ಪಂಜ ಲಯನ್ಸ್ ಕ್ಲಬ್ : ತಾಲೂಕು ಮಟ್ಟದ ಹಿರಿಯರ ಕ್ರೀಡಾಕೂಟ

Advt_Headding_Middle
Advt_Headding_Middle

ನಗರ-ಗ್ರಾಮೀಣ ಕ್ರೀಡಾಪಟಗಳನ್ನು ಪ್ರೋತ್ಸಾಹಿಸುವ ಕೂಟ

“ಮನುಷ್ಯನ ದೇಹದ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ.ಕ್ರೀಢಾ ಮನೋಭವಗಳು ಬೆಳೆಯಲು,ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರನ್ನು ಒಂದು ಗೂಡಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಸುವ ಕೂಟ” ಎಂದು ಲಯನ್ಸ್ ಪ್ರಾಂತ್ಯ ಅಧ್ಷಕ್ಷ ಜಾಕೆ ಮಾಧವ ಗೌಡ ಹೇಳಿದರು.ಅವರ ನ.4 ರಂದು ಪಂಜ ಲಯನ್ಸ್ ಕ್ಲಬ್, ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ ಇದರ ಸಹಭಾಗಿತ್ವದಲ್ಲಿ ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಜರುಗಿದ ೮ನೇ ತಾಲೂಕು ಮಟ್ಟದ ಹಿರಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ತುಕರಾಮ ಏನೆಕಲ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ರಂಗಯ್ಯ, ಕೂತ್ಕುಂಜ ಶಿವಾಜಿ ಯುವಕ ಮಂಡಲದ ಅಧ್ಯಕ್ಷ ರಜತ್ ಚಿದ್ಗಲ್, ಸುಳ್ಯ ವಿಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ವಿಜಯಾನಂದ ಸುಳ್ಯ, ಹಿರಿಯರ ಕ್ರೀಡಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ , ರಾಜ್ಯ ಉಪಾಧ್ಯಕ್ಷ ಚಂದ್ರಹಾಸ ಎಸ್.ಎನ್.,ಉಪನ್ಯಾಸಕ ವೆಂಕಪ್ಪ ಗೌಡ ಹಾಗೂ ಲಯನ್ಸ್ ಕ್ಲಬ್ ಕೋಶಾಧ್ಯಕ್ಷ ಚೀನಪ್ಪ ಕಾಣಿಕೆ ಬಾಲಕೃಷ್ಣ ಗೌಡ ಕುದ್ವ, ಪುತ್ತೂರು ತಾ. ಹಿರಿಯರ ಕ್ರೀಡಾಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಸರೋಜಿನಿ ಕೆಮ್ಮೂರು ಪ್ರಾರ್ಥಿಸಿದರು.ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿದರು. ಶಶಿಧರ ಪಳಂಗಾಯ ನಿರೂಪಿಸಿದರು. ಚೀನಪ್ಪ ಕಾಣಿಕೆ ವಂದಿಸಿದರು.
೮೩ ವರುಷದ ನಾರಾಯಣಯ್ಯ ಕಟ್ಟ: ೮೩ ವರುಷದ ಕೊಲ್ಲಮೊಗ್ರ ಗ್ರಾಮದ ಕಟ್ಟ ಅರ್ಚಕ ನಾರಾಯಣಯ್ಯ ರು ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಚಿನ್ನ ಪದಕ ಗಳಿಸಿದರು.ಈ ಹಿಂದೆ ಕೂಡ ಅವರು ಕ್ರೀಡಾ ಕೂಟದಲ್ಲಿ ಭಾಗವಹಸಿ ಪದಕ ಗಳಿಸಿದ್ದಾರೆ. ಅವರು ಕೂಟದಲ್ಲಿ ಭಾಗವಹಿಸಿ ಯುವ ಜನತೆಗೆ ಮಾದರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.