17ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

Advt_Headding_Middle
Advt_Headding_Middle

2018-19 ನೇ ಸಾಲಿನ ದ.ಕ.ಜಿಲ್ಲಾ ಮಟ್ಟದ ಯುವಜನೋತ್ಸವ ನ. 17 ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯದ ಚೊಕ್ಕಾಡಿ ಕುಕ್ಕುಜಡ್ಕ ಪ್ರೌಢಶಾಲೆಯ ಸುವರ್ಣ ರಂಗಮಂದಿರದಲ್ಲಿ ನಡೆಯಲಿದೆ.

ದ.ಕ.ಜಿಲ್ಲಾಡಳಿರ, ದ.ಕ.ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸುಳ್ಯ ತಾ.ಪಂ.. ಅಮರಮುಡ್ನೂರು, ಗ್ರಾ.ಪಂ., ದ.ಕ. ಜಿಲ್ಲಾ ಯುವಜನ ಒಕ್ಕೂಟ, ಸುಳ್ಯ ಯುವಜನ ಸಂಯುಕ್ತ ಮಂಡಳಿ, ಚೊಕ್ಕಾಡಿ ಪ್ರೌಢಶಾಲೆ, ಪೈಲಾರು ಫ್ರೆಂಡ್ಸ್ ಕ್ಲಬ್ ಹಾಗೂ ಪೈಲಾರು ಶೌರ್ಯ ಯುವತಿ ಮಂಡಲದ ಆಶ್ರಯದಲ್ಲಿ ಯುವಜನೋತ್ಸವ ಸಂಘಟಿಸಲಾಗಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ (15  ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 2೦) ಜನಪದ ಹಾಡು ( 7 ನಿಮಿಷ ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಯೆ 1೦), ಏಕಾಂಕ ನಾಟಕ (45 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 17, ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿ), ಶಾಸ್ತ್ರೀಯ ಸಂಗೀತ, 15  ನಿಮಿಷ ಹಿಂದೂಸ್ತಾನಿ ಅಥವಾ ಕರ್ನಾಟಕ), ಶಾಸ್ತ್ರೀಯ ಸಂಗೀತ ( 15 ನಿಮಿಷ, ಹಿಂದೂಸ್ಥಾನಿ ಅಥವಾ ಕರ್ನಾಟಕ ಶೈಲಿಯಲ್ಲಿ ತಬಲ, ವೀಣೆ, ಸಿತಾರ್, ಕೊಳಲು, ಮೃದಂಗ) ಹಾರ್ಮೋನಿಯಮ (ಲಘು, 1೦ ನಿಮಿಷ, ವೈಯಕ್ತಿಕ), ಗಿಟಾರ್ ವಾದನ (1೦ ನಿಮಿಷ, ವೈಯಕ್ತಿಕ), ಶಾಸ್ತ್ರೀಯ ನೃತ್ಯ (15  ನಿಮಿಷ ವೈಯಕ್ತಿಕ, ಮಣಿಪುರಿ, ಒಒಡಿಸ್ಸಿ, ಕಥಕ್, ಕೂಚುಪುಡಿ ಮತ್ತು ಭರತನಾಟ್ಯವನ್ನು ಪ್ರದರ್ಶಿಸಬಹುದು), ಆಶುಭಾಷಣ ( 4 ನಿಮಿಷ, ವೈಯಕ್ತಿಕ ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿ) ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಈ ಯುವಜನೋತ್ಸವದಲ್ಲಿ ಜಿಲ್ಲೆಯ 15 ರಿಂದ 26 ವರ್ಷ ಒಳಪಟ್ಟ ಎಲ್ಲಾ ಯುವಕ ಸಂಘ/ ಯುವತಿ ಮಂಡಲ/ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿರುತ್ತಾರೆ.
ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಹೆಸರುಗಳನ್ನು ನ. ೧೬ರಂದು ಸಂಜೆ ೫ ಗಂಟೆಯೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಅಧಿಆರಿ 9448548449 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.