Breaking News

ಕನ್ಯಾನ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ವಿಶಿಷ್ಟ ರೀತಿಯ ದೀಪಾವಳಿ

Advt_Headding_Middle
Advt_Headding_Middle

ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮೇಳೈಸುತ್ತಿದ್ದರೆ ವಿಟ್ಲ ಸಮೀಪದ ಕನ್ಯಾನದ ಭಾರತ ಸೇವಾಶ್ರಮದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕಾರ್ಯರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿಕೊಂಡರು.
ಅನಾಥ ಮಕ್ಕಳು, ವಯೋವೃದ್ಧರು, ಬುದ್ಧಿಮಾಂದ್ಯ ಹಾಗೂ ದಿವ್ಯಾಂಗಚೇತನ ೨೫೦ ರಷ್ಟು ಮಂದಿಯನ್ನು ಪೋಷಿಸಿಕೊಂಡು ಬರುತ್ತಿರುವ ಭಾರತ ಸೇವಾಶ್ರಮದಲ್ಲಿ ಬುಧವಾರ ಹಬ್ಬದ ವಾತಾವರಣ. ದೀಪಾವಳಿಯ ವಿಶಿಷ್ಟ ರೀತಿಯ ಆಚರಣೆ ಸಂಸ್ಥೆಯಲ್ಲಿ ನಡೆಯಿತು. ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿಗಳು ಆಶ್ರಮವಾಸಿಗಳ ಜೊತೆ ಬೆರೆತು ದೀಪಾವಳಿ ಆಚರಿಸಿದರು.
ಆಶ್ರಮದಲ್ಲಿ ಕಲಿಯುತ್ತಿರುವ ೩೨ ಮಂದಿ ಅನಾಥ ಮಕ್ಕಳಿಗೆ ಬರೆಯುವ ಪುಸ್ತಕ ಸೇರಿದಂತೆ ಸಹಾಯಧನವನ್ನು ದೀಪಾವಳಿಯ ಕೊಡುಗೆಯಾಗಿ ನೀಡಲಾಯಿತು. ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು. ಮಕ್ಕಳು ಪಟಾಕಿ ಹಚ್ಚಿ ಸಂಭ್ರಮಿಸಿದರು. ಆಶ್ರಮದಲ್ಲಿರುವ ವಯೋವೃದ್ಧರ ಜೊತೆ ಕುಶಲೋಪರಿ ನಡೆಸಿ ಬದುಕಿನ ಶಿಕ್ಷಣ ಪಡೆದರು.
ಆಶ್ರಮದ ಕಾರ್ಯದರ್ಶಿ ಈಶ್ವರ ಭಟ್ ದೀಪ ಬೆಳಗುವುದರ ಮೂಲಕ ದೀಪಾವಳಿ ಆಚರಣೆಯನ್ನು ಉದ್ಘಾಟಿಸಿದರು. ಆಶ್ರಮದ ವೈದ್ಯಾಧಿಕಾರಿ ಡಾ| ಶಂಕತರ ಭಟ್, ಡಾ| ರಾಮಚಂದ್ರ ಭಟ್, ಸವಿತಾ, ಶಂಕರ ಭಟ್ಟಾಚಾರ್ಯ, ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಟ್ರಸ್ಟಿ ಸಂಜಯ್ ನೆಟ್ಟಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ್ ನಾಯಕ್ ಸ್ವಾಗತಿಸಿ, ವಂದಿಸಿದರು. ಜ್ಞಾನದೀಪ ಸಂಸ್ಥೆಯ ಸಿಬಂದಿ ವರ್ಗದವರು ಸೇರಿದಂತೆ ಸಂಸ್ಥೆಯ ಬೆಳ್ಳಾರೆ ಮತ್ತು ಸುಳ್ಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.