ನ. 15  : ಹರಿಹರೇಶ್ವರ ಕಲಾ ಮಂದಿರ ಲೋಕಾರ್ಪಣೆ

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕ ಗ್ರಾಮದ ಹರಿಹರೇಶ್ವರ ದೇವಾಲಯದ ಹರಿಹರೇಶ್ವರ ಕಲಾ ಮಂದಿರ ನ.15 ರಂದು ಲೋಕಾರ್ಪಣೆ ಗೊಂಡು ಸಾರ್ವಜನಿಕರಿಗೆ ಸೇವೆಗೆ ಮುಕ್ತ ಗೊಳ್ಳಲಿದೆ.

ಈಗಾಗಲೆ ಒಂದು ಕೋಟಿಗೂ ಮೇಲ್ಪಟ್ಟು ವೆಚ್ಚ ಮಾಡಿದೆ. ಹರಿಹರೇಶ್ವರ ದೇವಾಲಯಕ್ಕೆ ಸಭೆ ಸಮಾರಂಭಗಳಿಗೆ ಸಭಾಭವನದ ಅವಶ್ಯವಿದೆ ಎಂಬುದನ್ನು ಅರಿತ ಆಗಿನ ವ್ಯವಸ್ಥಾಪನಾ ಸಮಿತಿ ಡಾ. ಚಂದ್ರಶೇಖರ ಕಿರಿಭಾಗ ಅವರ ತಂಡ ಸಭಾಭವನದ ಮಾಡಲು ನಿರ್ಧರಿಸಿ ೨೦೧೨ ರಲ್ಲಿ ಕೆಲಸ ಕೂಡ ಆರಂಭಿಸಿ ಪಿಲ್ಲರ್, ಸ್ಟೇಜ್ ಮುಂತಾದ ಕೆಲಸ ಆಗಿತ್ತು. ಆರ್ಥಿಕ ವ್ಯವಸ್ಥೆಯ ಅಡಚಣೆಯಿಂದಾಗಿ ಕಾರಣಾಂತರಗಳಿಂದ ಕಟ್ಟಡ ಕೆಲಸ ಮುಂದುವರಿಸಲು ಸಾದ್ಯವಾಗಲಿಲ್ಲ. ಕಳೆದ ಸಾಲಿನಲ್ಲಿ ರಾಮಕೃಷ್ಣ ಕುದ್ಕುಳಿ ಅವರ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ ಆಡಳಿತಕ್ಕೆ ಬಂದ ನಂತರ ಕಟ್ಟಡ ಕಾಮಗಾರಿ ಗೆ ಆದ್ಯತೆ ನೀಡಿ ಮಾಡು ಮಾಡಿತ್ತಾದರೂ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ದೇವಾಲಯಕ್ಕೆ ಬ್ರಹ್ಮಕಲಶೋತ್ಸವ ಆಗಬೇಕು ಎಂದು ಪ್ರಶ್ನಾ ಚಿಂತಣೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಿಶೋರ್ ಕುಮಾರ್ ಕೂಜುಗೋಡು ನೇತೃತ್ವದ ಬಹ್ಮಕಲಶೋತ್ಸವ ಸಮಿತಿ ರಚನೆಗೊಂಡ ಕಾರ್ಯಾರಂಭ ಮಾಡಲು ಆರಂಬಿಸಿತು. ಇವರೊಂದಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು ಮತ್ತು ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿ ಶಂಕರ ಪಿಂಡಿಮನೆ ಮತ್ತಿತರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಸಮಿತಿಗಳು ಸೇರಿಕೊಂಡು ಸಭಾಭವನ ಮಾಡುವ ಪಣ ತೊಟ್ಟಿತ್ತು ಅದರಂತೆ ಆರ್ಥಿಕ ಕ್ರೂಡೀಕರಣಕ್ಕೆ ಕಾರ್ಯಾಚರಣೆಗಿಳಿದ ತಂಡ ಗ್ರಾಮ, ಗ್ರಾಮಕ್ಕೆ ತೆರಳಿ ಹಣ ದೇವಾಲಯದ ಅಭಿವೃದ್ಧಿಗೆ ಹಗಲಿರುಳು ದುಡಿದು ಹಣ ಸಂಗ್ರಹಿಸುತ್ತಿದೆ. ಕೆಲಸ ಮುಂದುವರಿದು ಕಟ್ಟಡ ಕೆಲಸ ಬಹುತೇಕ ಪೂರ್ಣಗೊಂಡಿದೆ. ಈ ಕಲಾ ಮಂದಿರ ಸುಸಜ್ಜಿತ ಅನಿಸಬೇಕಾದರೆ ಇನ್ನೂ ಕನಿಷ್ಠ ಕೆಲ ಲಕ್ಷಗಳು ಬೇಕಾಗಬಹುದು.

ಸಾರ್ವಜನಿಕರು ಇನ್ನಷ್ಟು ಸಹಕಾರ ನೀಡ ಬೇಕಾಗಿದೆ. ನ.15 ರಂದು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕಲಾ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ ಅಧ್ಯಕ್ಷತೆ ವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.