ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಪ್ರಗತಿ ರಜತ ಸಂಭ್ರಮ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

 

 

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ೧೦ ನೇ ವರ್ಷದ ಅಂಗವಾಗಿ ದಶಮಾನೋತ್ಸವವು ನವಂಬರ್ ೧೫ರಿಂದ ಡಿಸೆಂಬರ್ ೯ ರವರೆಗೆ ಪ್ರತಿದಿನ ೨೫ದಿನಗಳ ಕಾರ್ಯಕ್ರಮಗಳು ನಡೆಯಲಿರುವುದು. ಅದರ ಯಶಸ್ಸಿಗಾಗಿ ಬೆಳ್ಳಿ ಹಬ್ಬ ಸಮಿತಿ ವತಿಯಿಂದ ಪ್ರಗತಿ ರಜತಸಂಭ್ರಮೋತ್ಸವ ನಡೆಯಲಿರುವುದು.


ಅ.೩೧ರಂದು ಪ್ರಗತಿ ಆಡಳಿತ ಸಮಿತಿ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಆಮಂತ್ರಣ ಬಿಡುಗಡೆಗೊಳಿಸಿ ನಿರಂತರ ೨೫ ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ ಸಂಚಾಲಕ ಜಯಸೂರ್ಯರೈ ಮಾದೋಡಿ, ಉಪಾದ್ಯಕ್ಷ ವಿಶ್ವನಾಥ ರೈ ಮಾದೊಡಿ, ನಾಗೇಶ ರೈ ಮಾಳ ,ಬೆಳ್ಳಿ ಹಬ್ಬ ಸಮಿತಿ ಅದ್ಯಕ್ಷ ರಮೇಶ ಬೆಟ್ಟ, ಉಪಾದ್ಯಕ್ಷೆ ,ಶ್ರೀಮತಿ ಸೌಮ್ಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ,ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಮೊರಂಗಲ, ಕೋಶಾಧಿಕಾರಿ ಜನಾರ್ಧನ ಆಚಾರ್ಯ, ವಿವಿಧ ಪದಾಧಿಕಾರಿಗಳು, ಶಿಕ್ಷಕವೃಂದ ಉಪಸ್ಥಿತರಿದ್ದರು. ಸುಜಿತ್ ರೈ ಪಟ್ಟೆ ಪ್ರಸ್ತಾವನೆಗೈದರು. ಗಿರಿಶಂಕರ ಸುಲಾಯರು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ವಿವರಿಸಿ ದರು. ವಸಂತ ರೈ ಕಾರ್ಕಳ ವಂದಿಸಿದರು.
(ವರದಿ: ಎ.ಎಸ್.ಎಸ್.ಆಲೆಕ್ಕಾಡಿ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.