Breaking News

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಕ್ಲಸ್ಟರ್ ವತಿಯಿಂದ ಮಾನವ ವೃತ್ತ

Advt_Headding_Middle
Advt_Headding_Middle

 

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರೋಗ್ಯ ಕರ್ನಾಟಕ್ಕಾಗಿ ಯುವ ಜನ ಜಾಗೃತಿ ಎಂಬ ದ್ಯೇಯ ವಾಕ್ಯ ದೊಂದಿಗೆ ಮಾನವ ವೃತ್ತ ಕಾರ್ಯಕ್ರಮ ನ. 1 ರಂದು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಕ್ಲಷ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್ ವಹಿಸಿ ಪ್ರತಿಜ್ಞಾವಿದಿ ಭೋದಿಸಿದರು. ಕಾರ್ಯಕ್ರಮವನ್ನು ದ ಕ ಜಿಲ್ಲಾ ಉಪಾಧ್ಯಕ್ಷರಾದ ಶಾಪೀ ದಾರಿಮಿ ಅಜ್ಜಾವರ ಉದ್ಘಾಟಿಸಿದರು. ಲಹರಿ ವಿರುದ್ಧ ಜಾಗೃತಿ ಮೂಡಿಸುವ ಕರಪತ್ರ ವನ್ನು ಸಿದ್ಧೀಕ್ ಅಡ್ಕ ಬಿಡುಗಡೆಗೊಳಿಸಿದರು. ಪ್ರಮೇಯ ಭಾಷಣಗಾರರಾಗಿ ಸುಳ್ಯ ವಲಯ ಕೊಶಾಧಿಕಾರಿ ಅಬ್ದುಲ್ಲ ಪೈಝಿ ಪೈಂಬಚಾಲ್ ಆಗಮಿಸಿ ಅಮಲು ಪದಾರ್ಥಗಳು ಶೈಕ್ಷಣಿಕ ಕ್ಷೇತ್ರವನ್ನು ಬಲಿತೆಗೆಯುತ್ತಿರುವುದರ ಬಗ್ಗೆ ಎಚ್ಚರಿಸಿದರು.

ಈ ಸಂದರ್ಭ ಇಬ್ರಾಹಿಂ ಹಾಜಿ ಕತ್ತರ್ , ಝೈನುದ್ದೀನ್ ಮುಸ್ಲಿಯಾರ್ ಅಜ್ಜಾವರ , ಹಸೈನಾರ್ ಮುಸ್ಲಿಯಾರ್ ಅಜ್ಜಾವರ , ಕಲೀಲ್ ಮಂಡೆಕೋಲು , ಹಾರೀಸ್ ಪೈಂಬಚಾಲ್ , ಇಸ್ ಹಾಕ್ ಅಜ್ಜಾವರ , ಸುಹೈಲ್ ಪೈಂಬಚಾಲ್ ಅಥಿತಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಜ್ಜಾವರ ವಿಖಾಯ ಕನ್ವೀನರ್ ಶಾಫೀ ಮುಕ್ರಿ ಅಜ್ಜಾವರ ಸ್ವಾಗತಿಸಿ ಅಜ್ಜಾವರ ಶಾಖೆ ಕಾರ್ಯದರ್ಶಿ ಅಬ್ದುಲ್ ಖಾದರ್ ನೆಲ್ಯಡ್ಕ ವಂದಿಸಿ, ಹಸೈನಾರ್ ಸ್ವರ್ಣಂ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.