ಸುಳ್ಯದಲ್ಲಿ ಶಿಕ್ಷಕ ಕವಿ ಗೋಷ್ಠಿ ಸಂಭ್ರಮ

Advt_Headding_Middle
Advt_Headding_Middle

ಸುವಿಚಾರ ಸಾಹಿತ್ಯ ವೇದಿಕೆ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ೪ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುವ ಸಾಹಿತ್ಯ ಸಂಭ್ರಮದ ಪ್ರಯುಕ್ತ ಶಿಕ್ಷಕ ಕವಿಗೋಷ್ಠಿ ಸಂಭ್ರಮವು ನ. 6ರಂದು ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಿತು.


ಜಾನಪದ ಸಂಶೋಧಕರಾದ ಡ. ಸುಂದರ್ ಕೇನಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಡುಬೆ ಸ.ಕಿ.ಪ್ರಾ.ಶಾಲಾ ಶಿಕ್ಷಕಿ ಪ್ರಮೀಳಾ ರಾಜ್‌ರವರ ’ಸಂಗೀತಾ ನನ್ನೆದೆಯ ಭಾವಗಳ ಯಾನ’ ಕವನ ಸಂಕಲನ ಬಿಡುಗಡೆಗೊಂಡಿತು. ಬೆಳ್ಳಾರೆ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಯು.ಸು.ಗೌ ಗುತ್ತಿಗಾರುರವರು ಕವನ ಸಂಕಲನ ಬಿಡುಗಡೆಗೊಳಿಸಿದರು.
ನಂತರ ಕುತ್ಯಾಳ ನಾಗಪ್ಪ ಗೌಡರ ಅಧ್ಯಕ್ಷತೆಯಲ್ಲಿ ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.


ಕವಿಗೋಷ್ಠಿಯಲ್ಲಿ ಸಂಜೀವ ಕುದ್ಪಾಜೆ, ಪರಮೇಶ್ವರಿ ಪ್ರಸಾದ್ ಜಾಲ್ಸೂರು, ಆನಂದ ಯಸಳೂರು, ರಾಶಿ ಎಂ. ಆರ್. ಪಿರಿಯಾಪಟ್ಟಣ, ರೇವತಿ ಕೊಡಪಾಡಿ, ಕೆಂಚವೀರಪ್ಪ ಮರ್ಕಂಜ, ಮಮತಾ ಪಡ್ಡಂಬೈಲ್ ಕೊಡಿಯಾಲ, ರಾಜೇಶ್ವರಿ ಶಿವಾನಂದ ಕಲ್ಲಡ್ಕ, ಸಾನು ಉಬರಡ್ಕ, ಶರಣಪ್ಪ ಮರಕ್ಕಡ, ಸುಚಿತ್ರಾ ಉಡುಪಿ, ಪ್ರಜ್ಞಾ ಕುಲಾಲ್ ಕಾವು, ಒಬಳೇಶ ಗುಟ್ಟೆ, ಪ್ರಣೀತಾ ಬೆಳ್ಳೂರು, ಪ್ರಮೀಳಾ ರಾಜ್ ನಿಡುಬೆ, ಪ್ರೇಮಾ ಉದಯಕುಮಾರ್, ಯಶೋದಾ ಎಂ.ಬಿ. ಕೋಲ್ಚಾರು, ಶಿವಕುಮಾರ್ ಎಸ್.ಸವಣೂರು, ಶುಭಾ ಡಿ. ಬಾಳಿಲ, ಸಹನಾ ಗಿರೀಶ್, ಶಿವಪ್ರಸಾದ್ ಬಾಳಿಲ ಭಾಗವಹಿಸಿದ್ದರು. ಶಶಿಧರ ಎಂ.ಜೆ. ಕವಿಗೋಷ್ಠಿ ನಿರೂಪಿಸಿದರು.

ಸುವಿಚಾರ ಸಾಹಿತ್ಯ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ಗಿರಿಜಾ ಎಂ.ವಿ. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಗೌರವ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.