ಗುರುಪ್ರಸಾದ್ ಬಂಧನದ ಹಿಂದೆ ಷಡ್ಯಂತ್ರವಿದೆ ಈ ಸಂದರ್ಭ ಸಂಧಾನ ಸಾದ್ಯವಿಲ್ಲ ರಾಜೇಶ್ ಎನ್. ಎಸ್.

Advt_Headding_Middle
Advt_Headding_Middle

 

ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡ ಮತ್ತು ಗುರುಪ್ರಸಾದ್ ತಂಡಗಳ ಪರಸ್ಪರ ಹಲ್ಲೆಗೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಗುರುಪ್ರಸಾದ್ ಪಂಜ ಅವರನ್ನು ಅ.31 ರಂದು ಬಲವಂತವಾಗಿ ಚಿಕಿತ್ಸಾ ಸ್ಥಳದಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇದರಲ್ಲಿ ಕೆಲವರು ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರ ಅಡಗಿದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ , ಬಿಜೆಪಿ ಮುಖಂಡ ರಾಜೇಶ್ ಎನ್ ಎಸ್ ಸುಬ್ರಹ್ಮಣ್ಯದಲ್ಲಿ ಅ.31 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಂದು ಕಡೆ ಸಂಧಾನ ಮತ್ತೊಂದು ಕಡೆ ಜೈಲಿಗೆ ತಳ್ಳುವ ಪಿತೂರಿಯನ್ನು ನಾವು ಸಹಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸಂಧಾನ ಮಾತುಕತೆ ಅಸಾಧ್ಯ ಎಂದವರು ಅಸಮಧಾನ ವ್ಯಕ್ತಪಡಿಸಿದರು.

ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸಂದರ್ಭ ಅವರನ್ನು ಬಂಧಿಸುವಂತೆ ಕೆಲ ಸ್ಥಾಪಿತ ಹಿತಾಶಕ್ತಿಗಳು ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ಒತ್ತಡ ತಂದು ಹೀಗೆ ಮಾಡಿದ್ದಾರೆ. ಇನ್ನೊಂದು ಕಡೆ ಸಂಘಟನೆಯ ಮುಖಂಡರು ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಪಡಿಸಲು ಕೆಲವರು ಮುಂದಾಗಿದ್ದಾರೆ. ಸಂಧಾನ ಮತ್ತು ಬಂಧನ ಎಕ ಕಾಲದಲ್ಲಿ ಸಾದ್ಯವಿಲ್ಲ. ಈ ಪ್ರಕ್ರೀಯೆ ನಡೆಯುತ್ತಿರುವಾಗಲೆ ಗುರುಪ್ರಸಾದ್ ಅವರನ್ನು ಬಲತ್ಕಾರವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ಸಂಘಟನೆಗಳು ಮತ್ತು ರಾಜಕೀಯ ಮುಖಂಡರು ಈ ಕೆಲಸಕ್ಕೆ ಕುಮ್ಮಕ್ಕು ನೀಡಿರುವುದು ಸ್ಪಷ್ಟವಾಗಿದೆ. ಸಮನ್ವಯತೆ ಸಾಧಿಸಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿ ಇನ್ನೊಂದು ಕಡೆ ಅನ್ಯ ಮಾರ್ಗದ ಮೂಲಕ ಜೈಲಿಗೆ ತಳ್ಳುವ ಹಿಂದಿನ ಷಡ್ಯಂತ್ರವನ್ನು ನಾವು ಒಪ್ಪುವುದಿಲ್ಲ. ಬಂಧನ ಮತ್ತು ಸಂಧಾನ ಫಲ ನೀಡದು. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಗುರುಪ್ರಸಾದ್ ಪರ ನಾವು ಗಟ್ಟಿಯಾಗಿ ನಿಲ್ಲುತ್ತೇವೆ. ಸಂಧಾನ ಮೂಲಕ ಬಗೆಹರಿಸಲು ಮುಂದಾದ ನಾಯಕರು ಇದರ ಸೂಕ್ಷ್ಮ ಸಂಗತಿಯನ್ನು ಅರಿತುಕೊಳ್ಳಬೇಕು ಎಂದವರು ತಿಳಿಸಿದರು.

ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆ ಸರ್ಪಸಂಸ್ಕಾರವನ್ನು ಖಾಸಗಿಯಾಗಿ ಮಠದಲ್ಲಿ ನಡೆಸುತ್ತಿರುವ ಈ ಮೂಲ ಸಮಸ್ಯೆಯನ್ನು ಬಗೆಹರಿಸದೆ ಮಾತುಕತೆ ಸಾದ್ಯವಿಲ್ಲ.

ಸಂಪ್ರದಾಯ ಬದ್ದವಾಗಿ ತಲಾಂತರದಿಂದ ನಡೆದುಕೊಂಡು ಬಂದ ಸರ್ಪಸಂಸ್ಕಾರವನ್ನು ಮಠದಲ್ಲಿ ಹೆಚ್ಚು ಮೊತ್ತಕ್ಕೆ ಮಾಡುವುದು ಹಿಂದೂಗಳನ್ನು ದೋಚುವುದಾಗಿದೆ. ಆದು ನಿಲ್ಲಬೇಕು. ಹಿಂದೂ ನಾಯಕರಿಗೆ ಹಿಂದೂಗಳ ಕುರಿತು ಕಾಳಜಿ ಇದ್ದರೆ ಮಠದಲ್ಲಿ ಭಕ್ತರಿಂದ ಹಣ ದೋಚುವುದನ್ನು ನಿಲ್ಲಿಸುವ ಕೆಲಸ ಮೊದಲು ಆಗಲಿ. ಗೋವುಗಳ ಹೆಸರಿನಲ್ಲಿ ಹಣದ ದಂಧೆ ಮಾಡುವುದನ್ನು ನಿಲ್ಲಿಸಲಿ. ಇದನ್ನು ಬಗೆಹರಿಸುವ ಕೆಲಸ ಮೊದಲು ನಡೆಯಲಿ , ಹಿಂದೂಗಳ ಆರಾಧ್ಯ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ಪರ ಅವರು ಮಾತಾನಾಡಿದ್ದಾರೆ. ಅವೆಲ್ಲಾ ಸಮಸ್ಯೆ ಪರಿಹರಿಸದೆ ಯಾವುದೆ ಮಾತುಕತೆ ಪ್ರಶ್ನೆಯೇ ಇಲ್ಲ ಎಂದು ಗುರುಪ್ರಸಾದ್ ತಿಳಿಸಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿಪಿನ್ ಜಾಕೆ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.