ಪಂಜ: ಕೃಷಿ ಮಾಹಿತಿ ಕಾರ್ಯಾಗಾರ

Advt_Headding_Middle
Advt_Headding_Middle

ಸಾವಯವ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಉಳಿವು-ಡಾ.ಮಂಜುನಾಥ್

“ಹಟ್ಟಿ ಗೊಬ್ಬರದಲ್ಲಿ 13 ಪೋಷಕಾಂಶ ಇದೆ. ರಾಸಾಯನಿಕದಲ್ಲಿ ಕೇವಲ ಮೂರು ಪೋಷಕಾಂಶ ಇರುತ್ತದೆ, ಪ್ರಸ್ತುತ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಹೆಚ್ಚು ಸಿಂಪಡಿಸುತ್ತಿದ್ದೇವೆ.ಬೆಳೆಗಳಿಗೂ ರೋಗ ಜಾಸ್ತಿ,ಮನುಷ್ಯನಿಗೂ ರೋಗ ಜಾಸ್ತಿಯಾಗಿದೆ.ಉತ್ತಮ ಬೆಳೆಯ ಪಡೆಯಲು,ಕೃಷಿಗೆ ಬರುವ ರೋಗಗಳ ತಡೆಯಲು ಮತ್ತು ಈ ಭೂಮಿ ಫಲವತ್ತತೆಯನ್ನು ಶಾಶ್ವತವಾಗಿ ಉಳಿಸಲು.ಸಾವಯವ ಗೊಬ್ಬರವನ್ನು ಬಳಸಿ.ಈ ಮೂಲಕ ಭೂಮಿಯ ಋಣವನ್ನು ತೀರಿಸಿ” ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ,ಪ್ಯೂಚರ್ ಬಯೋಟೆಕ್ ಆಡಳಿತ ನಿರ್ದೇಶಕ ಡಾ.ಮಂಜುನಾಥ್ ಹೇಳಿದರು ಅವರು ಪಂಜ ಪ್ರಾ.ಕೃ.ಪ.ಸ.ಸಂಘ, ಎಸ್.ಎಲ್.ಎನ್.ಗ್ಲೋಬಲ್ ಅಗ್ರಿ ಸೊಲ್ಯೂಷನ್ ಹಾಗೂ,ಪ್ಯೂಚರ್ ಬಯೋಟೆಕ್- ಧಾರವಾಡ ಕೃಷಿ ವಿಶ್ವವಿದ್ಯಾಲಯ ಇವರ ಸಹಯೋಗದೊಂದಿಗೆ ಪಂಜ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನ.೫.ರಂದು ಜರುಗಿದ ‘ಬೆಳೆಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆ’ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾರ‍್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಯವರು ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿ “ ಮನುಷ್ಯನು ಮಾಡಿದ ತಪ್ಪಿನಿಂದ ಕಲುಷಿತ ವಾತಾವರಣ ,ಭೂಮಿಯ ಫಲವತ್ತತೆ ನಾಶವಾಗುತ್ತಿದೆ ಮತ್ತು ಕೃಷಿಯಲ್ಲಿ ಅನೇಕ ನಷ್ಟಗಳನ್ನು ಕಾಣುತ್ತಿದ್ದೇವೆ ಇವುಗಳ ಬಗ್ಗೆ ಜಾಗೃತಿ ಗೊಂಡು ನಮ್ಮ ಮುಂದಿನ ಭವಿಷ್ಯತಿಗೆ ಭೂಮಿಯ ಫಲವತ್ತತೆ ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗ ಬೇಕಾಗಿದೆ” ಎಂದು ಹೇಳಿದರು.
“ಹಿಂದೆ ನಾಲ್ಕು ತಿಂಗಳು ಸೌತೆ ಕಾಯಿಯನ್ನು ಇಟರೂ ಅದು ಹಾಳಾಗುತ್ತಿರಲಿಲ್ಲ.ಈಗ ಅದೇ ಸೌತೆ ಕಾಯಿ ಎರಡು ದಿನಗಳಲ್ಲಿ ಹಾಳಾಗುತ್ತಿದೆ. ಹಿಂದಿನ ಕೃಷಿ ಪದ್ದತಿಯನ್ನು ಬಿಟ್ಟಿರುವುದದೇ ಮೂಲ ಕಾರಣ . ಈಗ ಕೃಷಿಗಾಗಿ ಅತೀಯಾದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದು,ಅದನ್ನು ತಿಂದ ಮನುಷ್ಯನ ಆಯುಷ್ಯವೇ ಕಡಿಮೆಯಾಗುತ್ತಿದೆ”. ಎಂದು ಅತಿಥಿ ಸ್ಥಾನದಿಂದ ಮಾತನಾಡಿದ ಎಸ್.ಎಲ್.ಎನ್.ಗ್ಲೋಬಲ್ ಅಗ್ರಿ ಸೊಲ್ಯೂಷನ್‌ನ ವಿಷ್ಣು ಮೂರ್ತಿ ಜಿ ರಾವ್ ಹೇಳಿದರು. ಪಂಜ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ  ಲೋಕೇಶ್ ಬರೆಮೇಲು ಸ್ವಾಗತಿಸಿದರು. ಲೋಹಿತ್ ಎಣ್ಣೆಮಜಲು ನಿರೂಪಿಸಿದರು. ನೇಮಿರಾಜ ಪಲ್ಲೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.