ಅರೆಬಾಸೆ ಲಿಪಿ, ವ್ಯಾಕರಣ ತರಬೇತಿ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಅರ್ಜಿ ಅಹ್ವಾನ

Advt_Headding_Middle
Advt_Headding_Middle

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸಂಪನ್ಮೂಲ ವ್ಯಕ್ತಿಗಳ ತರಭೇತಿ ಮತ್ತು ಆಯ್ಕೆಗಾಗಿ ಅರೆಬಾಸೆ ಲಿಪಿ, ವ್ಯಾಕರಣ ಮತ್ತು ಸಾಹಿತ್ಯ ಕಾರ್‍ಯಾಗಾರವನ್ನು ನಡೆಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ಕರಿಕೆ, ಸಂಪಾಜೆ, ಪೆರಾಜೆ ಮತ್ತು ಕೇರಳ ರಾಜ್ಯದ ಕಲ್ಲಪಳ್ಳಿ, ಬಂದಡ್ಕ, ದೇಲಂಪಾಡಿ ಸೇರಿದಂತೆ ಸುಳ್ಯವನ್ನು ಕೇಂದ್ರೀಕರಿಸಿಕೊಂಡು ಸ್ಥಳೀಯವಾಗಿ ತರಬೇತು ಕಾರ್‍ಯಾಗಾರಗಳನ್ನು/ಕಲಿಕಾ ಕೇಂದ್ರಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಸಾಕ್ಷರತಾ ಆಂದೋಲನದ ರೀತಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಲ್ಲಿ ಅರೆಬಾಸೆ ಲಿಪಿ, ವ್ಯಾಕರಣ ಕಲಿಕಾ ಯೋಜನೆಯಲ್ಲಿ ತರಬೇತುದಾರರು/ಸಂಪನ್ಮೂಲ ವ್ಯಕ್ತಿಗಳಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತರಿಂದ ಅರ್ಜಿ ನಿರೀಕ್ಷಿಸಲಾಗಿದೆ. ಸ್ಥಳೀಯ ಶಿಕ್ಷಣ ಸಂಸ್ಥೆ ಯುವಕ-ಯುವತಿ ಮಂಡಲ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳ ಸಹಬಾಗಿತ್ವವನ್ನು ಅಕಾಡೆಮಿಯು ಬಯಸುತ್ತದೆ.
ಕಾರ್‍ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ/ತರಬತುದಾರರಾಗಿ ಅಯ್ಕೆಯಾದವರಿಗೆ ಅಕಾಡೆಮಿಯಿಂದ ಸೂಕ್ತ ಸಂಭಾವನೆ ನೀಡಲಾಗುವುದು ಆಸಕ್ತರು ಹೆಚ್ಚಿನ ವಿವರಗಳಿಗೆ ಅಕಾಡೆಮಿ ಸದಸ್ಯರಾದ ಶ್ರೀ ಎ.ಕೆ.ಹಿಮಕರ (ಮೊ ನಂ ೯೪೮೧೨೬೭೧೨೧) ರವರನ್ನು ಅಥವಾ ಅಕಾಡೆಮಿಯ ಕಛೇರಿ (ದೂ: ೦೮೨೭೨-೨೨೩೦೫೫) ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಚಂದ್ರಹಾಸ ರೈ ರವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.