Breaking News

ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪದಕ ಪಡೆದ ವಿದ್ಯಾ ಬಂಗಾರಕೋಡಿಯವರಿಗೆ ಗ್ರಾಮಸ್ಥರಿಂದ ಸ್ವಾಗತ

Advt_Headding_Middle
Advt_Headding_Middle

ಇಂಡೋನೇಷ್ಯದ ಜಕಾರ್ತದಲ್ಲಿ ಅ. 28 ರಂದು ನಡೆದ ಹಿರಿಯರ ಕ್ರೀಡಾಕೂಟದಲ್ಲಿ ೩೫ರಿಂದ ೪೦ ವಯೋಮಾನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದ್ಯಾ, 8೦೦ ಮೀ.ನಲ್ಲಿ ಪ್ರಥಮ ಸ್ಥಾನ, 4೦೦ ಮೀ., 15೦೦ ಮೀ., 3೦೦೦ ಮೀ.ನಲ್ಲಿ ದ್ವಿತೀಯ ಸ್ಥಾನ ಪಡೆದು ನಾಲ್ಕು ಪದಕಗಳನ್ನು ಗಳಿಸಿದ್ದಾರೆ. 1೦ಕ್ಕೂ ಅಧಿಕ ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.


ನ. 1ರಂದು ಪೆರಾಜೆಗೆ ಆಗಮಿಸಿದ ವಿದ್ಯಾರಿಗೆ ಹೂಗುಚ್ಛಗಳನ್ನು ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಆಲೆಟ್ಟಿ ಗ್ರಾಮದ ರಂಗತ್ತಮಲೆಯ ಕೂಸಪ್ಪ ಗೌಡ ಮತ್ತು ಸಣ್ಣಮ್ಮ ಅವರ ಐದನೆ ಪುತ್ರಿ ಆಗಿರುವ ವಿದ್ಯಾ ಅವರನ್ನು ಕೊಡಗು ಸಂಪಾಜೆ ಪೆರಾಜೆಗೆ ವಿವಾಹ ಮಾಡಿ ಕೊಡಲಾಯಿತು. ಪತಿ ಹರೀಶ್, ಮೂವರು ಮಕ್ಕಳು ಇರುವ ಕುಟುಂಬದ ಈ ಮಹಿಳೆ ಬಡತನ ಮೀರಿ ಸಾಧನೆ ತೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.