Breaking News

10 ದಿನದೊಳಗೆ ಮರಳು ಸಮಸ್ಯೆ ಪರಿಹರಿಸದಿದ್ದರೆ ವಾಹನಗಳನ್ನು ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ

Advt_Headding_Middle
Advt_Headding_Middle

 

‘’ಸರಕಾರ ಜಿಲ್ಲೆಯಲ್ಲಿ ಮರಳು ತೆಗೆಯಲು ಬಿಡದ ಪರಿಣಾಮ ಸಾಕಷ್ಟು ತೊಂದರೆಗಳಾಗಿದೆ. ಮನೆ ಕೆಲಸ ಸೇರಿದಂತೆ ಕಟ್ಟಡ ಕಾಮಗಾರಿಗಳನ್ನು ಆರಂಭಿಸಿರುವ ಕೆಲಸಗಾರರು ಮರಳಿಲ್ಲದೆ ಎಲ್ಲ ಕೆಲಸವನ್ನು ನಿಲ್ಲಿಸಿದ್ದಾರೆ. ಆದ್ದರಿಂದ ಮುಂದಿನ 10 ದಿನಗಳಲ್ಲಿ ಸರಕಾರ ಮರಳು ಸಮಸ್ಯೆಯನ್ನು ಪರಿಹರಿಸದಿದ್ದರೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ“ ಎಂದು ಕಟ್ಟಡ ಕಾರ್ಮಿಕರ ಸಂಘ, ಲಾರಿ ಚಾಲಕ-ಮಾಲಕರ ಸಂಘ, ಗ್ರಾ.ಪಂ. ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.


ನ.೩ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವಿವರ ನೀಡಿದರು. ಲಾರಿ ಚಾಲಕ ಮಾಲಕರ ಸಂಘದ ದಿನೇಶ್ ಅಡ್ಕಾರು ಮಾತನಾಡಿ, ‘’ಮೊನ್ನೆ ಮಂಗಳೂರಿಗೆ ಸಿ.ಎಂ. ಬಂದಾಗ ಅವರಿಗೆ ಈ ಮರಳಿನ ಸಮಸ್ಯೆಯಿಂದಾಗಿ ಆಗಿರುವ ತೊಂದರೆಗಳನ್ನು, ಕಾರ್ಮಿಕರಿಗೆ ಕೆಲಸ ಇಲ್ಲದಿರುವುದನ್ನು ತಿಳಿಸಲಾಗಿದೆ. ಈ ಕುರಿತು ಬೆಂಗಳೂರಿನ ಸಭೆ ನಡೆಸುವುದಾಗಿ ಹೇಳಿ ಹೋಗಿದ್ದ ಮುಖ್ಯಮಂತ್ರಿಗಳು ಇದುವರೆಗೂ ಏನೂ ಮಾಡಿಲ್ಲ. ನಮ್ಮ ಕಷ್ಟಕ್ಕೆ ಸರಕಾರ ಸ್ಪಂದಿಸದಿರುವುದು ಬೇಸರ ತರಿಸಿದೆ ಎಂದು ಅವರು ಇಂದಿನಿಂದ ೧೦ ದಿನಗಳ ಒಳಗೆ ಮರಳು ಸಮಸ್ಯೆಯನ್ನು ಸರಕಾರ ಬಗೆ ಹರಿಸಬೇಕು. ಇಲ್ಲವಾದಲ್ಲಿ ಕಲ್ಲು, ಜಲ್ಲಿ ಸಾಗಾಟವನ್ನು ನಿಲ್ಲಿಸಿ ನಮ್ಮೆಲ್ಲ ವಾಹನವನ್ನು ತಾಲೂಕು ಕಚೇರಿ ಎದುರು ತಂದಿಟ್ಟು ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸುತ್ತೇವೆ“ ಎಂದು ಹೇಳಿದರು.
“ಬಸವ ವಸತಿ ಯೋಜನೆ ಸೇರಿದಂತೆ ಇನ್ನಿತರ ವಸತಿ ಯೋಜನೆಯನ್ನು ಪಡೆದುಕೊಂಡ ಫಲಾನುಭವಿಗಳು ಮರಳಿಲ್ಲದೆ ಮನೆ ಕೆಲಸ ಅರ್ಧದಲ್ಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಅಭಿವೃದ್ಧಿ ಕುಂಠಿತವಾಗಿದೆ. ಸರಕಾರ ಮರಳು ತೆಗೆಯಲು ಅನುಮತಿ ನೀಡುವಂತೆ ನಾವು ಒತ್ತಾಯಿಸುವುದಾಗಿ ಗ್ರಾ.ಪಂ. ಒಕ್ಕೂಟಗಳ ಅಧ್ಯಕ್ಷ ಹರೀಶ್ ರೈ ಉಬರಡ್ಕ ಹೇಳಿದರು.
ಕಟ್ಟಡ ಕಾರ್ಮಿಕರ ಸಂಘಟದ ಅಧ್ಯಕ್ಷ ಕೆ.ಪಿ. ಜಾನಿ ಮಾತನಾಡಿ, ’‘ಕಟ್ಟಡ ಕಾರ್ಮಿಕರ ಶೋಚನೀಯ ಸ್ಥಿತಿಯಲ್ಲಿದ್ದಾರೆ. ನಮಗೆಲ್ಲ ಮಳೆ ಮುಗಿದ ಬಳಿಕ ಬೇಸಗೆಯಲ್ಲಿ ಕೆಲಸದ ಸೀಸನ್ ಬರುತ್ತದೆ. ಆದರೆ ಈಗ ಮರಳಿನ ಸಮಸ್ಯೆಯಿಂದ ಕೆಲಸ ಇಲ್ಲದೆ ಸಾಕಷ್ಟು ಕಾರ್ಮಿಕರು ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಮಾತನಾಡಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಬೇಕು“ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ಆಳಂಕಲ್ಯ, ಶಿವನಾಥ ರಾವ್, ಸುನಿಲ್ ರೈ ಇರಂಜಮಜಲು, ವಿನಯ ನಾರಾಲು, ನಾಗರಾಜ ಮೇಸ್ತ್ರಿ ಬೆಟ್ಟಂಪಾಡಿ, ರಾಜೇಶ್‌ಕಿರಿಭಾಗ, ಗೋಪಾಲಕೃಷ್ಣ ನಾಯಕ್, ಬಾಲರಾಜ್ ದೇಂಗೋಡಿ, ಪದ್ಮನಾಭ ಶೆಟ್ಟಿ ಪೆರುವಾಜೆ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.