ಹಿರಿಯರ ಕ್ರೀಡಾಕೂಟ: ಮಂಡೆಕೋಲಿನ 5 ಮಂದಿಗೆ ಬಹುಮಾನ

Advt_Headding_Middle
Advt_Headding_Middle

ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ. 4 ರಂದು ನಡೆದ ತಾಲೂಕು ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಮಂಡೆಕೋಲು ಗ್ರಾಮದ 5  ಮಂದಿ ಭಾಗವಹಿಸಿ ಹಲವು ಬಹುಮಾನ ಪಡೆದುಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡರವರು ಹೈಜಂಪ್ ಪ್ರಥಮ, ಜಾವಲಿನ್ ತ್ರೋದಲ್ಲಿ ತೃತೀಯ ಬಹುಮಾನ ಪಡೆದುಕೊಂಡರು.

ಮಂಡೆಕೋಲು ಸಹಕಾರಿ ಸಂಘದ ನಿರ್ದೇಶಕಿ ತುಳಸಿನಿ ಬಾಲಚಂದ್ರರು 1೦೦ ಮೀ. ಓಟದಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ಪ್ರಥಮ, ಲಾಂಗ್‌ಜಂಪ್‌ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಗ್ರಾ.ಪಂ. ಸದಸ್ಯರಾಗಿರುವ ಚಂದ್ರಶೇಕರ ಆಳಂಕಲ್ಯರು ಶಾಟ್‌ಪುಟ್‌ನಲ್ಲಿ ದ್ವಿತೀಯ, ಲಾಂಗ್‌ಜಂಪ್‌ನಲ್ಲಿ ದ್ವಿತೀಯ, ಜಾವಲಿನ್ ಎಸೆತದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.

ಅಂಚೆ ಉದ್ಯೋಗಿಯಾಗಿರುವ ಸೀತಾರಾಮ್‌ರವರು 5೦೦೦ ಮೀ. ವೇಗ ನಡಿಗೆಯಲ್ಲಿ ಪ್ರಥಮ, ಲಾಂಗ್‌ಜಂಪ್‌ನಲ್ಲಿ ಪ್ರಥಮ, ಹೈಜಂಪ್‌ನಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ನಾರಾಯಣ ಕಲ್ಲಡ್ಕರವರು 1೦೦ ಮೀ. ಓಟ ಹಾಗೂ 4೦೦ ಮೀ. ಓಟದಲ್ಲಿ ಪ್ರಥಮ, 2೦೦ ಮೀ. ಓಟದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.