Breaking News

ಪಂಜ : ಸುಳ್ಯ ತಾಲೂಕು ಪ.ಪೂ ಕಾಲೇಜು ಕ್ರೀಡೋತ್ಸವ

Advt_Headding_Middle
Advt_Headding_Middle

ಬಾಲಕರ ವಿಭಾಗ: ಅರಂತೋಡು, ಬಾಲಕಿಯರ ವಿಭಾಗ : ಸುಬ್ರಹ್ಮಣ್ಯ ಸಮಗ್ರ ಪ್ರಶಸ್ತಿ

ಪಠ್ಯದ ಜೊತೆಗೆ ಕ್ರೀಡೆಯಲ್ಲೂ ಶ್ರಮಿಸಿ ಯಶಸ್ಸಿಯಾಗಿ: ಎಸ್ ಅಂಗಾರ

‘ಕ್ರೀಡಾ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ಅದು ಬೆಳೆಯಲು ಕ್ರೀಡಾಕೂಟ ಸಹಕಾರಿ. ಕ್ರೀಡೆಯಲ್ಲಿ ಯುವಜನರು ಹೆಚ್ಚು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಪಠ್ಯದ ಜೊತೆ ಕ್ರೀಡೆಯಲ್ಲೂ ಶ್ರಮಿಸಿ ಯಶಸ್ಸಿಯಾಗಿ’ ಎಂದು ಸುಳ್ಯ ಶಾಸಕ ಎಸ್ ಅಂಗಾರ ಹೇಳಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ದ.ಕ, ಸರಕಾರಿ ಪದವಿಪೂರ್ವ ಕಾಲೇಜು ಪಂಜ ಇದರ ಆಶ್ರಯದಲ್ಲಿ ಪಂಜದ ಸರಕಾರಿ ಪದವಿಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.೨.ರಂದು ನಡೆದ ಸುಳ್ಯ ತಾಲೂಕು ಪದವಿಪೂರ್ವ ಕಾಲೇಜು ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದುಅವರು ಮಾತನಾಡಿದರು.
ಗೌರವ ವಂದನೆ ಸ್ವೀಕರಿಸಿ, ಬಳಿಕ ಕ್ರೀಡಾ ಜ್ಯೋತಿಯಿಂದ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನಗೊಳಿಸಿ ಮಾತನಾಡಿದ ಬೆಳ್ಳಾರೆ ಜಿ.ಪಂ ಸದಸ್ಯ ಎಸ್ ಎನ್ ಮನ್ಮಥ ಶಿಕ್ಷಣಕ್ಕೆ ಪೂರಕವಾಗಿ ಕ್ರೀಡಾ ಚಟುವಟಿಕೆ ಮಹತ್ವ ಪಡೆದಿದೆ ಎಂದರು. ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕರಿಕ್ಕಳ, ಪ.ಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಎಂ, ಪ.ಪೂ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕಿ ಶೀಲಾವತಿ ಕೊಳಂಬೆ, ತಾ.ಪಂ ಮಾಜಿ ಅಧ್ಯಕ್ಷೆ ಸುವರ್ಣಿನಿ, ಪಂಜ ಲಯನ್ಸ್ ಅಧ್ಯಕ್ಷ ತುಕರಾಮ ಯೇನೆಕಲ್ಲು, ಪಂಜ ಗ್ರಾ.ಪಂ ಅಧ್ಯಕ್ಷ ಕಾರ‍್ಯಪ್ಪ ಗೌಡ ಚಿದ್ಗಲ್, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಯೋಜಕ ಪ್ರೇಮನಾಥ್ ಶೆಟ್ಟಿ, ಸಿ ಬಿ ಸಿ ಕಾರ್ಯಾಧ್ಯಕ್ಷ ಚೀನಪ್ಪ ಕಾಣಿಕೆ, ಬೆಳ್ಳಾರೆ ಕಾಲೇಜು ಪ್ರಾಂಶುಪಾಲ ಯು ಸುಬ್ರಾಯ ಗೌಡ, ಸುಳ್ಯ ಪ.ಪೂ ಕಾಲೇಜು ಮುಖ್ಯಸ್ಥ ಚಿದಾನಂದ ಕೆ, ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ, ಸಹಶಿಕ್ಷಕ ಟೈಟಸ್ ವರ್ಗೀಸ್, ಹಿರಿಯ ವಿದ್ಯಾರ್ಥಿ ಸಂಘದ ಸವಿತಾರ ಮುಡೂರು, ದೈ.ಶಿ.