ನಿಂತಿಕಲ್ಲು : ಕೆ.ಎಸ್.ಜಿ.ಸಂಸ್ಥೆ ದಶಮಾನೋತ್ಸವ ಪ್ರಥಮ ಕಾರ್ಯಕ್ರಮ – ಕೊಯಿಲ್ದ ಲೇಸ್

Advt_Headding_Middle
Advt_Headding_Middle


ನಿಂತಿಕಲ್ಲು ವರ್ಷನಗರದ ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಗಳ ೧೦ನೇ ವರ್ಷದ ನೆನಪಿಗಾಗಿ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿರುವುದು. ಇದರ ಅಂಗವಾಗಿ 1೦ ಕಾರ್ಯಗಳಲ್ಲೊಂದಾದ ಕೊಯಿಲ್ದ ಲೇಸ್ ಕಾರ್ಯಕ್ರಮವು ನ. 1೦ರಂದು ಹುದೇರಿ ರುಕ್ಮಯ್ಯ ಗೌಡ ಮತ್ತು ದಾಮೋದರ ಗೌಡ ಹುದೇರಿಯವರ ಕಟಾವು ಹಂತದಲ್ಲಿರುವ ಪೈರನ್ನು ತುಳುನಾಡ ಸಂಸ್ಕೃತಿಯಂತೆ ಭೂಮಿ ದೇವರಿಗೆ ಎಲೆ ಅಡಿಕೆ ಹಾಲು ಎರೆದು ಕಾರ್ಯಕ್ರಮ ನಡೆಯಿತು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಮುಗುಪ್ಪು ಕೂಸಪ್ಪ ಗೌಡರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪ್ರ.ಕಾರ್ಯದರ್ಶಿ ಕುಮಾರಸ್ವಾಮಿ ಕೆ.ಎಸ್., ಸಂಚಾಲಕರುಗಳಾದ ಆನಂದ ಗೌಡ ನೂಜಿ, ಸುಂದರ ಗೌಡ ಆರೆಂಬಿ, ಆನಂದ ಬೆಳ್ಳಾರೆ, ಬಾಲಕೃಷ್ಣ ರೈ ಪಾದೆಕಲ್ಲು, ಅಜಿತ್ ಐವರ್ನಾಡು, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ, ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈ.ಟಿ., ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಶಿಕ್ಷಕರೇತರ ತಂಡದ ಉಪಸ್ಥಿತಿಯಲ್ಲಿ ಕೊಯಿಲ್ದ ಲೇಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹುದೇರಿ ಲಿಂಗಪ್ಪ ಗೌಡ, ಕುರುಣಾಕರ ಗೌಡ ಹುದೇರಿ, ವಸಂತ ಹೆಚ್. ಹುದೆರಿ, ಗ್ರಾಮ ಲೆಕ್ಕಾಧಿಕಾರಿ ಪ್ರೇಮಲತಾ, ಗ್ರಾಮ ಸಹಾಯಕ ಸೋಮಪ್ಪ ಗೌಡ ಮೂಲ್ಯತ್ತಾರು, ಸ್ಥಳೀಯರಾದ ಪುಣ್ಯಶ್ರೀ, ನವ್ಯಶ್ರೀ, ವಾಣಿಶ್ರೀ, ಭವಾನಿ ಹುದೇರಿ, ದಮಯಂತಿ, ವಿಶ್ವನಾಥ ಹುದೇರಿ, ಎಣ್ಮೂರು ಪಟ್ಟಾಂಗ ವೇದಿಕೆಯ ನಿರ್ದೇಶಕರು ಹಾಗೂ ಎಸ್.ವಿ.ಎಸ್. ನರ್ಸರಿಯ ನಿರ್ವಾಹಕರಾದ ಶೇಖರ ಗೌಡ ಕುದ್ಪಾಜೆ, ವಿವೇಕ್ ಆಳ್ವ, ಐಟಿಐ ಪ್ರಾಚಾಯ ಗುರುಪ್ರಸಾದ್ ತೋಟ ಭಾಗವಹಿಸಿದ್ದರು.

ಪಿ.ಯು. ಕಾಲೇಜು ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ವಂದಿಸಿದರು. ಪ್ರಸನ್ನ ವೈ.ಟಿ. ಕಾರ್ಯಕ್ರಮದ ಬಗ್ಗೆ ವಿವಿರ ನೀಡಿ ಪರಿಚಯಿಸಿದರು. ಕಿರಣ್ ಕೆ.ಟಿ., ಉಜ್ವಲ್ ಕೆ.ಎಚ್., ಪ್ರಸಾದ್ ಕುಮಾರ್, ಅಜಿತ್, ಮೋಹನ್ ಕಡೀರ ಸಂಯೋಜನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.