Breaking News

ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಕಾರ್‍ಮಿಕರ ಪಾತ್ರ ಮಹತ್ವದ್ದು – ರಾಬರ್ಟ್ ಡಿಸೋಜಾ

Advt_Headding_Middle
Advt_Headding_Middle

                                                                                                 ಸಾಂದರ್ಭಿಕ ಚಿತ್ರ
ಶೋಷಣೆ ರಹಿತವಾದ ಸಮಾಜ ನಿರ್ಮಾಣ ಮತ್ತು ಮನುಷ್ಯರಿಂದ ಮನುಷ್ಯರ ಶೋಷಣೆಯನ್ನು ಮುಕ್ತಗೊಳಿಸಲು ಕಾರ್ಮಿಕರ ಪಾತ್ರ ಮಹತ್ವದ್ದು ಎಂದು ಸುಳ್ಯದ ಕಾರ್‍ಮಿಕ ನಾಯಕ ರಾಬರ್‍ಟ್ ಡಿಸೋಜಾರವರು ಇತ್ತೀಚೆಗೆ ಸುಳ್ಯದ ಸಿ.ಎ. ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡುತ್ತಾ ತಿಳಿಸಿದರು.

ಕಳೆದ ೧೮ ವರ್‍ಷಗಳಿಂದ ಈ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಂಡ ಸರಕಾರಗಳು ಅವರಿಗೆ ಸರಿಯಾದ ಯಾವುದೇ ಸೌಲಭ್ಯ-ಸವಲತ್ತು, ವೇತನ ನೀಡದೆ ವಂಚಿಸುತ್ತಿದೆ. ಸರಕಾರ ಕಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದು ಓಟಿನ ಸಂದರ್ಭದಲ್ಲಿ ಮಾತ್ರ ಅವರ ನೆನಪು ಮಾಡಿಕೊಳ್ಳುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಅವರನ್ನು ಮರೆತು ಬಿಡುತ್ತವೆ. ಕೇವಲ ೨೬೦೦-೨೭೦೦ ರೂ. ಗೆ ದುಡಿಯುವ ಇವರು,ಇವರ ಹೊಟ್ಟೆಯ ಮೇಲೆ ತಣ್ಣೀರಿ ಬಟ್ಟೆಯೇ ಗತಿ ಎಂದ ಅವರು ದೇಶದಲ್ಲಿ ೧೨ ಕೋಟಿ ಮಕ್ಕಳಿಗೆ ಸುಮಾರು ೮ ಲಕ್ಷ ನೌಕರರು ಬಿಸಿಯೂಟ ಮಾಡಿ ಬಡಿಸುತ್ತಿದ್ದಾರೆ. ಆದರೆ ಅವರ ಮಕ್ಕಳು ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಬದುಕು ಕಟ್ಟಿಕೊಳ್ಳುವುದು ಕಷ್ಟಕರವಾಗಿದ್ದು, ಕೇಂದ್ರ ಸರಕಾರ ಕಳೆದ ೭ ವರ್ಷಗಳ ಹಿಂದೆ ಜಾಸ್ತಿ ಮಾಡಿದ್ದ ೧೦೦೦ ರೂ ನ್ನು ಈ ತನಕ ನೀಡಿಲ್ಲ. ಒಳ್ಳೆ ದಿನಗಳು ಬರುತ್ತವೆ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಬಂಡವಾಳ ಶಾಯಿಗಳ ಉದ್ಧಾರ ಮಾಡಲು ಹೊರಟಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸುವಂತೆ ಆಗಿದೆ. ಎನ್.ಡಿ.ಎ. ಸರಕಾರದ ಧೋರಣೆಗಳು ಜನ ವಿರೋಧಿ, ಕಾರ್‍ಮಿಕ ವಿರೋಧಿ ಧೋರಣೆಗಳಿವೆ. ಕಾರ್‍ಮಿಕರ ಹಕ್ಕಿನ ಮೇಲೆ ಗಧಾ ಪ್ರಹಾರ ಮಾಡುತ್ತಿದೆ. ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿದೆ ಎಂದ ಅವರು ಬೆಲೆ ಏರಿಕೆಯನ್ನು ತಡೆಗಟ್ಟುವಂತೆ ಆಗ್ರಹಿಸಿದರು. ತಿಂಗಳ ವೇತನ ೧೮೦೦೦ ನಮ್ಮ ಬೇಡಿಕೆಯಾಗಿದ್ದು ಸುಪ್ರೀಂ ಕೋರ್ಟು ಕೂಡ ಕಾರ್‍ಮಿಕರಿಗೆ ೧೮೦೦೦ ಸಾವಿರ ವೇತನ ನೀಡಬೇಕೆಂದು ಹೇಳಿದರೂ ಸರಕಾರ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದ ಅವರು ಕಾರ್‍ಮಿಕರು ಸಂಘಟಿತರಾಗಿ ಹೋರಾಟ ನಡೆಸಿದರೆ ಮಾತ್ರ ವೇತನ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವೆಂದರು.
ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ, ೨೦೦೨ರಲ್ಲಿ ಆರಂಭವಾದ ಅಕ್ಷರ ದಾಸೋಹ ಯೋಜನೆಯು ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪ್ರೌಢ ಶಾಲೆಯ ವಿದ್ಯಾರ್ಥಿಗಳವರೆಗೆ ತುಂಬಾ ಅನುಕೂಲವಾಗಿದೆ. ಆದರೆ ಬಿಸಿಯೂಟ ತಯಾರಿಸುವ ನೌಕರರ ಪಾಡು ನಾಯಿ ಪಾಡಾಗಿದೆ. ಅಕ್ಷರ ದಾಸೋಹ ಯೋಜನೆ ಜಾತಿ-ಧರ್ಮದ ಅಂತರವನ್ನು ಹೋಗಲಾಡಿಸಿ ಸಮಾನತೆಯ ಮೌಲ್ಯವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ, ಇದೊಂದು ಮಹತ್ತರ ಯೋಜನೆಯಾಗಿದೆ. ಅಲ್ಲದೆ, ಅನಿವಾರ್ಯವೂ ಆಗಿದೆ. ಬೆಳಿಗ್ಗೆ ೯ ಗಂಟೆಗೆ ಶಾಲೆಗೆ ಹಾಜರಾಗುವ ಅಕ್ಷರ ದಾಸೋಹ ನೌಕರರು ಮದ್ಯಾಹ್ನ ೨ ಗಂಟೆಯವರೆಗೆ ಅವಿರತ ದುಡಿಯುತ್ತಾರೆ. ಆದರೆ ವೇತನ ತೀರಾ ಕಡಿಮೆ. ಇದರಿಂದ ಅವರಿಗೆ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾವಿರಗಟ್ಟಲೆ ಸಂಬಳ ನೀಡುವ ಸರಕಾರ ಇವರಿಗೆ ಕೇವಲ ೨೬೦೦-೨೭೦೦ ನೀಡಿ ವಂಚಿಸುತ್ತಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಅಧಕ್ಷೆ ಲೀಲಾವತಿ ಕೆ. ಅಲೆಕ್ಕಾಡಿ ವಹಿಸಿದ್ದರು. ಪ್ರ. ಕಾರ್ಯದರ್ಶಿ ಸ್ವಾಗತಿಸಿ, ನೂತನ ಪ್ರ.ಕಾರ್ಯದರ್ಶಿ ಲೀಲಾವತಿ ಸೂರ್ತಿಲ
ವಂದಿಸಿದರು.
ವೇದಿಕೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘ (ಸಿ ಐ ಟಿ ಯು) ಇದರ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಐವರ್ನಾಡು, ಸುನಿತಾ ಎಲಿಮಲೆ, ಜೊತೆ ಕಾರ್ಯದರ್ಶಿಗಳಾದ ಲತಾ ಪದವು, ಕುಸುಮಾವತಿ ಕುಕ್ಕುಜಡ್ಕ, ಸಾವಿತ್ರಿ ಎಂಜೀರು, ಸಿ ಐ ಟಿ ಯು ಮತ್ತು ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಶಿವರಾಮ ಗೌಡ, ಬೀಡಿ ಕಾರ್ಮಿಕರ ಸಂಘದ ಉಪ ಕಾರ್ಯದರ್ಶಿ ಸುಂದರ ಜಯನಗರ, ರಿಕ್ಷಾ ಚಾಲಕ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕೇರ್ಪಳ, ಕಾರ್ಯದರ್ಶಿ ಅಬೂಬಕ್ಕರ್ ಅಜ್ಜಾವರ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ನೂರಾರು ಅಕ್ಷರದಾಸೋಹ ನೌಕರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.