೂ ಗುಂಡ್ಯದಲ್ಲಿ ಇದ್ದುದಾಗಿ ವೇದಿಕೆಯ ಪ್ರಮುಖ ದಾಮೋದರ ಗುಂಡ್ಯ ತಿಳಿಸಿದರು.

ಮೊನ್ನೆ ನಡೆದ ಘಟನೆಗೂ ವೇದಿಕೆಗೂ ಯಾವುದೇ ಸಂಬಂಧವಿಲ್ಲ. ಚೈತ್ರಾ ಕುಂದಾಪುರವರಿಗೆ ಕಿಶೋರ್ ಶಿರಾಡಿಯವರ ಮುಖ ಪರಿಚಯವಾಗಲಿ, ಪೋನ್ ನಲ್ಲಿ, ಸಮಾಜಿಕ ಜಾಲತಾಣದಲ್ಲಾಗಲಿ ಚರ್ಚಿಸಿದ್ದಾಗಲಿ ಇಲ್ಲ. ಆದರೂ ಅವರ ಹೆಸರನ್ನು ಸೇರಿಸಿರುವುದು ಷಡ್ಯಂತ್ರವಲ್ಲದೆ ಇನ್ನೇನೂ ಇಲ್ಲ. ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಕಿಶೋರ್ ಮೇಲಿದ್ದ ಪ್ರಕರಣ ಕೈ ಬಿಡಬೇಕಾಗಿ ಆಗ್ರಹಿಸುತ್ತದೆ . ಮತ್ತೂ ಕೇಸಿನಲ್ಲಿ ಮುಂದುವರೆಸಿದರೆ ಉಗ್ರವಾಗಿ ಪ್ರತಿಭಟಿಸುವುದಾಗಿ ತಿಳಿದ್ದಾರೆ . ಪತ್ರಿಕಾ ಗೋಷ್ಠಿಯಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ‌ಅಚ್ಯುತ ಕೆ, ಅಶೋಕ ಆಚಾರ್ಯ, ಟಿ.ಎನ್ ಸತೀಶ್, ಚಿದಾನಂದ ಚಾಂತಾಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.