Breaking News

ಗುರುಪ್ರಸಾದ್ ಪಂಜ ನ್ಯಾಯಾಂಗ ಕಸ್ಟಡಿಗೆ

Advt_Headding_Middle
Advt_Headding_Middle

ಚೈತ್ರಾ ಕುಂದಾಪುರರ ಮೇಲೆ ಫೇಸ್‌ಬುಕ್‌ಗಳಲ್ಲಿ ಅನುಚಿತ ಕಮೆಂಟ್‌ಗಳನ್ನು ಹಾಕಿದರೆಂಬ ಕಾರಣಕ್ಕಾಗಿ ಪ್ರಶ್ನಿಸಲೆಂದು ಸುಬ್ರಹ್ಮಣ್ಯಕ್ಕೆ ಬಂದ ಚೈತ್ರಾ ಕುಂದಾಪುರ ಮತ್ತು ಸಂಘಟಕರ ಜೊತೆಗೆ ಹೊಡೆದಾಟವಾಗಿ ಮಾನಭಂಗ ಯತ್ನ ಮತ್ತು ದರೋಡೆ ಕೇಸ್‌ಗೆ ಒಳಗಾಗಿರುವ ಗುರುಪ್ರಸಾದ್ ಪಂಜರಿಗೆ ಸುಳ್ಯ ನ್ಯಾಯಾಲಯವು ನ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ತಲೆಗೆ ಮಾರಣಾಂತಿಕ ಹಲ್ಲೆಯಾಗಿದೆ ಎಂಬ ಕಾರಣ ನೀಡಿ ಗುರುಪ್ರಸಾದ್ ಪಂಜ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಮಲಗಿದ್ದರು. ಅಲ್ಲಿ ಹಣೆಗೆ ಗೀರುಗಾಯವಾಗಿ (ಸಿಂಬಲ್ ಇಂಜುರಿ) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಅವರನ್ನು ಬೆಳಿಗ್ಗೆ 10.30ಕ್ಕೆ ಬಂಧಿಸಿ ಅಲ್ಲಿ ಇಂದು (ಅ.31) ಪೊಲೀಸರು ಸುಳ್ಯಕ್ಕೆ ಕರೆತಂದರು. ಅಪರಾಹ್ನ 3 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದರು.

ಆಸ್ಪತ್ರೆಗೆ ಕಳುಹಿಸಿಲು ವಕೀಲರ ವಿನಂತಿ

ಗುರುಪ್ರಸಾದ್ ಪಂಜರವರಿಗೆ ತಲೆಗೆ ಏಟಾಗಿರುವುದರಿಂದ ಆಸ್ಪತ್ರೆಗೆ ದಾಖಲುಗೊಳಿಸಲು ಆದೇಶಿಸಬೇಕೆಂದು ಆರೋಪಿ ಪರ ನ್ಯಾಯವಾದಿ ಎಂ. ವೆಂಕಪ್ಪ ಗೌಡರು ನ್ಯಾಯಾಧೀಶರನ್ನು ಕೇಳಿಕೊಂಡಾಗ ನ್ಯಾಯಾದೀಶರು ಒಪ್ಪಲಿಲ್ಲ.
ಕಸ್ಟಡಿಗೆ ಹೋಗಬೇಕಾದ ಆರೋಪಿಗಳನ್ನು ಆಸ್ಪತ್ರೆಗೆ ಕಳುಹಿಸುವ ಸಂಪ್ರದಾಯ ಮಾಡಿದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ. ಈತನಿಗೆ ಏನು ಆಗಿಲ್ಲ ನಾಟಕವಾಡುವುದು ಸರಿಯಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಆದರೆ ನ್ಯಾಯವಾದಿ ಎಂ. ವೆಂಕಪ್ಪ ಗೌಡರು ಮತ್ತೆ ಮತ್ತೆ ವಿನಂತಿಸಿಕೊಂಡಾಗ ನ್ಯಾಯಾಧೀಶರು ಆರೋಪಿ ಗುರುಪ್ರಸಾದ್ ಪಂಜರನ್ನು “ನಿನಗೆ ಏನಾಗುತ್ತದೆ “ಎಂದು ಪ್ರಶ್ನಿಸಿದರು. ಆಗ ಗುರುಪ್ರಸಾದ್ ” ತಲೆ ತಿರುಗುತ್ತದೆ” ಎಂದು ಹೇಳಿದರು ತಲೆ ಎಲ್ಲರಿಗೂ ತಿರುಗುತ್ತದೆ, ನೀನು ಇಲ್ಲಿಯವರೆಗೆ ಬಾ ಎಂದು ನ್ಯಾಯಾಧೀಶರು ಹೇಳಿ ನ್ಯಾಯಾಲಯದ ಹಾಲ್‌ನ ಒಳಗೆ ನಾಲ್ಕು ಹೆಜ್ಜೆ ನಡೆಸಿದರು. ಈತನಿಗೆ ತಲೆ ತಿರುಗುದಿಲ್ಲ. ತಲೆ ತಿರುಗುತ್ತಿದ್ದರೆ ಬೀಳಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು. ಆ ಬಳಿಕವೂ ಎಂ. ವೆಂಕಪ್ಪ ಗೌಡರು ಮತ್ತೆ ಮತ್ತೆ ವಿನಂತಿಸಿಕೊಂಡಾಗ ಅಗತ್ಯಬಿದ್ದರೆ ಆಸ್ಪತ್ರೆಗೆ ದಾಖಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿ ಆದೇಶ ಬರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.