ನ.10 ರಂದು ಗೌಡ ಸಂಘದಿಂದ ದೀಪಾವಳಿ ಆಚರಣೆ

Advt_Headding_Middle
Advt_Headding_Middle

ಗೌಡರ ಯುವ ಸೇವಾ ಸಂಘ ಸುಳ್ಯ ಮತ್ತು ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಠನ, ತರುಣ ಘಟಕಗಳ ನೇತೃತ್ವದಲ್ಲಿ ನವೆಂಬರ್ 10 ರಂದು ಸಂಜೆ ಎಂ.ಜಿ.ಎಂ. ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ ಕೊಡಿಯಾಲಬೈಲ್ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರ ಗೌಡ ಸಂಘದ ಅಧ್ಯಕ್ಷ ಐ.ಬಿ.ಚಂದ್ರಶೇಖರ ಹೇಳಿದರು.


ನ.೩ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ಥೇವೆ. ದೀಪಾವಳಿ ಹಬ್ಬ ನಮ್ಮ ಹಬ್ಬಗಳಲ್ಲಿ ವಿಶೇಷವಾದುದು. ದೊಡ್ಡ ಕುಟುಂಬಗಳು ಇಂದು ಸನ್ಣ ಸಣ್ಣ ಕುಟುಂಬಗಳಾಗಿ ಮೂಡಿ ಬರುತ್ತಿದ್ದು ಈ ನಿಟ್ಟಿನಲ್ಲಿ ನಮ್ಮ ಸಮಾಜದಲ್ಲಿ ಬಹುಮುಖ್ಯವಾಗಿ ಆಚರಿಸಲ್ಪಡುವ ದೀಪಾವಳಿಯನ್ನು ಸಾಮೂಹಿಕವಾಗಿ ಆಚರಿಸಲಿzವೆ ಎಂದುಹೇಳಿದರು. ಗೋ ಪೂಜೆ, ಬಲಿಯೇಂದ್ರ ಮರ ಹಾಕಲಾಗುವುದು. ಸಮುದಾಯ ಭವನಕ್ಕೆ ಹಣತೆ ಹಚ್ಚಿ, ಭಜನೆ ಮತ್ತು ಗೂಡು ದೀಪದ ಸ್ಪರ್ಧೆಗಳು ಮತ್ತು ಮನೋರಂಜನೆಗಳು ನಡೆಯುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ನಗರ ಘಟಕದ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕುದ್ಪಾಜೆ, ಕಾರ್ಯದರ್ಶಿ ಪವಿತ್ರ ಕುರುಂಜಿ, ಬಾಲಗೋಪಾಲ ಸೇರ್ಕಜೆ, ರಾಮಕೃಷ್ಣ ಆಳಂಕಲ್ಯ, ಲೋಕೇಶ್ ಪೆರ್ಲಂಪಾಡಿ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.