Breaking News

ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವದ ಸಮಾಲೋಚನಾ ಸಭೆ

Advt_Headding_Middle
Advt_Headding_Middle

ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘಕ್ಕೆ 2019ರ ಮಾ. 3ಕ್ಕೆ 100  ಸಂವತ್ಸರಗಳು ಪೂರೈಸುತ್ತಿದ್ದು, ಶತಮಾನೋತ್ಸವ ಆಚರಿಸುವ ಸಲುವಾಗಿ ನ. 2ರಂದು ಸಂಘದ ವಜ್ರಮಹೋತ್ಸವ ಸಭಾಭವನದಲ್ಲಿ ಸಮಾಲೋಚನಾ ಸಭೆಯು ನಡೆಯಿತು.


ಸಂಘದ ಅಧ್ಯಕ್ಷ ಕೃಪಾಶಂಕರ ತುದಿಯಡ್ಕರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಬಗ್ಗೆ ಸಮಾಲೋಚನೆಯನ್ನು ನಡೆಸಲಾಯಿತು. ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಮಿತಿಗಳನ್ನು ರಚಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಶತಮಾನೋತ್ಸವದ ಸವಿನೆನಪಿಗಾಗಿ ಸಂಘದ ಕಟ್ಟಡದ ನವೀಕರಣ ಹಾಗೂ ಹೊರಭಾಗದ ಆವರಣಕ್ಕೆ ಸಂಪೂರ್ಣವಾಗಿ ಮೇಲ್ಛಾವಣಿ ರಚಿಸುವ ಬಗ್ಗೆ ನಿರ್ಣಯಿಸಲಾಯಿತು. ಶತಮಾನೋತ್ಸವದ ಪ್ರಯುಕ್ತ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಸಂದರ್ಭದಲ್ಲಿ ಸಂಘದ ಸ್ಥಾಪನೆಗೆ ಬೇಕಾದ ಸ್ಥಳದಾನವನ್ನು ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಂಘದಲ್ಲಿ ಕಾರ್ಯನಿರ್ವಹಿಸಿದ ಪೂರ್ವಾಧ್ಯಕ್ಷರುಗಳನ್ನು ಗೌರವಿಸುವ ಬಗ್ಗೆ ಮತ್ತು ಗ್ರಾಮದ ೮ ವಾರ್ಡ್‌ಗಳಿಂದ ಪ್ರತಿಯೊಂದು ವಾರ್ಡ್‌ನಿಂದ ಓರ್ವ ಪ್ರಗತಿಪರ ಕೃಷಿಕರಾಗಿದ್ದು, ಸಂಘದ ಉತ್ತಮ ಗ್ರಾಹಕರಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಸನ್ಮಾನಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ೧೦೦ ವರ್ಷದ ಇತಿಹಾಸವುಳ್ಳ ಸ್ಮರಣ ಸಂಚಿಕೆಯನ್ನು ಹೊರತರುವುದಾಗಿ ಹಾಗೂ ಕೃಷಿ ವಸ್ತು ಪ್ರದರ್ಶನವು ನಡೆಯಲಿರುವುದು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಹರೀಶ್ ರಂಗತ್‌ಮಲೆ, ಸಂಘದ ನಿರ್ದೇಶಕರುಗಳಾದ ಶ್ರೀಪತಿ ಭಟ್ ಮಜಿಗುಂಡಿ, ಯತಿರಾಜ್ ಭೂತಕಲ್ಲು, ಎನ್.ಎ.ಜಯರಾಮ, ಹರಿಪ್ರಸಾದ್ ಕಾಪುಮಲೆ, ಮಾಧವ ಗೌಡ ಬಿಲ್ಲರಮಜಲು, ಶಿವಾನಂದ ರಂಗತ್ತಮಲೆ, ಶ್ರೀದೇವಿ ಭಟ್ ಮಜಿಗುಂಡಿ, ಕುಸುಮಾವತಿ ಕುಂಚಡ್ಕ, ಸಿ.ಇ.ಒ. ದಿನಕರ ಕೂರ್ನಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಗ್ರಾ.ಪಂ. ಸದಸ್ಯರು, ಪಿ.ಡಿ.ಒ., ಸಿಬ್ಬಂದಿವರ್ಗದವರು ಹಾಗೂ ಗ್ರಾಮಸ್ಥರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.