ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನ ಹಾಗೂ ವಿದಾಯ ಸಮಾರಂಭ

Advt_Headding_Middle
Advt_Headding_Middle

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಕ ಉಪನ್ಯಾಸಕರಾಗಿ ಹಾಗೂ ಫಿಸಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಳೆದ ೩೨ ವರ್ಷಗಳಿಂದ ಸೇವೆ ಸಲ್ಲಿಸಿ ವಯೋನಿವೃತ್ತರಾದ ಡಾ. ಎಸ್. ಗೋವಿಂದ ಭಟ್ ಹಾಗೂ ಲೈಬ್ರೆರಿ ವಿಭಾಗದ ಸೀನಿಯರ್ ಅಟೆಂಡರ್ ಆಗಿರುವ ಶ್ರೀ ವಾಸುದೇವ ಪರಿವಾರ ಅವರಿಗೆ ಸನ್ಮಾನ ಹಾಗೂ ವಿದಾಯ ಸಮಾರಂಭ ಅ.೨೯ರಂದು ನಡೆಯಿತು. ಹೇಮನಾಥ ಕೆ.ವಿ. ನಿರ್ದೇಶಕರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇವರು ಡಾ. ಎಸ್. ಗೋವಿಂದ ಭಟ್ ಹಾಗೂ ಶ್ರೀ ವಾಸುದೇವ ಪಿ. ಅವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆಯನ್ನಿತ್ತು ಸನ್ಮಾನಿಸಿ ಶುಭ ಕೋರಿದರು. ವಿ.ಟಿ.ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷಾಧಿಕಾರಿಯಾಗಿರುವ ಡಾ. ಶಿವಕುಮಾರ್ ಹೆಚ್. ಆರ್. ಅವರು ಅಭಿನಂದನಾ ಭಾಷಣದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡರು. ಪ್ರೊ. ದೇವದಾಸ್ ಕೆ.ವಿ. ಉಪಪ್ರಾಂಶುಪಾಲರು ಮತ್ತು ಮುಖ್ಯಸ್ಥರು, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗ ಇವರು ಡಾ. ಎಸ್. ಗೋವಿಂದ ಭಟ್ ರವರ ಹಾಗೂ ನಾಗೇಶ್ ಕೊಚ್ಚಿ, ಆಡಳಿತಾಧಿಕಾರಿ ಇವರು ವಾಸುದೇವ ಪರಿವಾರ ಇವರ ಅಭಿನಂದನಾ ಪತ್ರಗಳನ್ನು ವಾಚಿಸಿದರು. ತದನಂತರ ಡಾ. ಎಸ್. ಗೋವಿಂದ ಭಟ್ ಅವರು ಮಾತನಾಡಿ ಡಾ. ಕೆ.ವಿ.ಜಿ. ಯವರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು ಎಂದು ಹಾಗೂ ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯವರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗದವರಿಗೆ ಧನ್ಯವಾದವನ್ನು ಸಮರ್ಪಿಸುತ್ತಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿ  ಪ್ರೊ. ಕೆ.ವಿ. ದಾಮೋದರ ಗೌಡ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಲಹೆಗಾರರು, ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್, ಎ.ಒ.ಎಲ್.ಇ.(ರಿ) ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಎ. ಜ್ಞಾನೇಶ್‌ರವರು ವಹಿಸಿದ್ದರು.  ಕೃಷ್ಣರಾಜ್ ಎಂ.ವಿ. ಅಸಿಸ್ಟೆಂಟ್ ಪ್ರೊಫೆಸರ್, ಸಿವಿಲ್ ಇಂಜಿನಿಯರಿಂಗ್ ವಿಭಾಗ ಪ್ರಾರ್ಥಿಸಿ,  ಡಾ. ಶ್ರೀಧರ್ ಕೆ. ಮುಖ್ಯಸ್ಥರು, ಗಣಿತಶಾಸ್ತ್ರ ವಿಭಾಗ/ಡೀನ್ ಅಕಾಡೆಮಿಕ್ ಸ್ವಾಗತಿಸಿದರು ಹಾಗೂ  ಡಾ. ರಾಮು ಎಸ್. ವಿದ್ಯಾರ್ಥಿ ಕ್ಷೇಮಾಧಿಕಾರಿ/ಪ್ರೊಫೆಸರ್, ಸಿವಿಲ್ ಇಂಜಿನಿಯರಿಂಗ್ ವಿಭಾಗ ವಂದನಾರ್ಪಣೆಗೈದರು. ಸುಧನ್ವಕೃಷ್ಣ ಜಿ, ಮತ್ತು ಶ್ರೀಮತಿ ಶೃತಿ ಪಿ.ಜೆ, ಅಸಿಸ್ಟೆಂಟ್ ಪ್ರೊಫೆಸರ್‌ಗಳು, ಸಿವಿಲ್ ಇಂಜಿನಿಯರಿಂಗ್ ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.  ಪ್ರೊ. ಬಾಲಕೃಷ್ಣ ಬೊಳ್ಳೂರು, ಕೆವಿಜಿಪಿ, ಪ್ರೊ. ಉಜ್ವಲ್ ಯು.ಜೆ., ಚಿದಾನಂದ ಗೌಡ, ಕೆವಿಜಿಐಟಿಐ. ರಾಮಚಂದ್ರ ಎನ್.ಜಿ. ಮತ್ತು ಮಾಧವ ಬಿ.ಟಿ., ಕೆವಿಜಿಡಿಸಿ, ದೀಪಕ್, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು, ಪ್ರಸನ್ನ ಕುಮಾರ್, ಪದ್ಮನಾಭ ಎ.ಒ.ಎಲ್.ಇ, ಹರೀಶ್ ಕೆವಿಜಿ ಐಪಿಎಸ್, ದನಂಜಯ ಕಲ್ಲುಗದ್ದೆ, ರಾಮಚಂದ್ರ ಪಲ್ಲತ್ತಡ್ಕ ಮತ್ತು ಆನಂದ ಖಂಡಿಗ, ಕೆವಿಜಿ ವಿಎಸ್‌ಎಸ್‌ಎನ್, ಪದ್ಮನಾಭ ಕೆವಿಜಿ ಹೈಸ್ಕೂಲ್ ಹಾಗೂ ವಿಭಾಗದ ಮುಖ್ಯಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.