ಚೈತ್ರಾ ಕುಂದಾಪುರ ಜೈಲಿನಿಂದ ಬಿಡುಗಡೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯದಲ್ಲಿ ನಡೆದಿದ್ದ ಘರ್ಷಣೆ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ಬೆಂಬಲಿಗರು ಜಾಮೀನು ಲಭಿಸಿದ ಬಳಿಕ ನ. ೭ರಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಅವರಿಗೆ ಪುತ್ತೂರು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ.೫ರಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ತೀರ್ಪಿನ ಪ್ರತಿಯನ್ನು ಸುಳ್ಯ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ನ.೫ರಂದು ಸಂಜೆ ತೀರ್ಪು ಪ್ರಕಟವಾಗಿದ್ದರೂ ಅಂದು ಸುಳ್ಯ ನ್ಯಾಯಾಲಯಕ್ಕೆ ತೀರ್ಪಿನ ಪ್ರತಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ, ನ.೬ರಂದು ದೀಪಾವಳಿ ರಜೆ ಹಿನ್ನಲೆ ನ.೭ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಆ ಬಳಿಕ ಮಂಗಳೂರು ಜೈಲಿಗೆ ಜಾಮೀನು ಮಂಜೂರು ಪ್ರತಿ ಸಲ್ಲಿಸಿದ ಬಳಿಕ ಅರೋಪಿಗಳನ್ನು ಬಿಡುಗಡೆ ಮಾಡಲಾಯಿತು.
ಘಟನೆ ಬಳಿಕ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅಸೌಖ್ಯದ ಕಾರಣ ನೀಡಿದ್ದರಿಂದ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಕೆ ಮೂರು ದಿನ ಜೈಲು ವಾಸ ಅನುಭವಿಸಬೇಕಾಯಿತು. ಆಕೆ ಜತೆಗಿದ್ದ ಸುದೀನ ಪೂಜಾರಿ, ವಿನಯ್, ಮಣಿಕಂಠ, ನಿಖಿಲ್, ಹರೀಶ್ ನಾಯಕ್ ಯಾನೆ ಶ್ರೀಕಾಂತ್ ಹಾಗೂ ಹರೀಶ್ ಖಾರ್ವಿ ಕೂಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದ ವಿಚಾರದಲ್ಲಿ ಗುರುಪ್ರಸಾದ್ ಪಂಜ ಹಾಗೂ ಬೆಂಬಲಿಗರನ್ನು ಪ್ರಶ್ನಿಸಲು ಬಂದಿದ್ದ ಚೈತ್ರಾ ಕುಂದಾಪುರ ಮತ್ತು ತಂಡಗಳ ನಡುವೆ ಅ.೨೪ರಂದು ಹೊಡೆದಾಟ ನಡೆದಿತ್ತು. ಆ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಂಧಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.