ಸಂತ ಬ್ರಿಜಿದ್ ದೇವಾಲಯದಲ್ಲಿ ಕಥೋಲಿಕ ಸಭಾ ಸುಳ್ಯ ಘಟಕದ ವತಿಯಿಂದ ಹಿರಿಯರ ದಿನಾಚರಣೆ

Advt_Headding_Middle
Advt_Headding_Middle

ಸುಳ್ಯದ ಆಯರ್ಲೇಂಡಿನ ಸಂತ ಬ್ರಿಜಿದ್ ದೇವಾಲಯದಲ್ಲಿ ಕಥೋಲಿಕ್ ಸಭಾ ಸುಳ್ಯ ಘಟಕ ಇದರ ವತಿಯಿಂದ ಸುಳ್ಯ ವಿಚಾರಣ ಗುರುಗಳಾದ ವಿನ್ಸೆಂಟ್ ಡಿ ಸೋಜಾ ಇವರ ಮಾರ್ಗದರ್ಶನದಲ್ಲಿ ಹಿರಿಯರನ್ನು ಗೌರವಿಸುವ ಹಾಗೂ ಅವರಿಗೆ ಮನರಂಜನೆಯನ್ನು ಒದಗಿಸುವ ನಿಟ್ಟಿನಲ್ಲಿ ಹಿರಿಯರ ದಿನಾಚರಣೆಯನ್ನು ನ. 4 ರಂದು ಆಯೋಜಿಸಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ಧರ್ಮಗುರು ವಿನ್ಸೆಂಟ್ ಡಿ ಸೋಜಾರವರು ವಹಿಸಿಕೊಂಡು ಚರ್ಚ್ ಧರ್ಮಕೇಂದ್ರಕ್ಕೆ ಒಳಪಟ್ಟ ಹಿರಿಯರನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದ ಉದ್ಘಾಟಣೆಯನ್ನು ವಿಚಾರಣ ಕೇಂದ್ರದ ಸದಸ್ಯೆ ಶ್ರೀಮತಿ ಫ್ಲೋರಾ ಡಿ’ ಸೋಜಾ ದೀಪ ಬೆಳಗಿಸಿ ನೆರವೇರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಥೋಲಿಕ್ ಸಭಾ ರಿ ಸುಳ್ಯ ಘಟಕದ ಅಧ್ಯಕ್ಷ ರೋಬಾರ್ಟ್ ಡಿ ಸೋಜಾ, ಚರ್ಚ್ ಸಹಾಯಕ ಗುರುಗಳಾದ ಪೌಲ್ ಡಿ ಸೋಜಾ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಪೀಟರ್ ಡಿ ಸೋಜಾ, ಕಾರ್ಯದರ್ಶಿ ಸಂತೋಷ್, ರೇಮಂಡ್ಸ್ ಕಾನ್ವೆಂಟಿನ ಸುಪೀರಿಯರ್ ಸಿ| ಜಾನೆಟ್ ಲೋಬೊ, ಸಿರಿಲ್ ಗೊನ್ಸಾಲ್ವಿಸ್, ಜೂಲಿಯನ ಕ್ರಾಸ್ತ ಮತ್ತಿತರರು ಉಪಸ್ಥಿತರಿದ್ದರು. ಡೇವಿಡ್ ಕ್ರಾಸ್ತ ಬಳಗ ಹಿರಿಯರಿಗೆ ವಿವಿಧ ಬಗೆಯ ಆಟೋಟಗಳನ್ನು ಆಯೋಜಿಸಿದ್ದರು. ಭೋಜನದ ವ್ಯವಸ್ಥೆಯನ್ನು ವಿಚಾರಣ ಗುರುಗಳು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಸಿರಿಲ್ ಡಿ ಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.