ಎಸ್. ಡಿ. ಪಿ. ಐ. ವತಿಯಿಂದ ಕನ್ನಡ ರಾಜ್ಯೋತ್ಸವ

Advt_Headding_Middle
Advt_Headding_Middle

 

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.


ಧ್ವಜಾರೋಹಣವನ್ನು ಎಸ್ ಡಿ ಪಿ ಐ ಸುಳ್ಯ ವಿಧಾನ ಸಭಾ ಸಮಿತಿ ಉಪಾಧ್ಯಕ್ಷ ಹಾಜಿ.ಕೆ ಮಮ್ಮಾಲಿ ನೆರವೇರಿಸಿದರು.ಕನ್ನಡ ರಾಜ್ಯೋತ್ಸವದ ಬಗ್ಗೆ ಸಂದೇಶ ಭಾಷಣವನ್ನು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾಡಿದರು.


ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಎಸ್ ಡಿ ಪಿ ಐ ಸುಳ್ಯ ವಿಧಾನ ಸಭಾ ಸಮಿತಿ ಸದಸ್ಯ ಬಶೀರ್ ಬಿ.ಎ, ವಲಯಾಧ್ಯಕ್ಷ ಫೈಝಲ್.ಜಿ, ವಲಯ ಕಾರ್ಯದರ್ಶಿ ಹಮೀದ್ ಮರಕಡ,ಉಪಾಧ್ಯಕ್ಷ ಆಶೀರ್.ಎ.ಬಿ,ಸಮಿತಿ ಸದಸ್ಯರಾದ ಶಹೀದ್, ಸಿದ್ದೀಕ್, ಝೈನುದ್ದೀನ್ ಯು.ಎಚ್,ಶಾಫಿ ಟಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಫೈಝಲ್. ಜಿ ಸ್ವಾಗತಿಸಿ, ಬಶೀರ್ ಕೆ.ಎ ಧನ್ಯವಾದ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.