Breaking News

ಸುಳ್ಯದಲ್ಲಿ ರಂಜಿಸಿದ ವರ್ಣಮಯ ವರ್ಣಚಿತ್ತಾರ

Advt_Headding_Middle
Advt_Headding_Middle

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್, ಇಂಟರ‍್ಯಾಕ್ಟ್ ಕ್ಲಬ್, ಸುದ್ದಿ ಬಿಡುಗಡೆ ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ಇಂಟರ‍್ಯಾಕ್ಟ್ ಕ್ಲಬ್ ರೋಟರಿ ಶಾಲೆ ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್‌ಸೈಟ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯದ ರೋಟರಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ-2018 ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಒಂದು ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿ ಆನಂದ ಮತ್ತು ಉಲ್ಲಾಸದಿಂದ ವರ್ಣಮಯ ಚಿತ್ತಾರ ಬಿಡಿಸಿದರು.

ಪೂರ್ವಾಹ್ನ ನಡೆದ ಸರಳ ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ, ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಿತ್ರಕಲೆಯು ಮನಸ್ಸಿನ ಭಾವನೆಗಳನ್ನು ಪ್ರಕಟಪಡಿಸುವ ಆ ಮೂಲಕ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಸೃಜನಶೀಲ ಕ್ರಿಯೆ ಎಂದು ಅವರು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಸಂಯೋಜಕ ಡಾ. ಸುಂದರ ಕೇನಾಜೆ ಮಾತನಾಡಿ, ಚಿತ್ರಕಲೆ ಸೃಜನಶೀಲತೆಗೆ ಪರ್ಯಾಯ. ಬೆಳೆಯುತ್ತಾ ಹೋದಂತೆ ಇದು ಮತ್ತಷ್ಟು ವಿಸ್ತಾರಗೊಳ್ಳುತ್ತದೆ ಎಂದರು.


ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ. ಇಂತಹ ಚಿತ್ರಗಳು ಮಕ್ಕಳ ಮನಸ್ಸಲ್ಲಿ ಮೂಡುವುದು ಒಳ್ಳೆಯ ಬೆಳವಣಿಗೆ ಎಂದು ರೋಟರಿ ಶಾಲಾ ಸಂಚಾಲಕ ಎನ್.ಎ.ಜಿತೇಂದ್ರ ಹೇಳಿದರು.


ಸುಳ್ಯ ರೋಟರಿ ಕ್ಲಬ್ ಅದ್ಯಕ್ಷ ದಯಾನಂದ ಆಳ್ವ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಗಣನೀಯ ಕೊಡುಗೆ ನೀಡಿದ ಸುದ್ದಿ ಬಿಡುಗಡೆ ಮೂಲಕ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನೀಯ ಎಂದರು.


ಬೆಂಗಳೂರಿನ ಉದ್ಯಮಿ ಅನಂತರಾಜ್ ಮಾಯಿಪನ ಮಾತನಾಡಿ, ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿರುವುದು ಅಭಿನಂದನೀಯ ಎಂದರು. ಸಮಾರಂಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಪ್ರತಿಭೆಗಳಾದ ಪ್ರಣಮ್ ಮತ್ತು ಪೃಥ್ವಿನ್‌ರವರನ್ನು ಗೌರವಿಸಿಲಾಯಿತು. ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ಗಿರಿಜಾಶಂಕರ್, ಸುದ್ದಿ ವೆಬ್‌ಸೈಟ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ರೋಟರಿ ಶಾಲಾ ಮುಖ್ಯೋಪಾಧ್ಯಾಯ ಅಚ್ಚುತ ಅಟ್ಲೂರು, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಕು|ಸಾಹಿತ್ಯ ಬೋರ್ಕರ್, ಲವಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕರಾದ ಶ್ರೀಹರಿ ಪೈಂದೋಡಿ ಸ್ವಾಗತಿಸಿ, ಪ್ರಸನ್ನ ಐವರ್ನಾಡು ವಂದಿಸಿದರು. ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ವರ್ಣ ಚಿತ್ತಾರದಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು
* ರೋಟರಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿ ಹೊಸ ಇತಿಹಾಸ ಬರೆದರು.
* ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ವಿಭಾಗ-೧: ಎಲ್.ಕೆ.ಜಿ, ಯು.ಕೆ.ಜಿ. ೧ನೇ. ವಿಭಾಗ-೨ : ೨ನೇ, ೩ನೇ, ೪ನೇ. ವಿಭಾಗ-೩ : ೫ನೇ, ೬ನೇ, ೭ನೇ. ವಿಭಾಗ-೪: ೮ನೇ, ೯ನೇ, ೧೦ನೇ ಎಂದು ನಾಲ್ಕು ವಿಭಾಗದಲ್ಲಿ ಆಯ್ಕೆಯಾಗಿದ್ದು ಪ್ರೌಢ ವಿಭಾಗಕ್ಕೆ ಮಾತ್ರ ೩ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿ ಚಿತ್ರಿಸಲು ಅವಕಾಶವಿತ್ತು. ಪ್ರತೀ ವಿಭಾಗದಲ್ಲಿ ಉತ್ತಮ ೫ ಕಲಾಕೃತಿಗಳನ್ನು ಆಯ್ಕೆ ಮಾಡಲಾಯಿತು.
* ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದೊಂದಿಗೆ ಗಿಫ್ಟ್ ಹ್ಯಾಂಪರ್ ಕೂಡಾ ನೀಡಲಾಯಿತು.
* ಸ್ಪರ್ಧೆಯು ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಇದು ಅತಿಥಿಗಳ, ಪೋಷಕ ಮತ್ತು ಮಕ್ಕಳ ಶ್ಲಾಘನೆಗೆ ಪಾತ್ರವಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.