ಚೈತ್ರಾ ಗೈರು ಹಾಜರಿಗೆ ನ್ಯಾಯಾಧೀಶರು ಗರಂ; ವೈದ್ಯರು ಮತ್ತು ಜೈಲು ಎಸ್.ಪಿ. ಹಾಜರಾಗಲು ಆದೇಶ

Advt_Headding_Middle
Advt_Headding_Middle

ಸುಬ್ರಹ್ಮಣ್ಯದಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದೂ ನಾಯಕಿ ಚೈತ್ರಾ ಕುಂದಾಪುರರವರು ಇಂದು ನ್ಯಾಯಾಲಯಕ್ಕೆ ಹಾಜರಾಗದೆ ಆಸ್ಪತ್ರೆಯಲ್ಲಿ ಮಲಗಿದ್ದುದರಿಂದ ಗರಂಗೊಂಡ ಸುಳ್ಯ ನ್ಯಾಯಾಧೀಶರು ಚೈತ್ರಾ ಕುಂದಾಪುರರವರನ್ನು ಅಂಬ್ಯುಲೆನ್ಸ್ ಮೂಲಕ ಕರೆತಂದು ನ. 5 ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಹಾಗೂ ಜೈಲು ಸುಫರಿಟೆಂಡೆಂಟ್ ಹಾಗೂ ಚೈತ್ರಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೇಸು ಶೀಟ್‌ನ ಸಹಿತ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದ ಅಭೂತಪೂರ್ವ ಘಟನೆ ಇಂದು ನಡೆಯಿತು.


ಚೈತ್ರಾ ಕುಂದಾಪುರ ಹಾಗೂ ಅವರ ಆರು ಮಂದಿ ಸಂಗಡಿಗರನ್ನು ಅ೨೫ ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಂದು ನ್ಯಾಯಾಲಯವು ಅವರನ್ನು ಕಸ್ಟಡಿಗೆ ಒಪ್ಪಿಸಿತ್ತು. ಜೈಲಿಗೆ ಹೋಗಿದ್ದ ಇವರಲ್ಲಿ ಚೈತ್ರಾ ಕುಂದಾಪುರ ಜ್ವರಕ್ಕೆ ಒಳಗಾದುದರಿಂದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಅವರೆಲ್ಲರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು. ಆದರೆ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೆ ಇದ್ದುದರಿಂದ ಪೊಲೀಸರು ಅವರ ೬ ಮಂದಿ ಸಂಗಡಿಗರನ್ನು ಮಾತ್ರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದರಿಂದಾಗಿ ಸುಳ್ಯ ಹಿರಿಯ ವಿಭಾಗದ ನ್ಯಾಯಾಧೀಶರಾದ ಪುರುಷೋತ್ತಮ್‌ರವರು ಗರಂಗೊಂಡರು. ಚೈತ್ರಾರವರಿಗೆ ನಿಜವಾಗಿಯೂ ಯಾವ ಖಾಯಿಲೆ ಕಾಡುತ್ತಿದೆ ಎಂದು ತಿಳಿಯಬೇಕೆಂಬ ಆತಂಕವನ್ನು ವ್ಯಕ್ತಪಡಿಸಿದರಲ್ಲದೆ ನಾವು ಸಣ್ಣ ಸಣ್ಣ ಹಕ್ಕಿಗಳನ್ನು ಹಿಡಿದು ಜೈಲಿಗೆ ತಳ್ಳುತ್ತೇವೆ. ದೊಡ್ಡ ದೊಡ್ಡ ಹಕ್ಕಿಗಳನ್ನು ಬಿಡುತ್ತೇವೆ ಎಂದು ವಿಷಾಧ ವ್ಯಕ್ತಪಡಿಸಿದರು. ಬಳಿಕ ಚೈತ್ರಾರವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಮಂಗಳೂರು ಜೈಲು ಸುಫರಿಟೆಂಡೆಂಟ್‌ರವರು ಚೈತ್ರಾರವರ ಆರೋಗ್ಯದ ಪೂರ್ಣ ವರದಿಯೊಂದಿಗೆ ನ. ೫ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದ್ದು, ಚೈತ್ರಾರವರನ್ನು ಕೂಡಾ ಅಂಬ್ಯುಲೆನ್ಸ್‌ನಲ್ಲಿ ನ್ಯಾಯಾಲಯಕ್ಕೆ ಕರೆತರಬೇಕೆಂದೂ, ಚೈತ್ರಾರಿಗೆ ಅಗತ್ಯವಿದ್ದರೆ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲು ಆದೇಶಿಸಿರುವುದಾಗಿಯೂ ತೆರೆದ ಕೋರ್ಟ್‌ನಲ್ಲಿ ಹೇಳಿದರಲ್ಲದೆ ಆದೇಶ ಬರೆದರು. ಇಂದು ಹಾಜರಾಗಿದ್ದ ೬ ಮಂದಿ ಚೈತ್ರಾ ಸಂಗಡಿಗರನ್ನು ಕೂಡಾ ನ. ೫ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಕೂಡಾ ಆದೇಶಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.