ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ಸಮಾರಂಭ

Advt_Headding_Middle
Advt_Headding_Middle

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ದಶಮಾನೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ಕ್ರೀಡಾಕೂಟವು ನ. 6 ರಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನಾಥ ಕಲ್ಪಡರವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಸಲುವಾಗಿ ಸಭೆ ನಡೆಯಿತು.

ಮುಖ್ಯ ಅತಿಥಿಯಾಗಿ ಎಣ್ಮೂರು ಶ್ರೀ ಆದಿಬ್ರಹ್ಮ ಕೋಟಿ ಚೆನ್ನಯ್ಯ ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಶಾಲಾ ಸಂಚಾಲಕ ಜಯಸೂರ‍್ಯ ರೈ ಮಾದೋಡಿ, ಬೆಳ್ಳಿಹಬ್ಬ ಸಮಿತಿ ಅದ್ಯಕ್ಷ ರಮೇಶ್ ಬೆಟ್ಟ, ಪ್ರ.ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಪುತ್ತೂರು ಹಿರಿಯರ ಕ್ರೀಡಾಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಕರಂದ್ಲಾಜೆ, ಆಂಗ್ಲಮಾದ್ಯಮ ಶಾಲಾ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ವೇದಿಕೆಯಲ್ಲಿದ್ದರು.


ಶಾಲಾ ವಿದ್ಯಾರ್ಥಿಗಳಾದ ದಿವೀಶ, ಲೇಖನ್, ಆಕಾಶ್ ಪ್ರಾರ್ಥಿಸಿದರು. ಸಹಶಿಕ್ಷಕ ಸುಬ್ರಹ್ಮಣ್ಯ, ವಿದ್ಯಾರ್ಥಿಗಳಾದ ವಿನಯ ವಿ. ಶೆಟ್ಟಿ ಮತ್ತು ನಿತ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಗಿರಿಶಂಕರ ಸುಲಾಯ ಪ್ರಸ್ತಾವನೆಗೈದರು. ವಸಂತ ರೈ ಕಾರ್ಕಳ ಸ್ವಾಗತಿಸಿದರು. ಶ್ರೀಮತಿ ಸರಸ್ವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.