ಶಿಕ್ಷಕ ಯೋಗೀಶ್ ಚಿದ್ಗಲ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ವನಿತಾ, ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ ವಾಸುದೇವ ಮೇಲ್ಪಾಡಿ ಮೊದಲಾದವರು ವೇದಿಕೆಯಲ್ಲಿದ್ದರು. ಇದೇ ವೇಳೆ ಕ್ರೀಡಾ ಕೂಟಕ್ಕೆ ಧನ ಸಹಾಯ ನೀಡಿದ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ನೇರಳ ಮತ್ತು ಲೀಲಾವತಿ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ‍್ಯಕ್ರಮದಲ್ಲಿ ಆಗಮಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ,ವಂದನಾ ಸ್ವೀಕಾರ ನಡೆಯಿತು.
ಕಾರ‍್ಯಕ್ರಮದಲ್ಲಿ ಉಪನ್ಯಾಸಕಿ ಭವ್ಯ ಬಿ ಪ್ರಾರ್ಥಿಸಿದರು.ಪಂಜ.ಪ.ಪೂ ಕಾಲೇಜು ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ,ಉಪನ್ಯಾಸಕ ವೆಂಕಪ್ಪ ಗೌಡ ವಂದಿಸಿದರು. ತೀರ್ಥರಾಮ ಕೊಡಂಕೇರಿ ಕಾರ‍್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಪ.ಪೂ ಕಾಲೇಜುಗಳ ಮುಖ್ಯಸ್ಥರು. ದೈ.ಶಿ.ಶಿಕ್ಷಕರು, ತಾ. ದೈ ಶಿಕ್ಷಣ ಶಿಕ್ಷಕರ ಸಂಘದ ಸದಸ್ಯರು. ಮುಖ್ಯ ಶಿಕ್ಷಕರ ಸಂಘದ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಕ್ರೀಡಾಳುಗಳು ಉಪಸ್ಥಿತರಿದ್ದರು.
ಸಮಾರೋಪ :ಸಮಾರೋಪ ಸಮಾರಂಭದಲ್ಲಿ ಗ್ರಾ,ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರು ಶುಭ ಹಾರೈಸಿದರು.ಧ್ವಜ ಅವರೋಹಣವನ್ನು ಗ್ರಾ.ಪಂ.ಸದಸ್ಯ ಲೋಕೇಶ್ ಬರೆಮೇಲು ಮಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಸದಸ್ಯರಾದ ಲಿಗೋಧರ ಆಚಾರ್ಯ, ಹೇಮಲತ ಪಲ್ಲೋಡಿ, ಪಿ ಡಿ ಒ ಮಣಿಯಾನ ಪುರುಷೋತ್ತಮ, ಹಾಗೂ ಕಡಬ ಕಾಲೇಜಿನ ಪ್ರಾಂಶುಪಾಲ ಜನಾರ್ಧನ, ಸಿ ಬಿ ಸಿ ಕಾರ್ಯಾಧ್ಯಕ್ಷ ಚೀನಪ್ಪ ಕಾಣಿಕೆ, ಹಿರಿಯ ವಿದ್ಯಾರ್ಥಿ ಸಂಘದ ಸವಿತಾರ ಮುಡೂರು ,ದೈ.ಶಿ.ಶಿಕ್ಷಕ ಯೋಗೀಶ್ ಚಿದ್ಗಲ್ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಸಹಶಿಕ್ಷಕ ಟೈಟಸ್ ವರ್ಗೀಸ್ ಸ್ವಾಗತಿಸಿದರು. ಶಿಕ್ಷಕ ಮಹಾಬಲ ಕುಳ ನಿರೂಪಿಸಿದರು.ಕ್ರೀಡಾ ಕಾರ್ಯದರ್ಶಿ ,ಉಪನ್ಯಾಸಕ ವೆಂಕಪ್ಪ ಗೌಡ ವಂದಿಸಿದರು.
ಫಲಿತಾಂಶ : ಎನ್ ಪಿ ಯು ಸಿ ಅರಂತೋಡು ಬಾಲಕರ ವಿಭಾಗದಲ್ಲಿ ೬೦ ಅಂಕ ಪಡೆದು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಎಸ್ ಎಸ್ ಪಿ ಯು ಸುಬ್ರಹ್ಮಣ್ಯ ಬಾಲಕಿಯರ ವಿಭಾಗದಲ್ಲಿ ೩೮ ಅಂಕ ಪಡೆದು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಬಾಲಕಿಯರಲ್ಲಿ ಎಸ್ ಎಸ್ ಪಿ ಯು ಸಿ ಸುಬ್ರಹ್ಮಣ್ಯ ವಿದ್ಯಾರ್ಥಿನಿ ತೀರ್ಥಾಕುಮಾರಿ ಅಂಕ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ. ರೋಟರಿ ಪಿ ಯು ಸಿ ಮಿತ್ತಡ್ಕ ವಿದ್ಯಾರ್ಥಿ ಹೃತಿಕ್ ಗೋರಡ್ಕ ಅಂಕ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.