ಬಳ್ಳಕ್ಕ : ನ.24 ರಂದು ತಾಳಮದ್ದಲೆ ಕಾರ್ಯಕ್ರಮ

Advt_Headding_Middle
Advt_Headding_Middle

ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ವತಿಯಿಂದ ತಾಳಮದ್ದಲೆ ಪ್ರಸಂಗ – ಗುರು ದಕ್ಷಣೆ ಕಾರ್ಯಕ್ರಮವು ನ.೨೪ರಂದು ಬಳ್ಳಕ್ಕ ಸ.ಕಿ.ಪ್ರಾ.ಶಾಲೆ ಹರಿಪುರ ದಲ್ಲಿ ಸಂಜೆ ೫.೩೦ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಸುಳ್ಯ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಜತ್ತಪ್ಪ ರೈ ಎ ಉದ್ಘಾಟಿಸುವರು.

ಪಂಜ ಶ್ರೀ ಶಾರಧಾಂಬಾ ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು, ಬಳ್ಳಕ್ಕ ಹರಿಪುರ ಸ.ಕಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸದಾಶಿವ ಭಟ್ ಗಬ್ಲಡ್ಕ ಉಪಸ್ಥಿತರಿರುವರು.

ಹಿಮ್ಮೇಳ ಭಾಗವತರಾಗಿ ಪ್ರಶಾಂತ್ ಪಲ್ಲೋಡಿ, ಕಾವ್ಯಶ್ರೀ ಅಜೇರು, ರಚನ ಚಿದ್ಗಲ್ಲು, ಮದ್ದಳೆ- ಚಂದ್ರಶೇಖರ ಗುರುವಾಯನಕೆರೆ, ಚೆಂಡೆ- ಕುಮಾರ ಸುಬ್ರಹ್ಮಣ್ಯ ವಳಕುಂಜ, ಪಾತ್ರಧಾರಿಗಳು- ದ್ರೋಣ – ಉಜಿರೆ ಅಶೋಕ್ ಭಟ್, ದ್ರುಪದ- ರಾಧಾಕೃಷ್ಣ ಕಲ್ಚಾರು, ಏಕಲವ್ಯ- ಹರೀಶ್ ಬೊಳಲತ್ ಮುಗೇರ, ಅರ್ಜುನ- ವಿಜಯಶಂಕರ ವಿಟ್ಲ ಪಾಲ್ಗೋಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.