Breaking News

ಸುಳ್ಯ ಹಳೆಗೇಟಿನಲ್ಲಿ ಭಾರತ್ ರೆಸ್ಟೋರೆಂಟ್ ಉದ್ಘಾಟನೆ

Advt_Headding_Middle
Advt_Headding_Middle


ಸುಳ್ಯ ಹಳೆಗೇಟು ಹಿದಾಯತ್ತುಲ್ ಇಸ್ಲಾಂ ಕಾಂಪ್ಲೆಕ್ಸ್ ನಲ್ಲಿ ಸಸ್ಯಹಾರಿ -ಮಾಂಸಹಾರಿ ರೆಸ್ಟೋರೆಂಟ್ ಭಾರತ್ ನ. 11 ರಂದು ಶುಭಾರಂಭ ಗೊಂಡಿತು.

ರೆಸ್ಟೋರೆಂಟ್ ನ್ನು ನಗರ ಪಂಚಾಯತ್ ಅಧ್ಯಕೆ ಶೀಲಾವತಿ ಮಾಧವ ಉದ್ಘಾಟಿಸಿದರು.
ಸಮಾರಂಭದಲ್ಲಿ ಹಳೆಗೇಟು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ,ರಾಜ್ಯ ವಕ್ಪ್ ಕೌನ್ಸಿಲ್ ಸದಸ್ಯ ಎಸ್ ಸಂಶುದ್ದಿನ್, ಕೆ.ಪಿ.ಸಿ.ಸಿ.ಸದಸ್ಯ ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಲಯನ್ಸ್ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ, ಸೀಪುಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ.ಜಿ.ಇಬ್ರಾಹಿಂ ,ಐ.ಎಂ.ಎ.ಅಧ್ಯಕ್ಷೆ ಡಾ.ಸಾಯಿಗೀತಾ,ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ.ಎನ್ .ಎ ಜ್ಞಾನೇಶ್,ಗಾಂಧಿನಗರ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಅನ್ಸಾರ್ ಅಧ್ಯಕ್ಷ ಹಾಜಿ.ಕೆ.ಎಂ ಮುಸ್ತಫಾ,ಮೊಗರ್ಪಣೆ ಜುಮ್ಮಾ ಮಸೀದಿ ನಿರ್ದೇಶಕರಾದ ಎಸ್.ಎ ಹಮೀದ್ ಜಯನಗರ,ಸಿ.ಎಂ ಉಸ್ಮಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಪಾಲುದಾರರು ಬಶೀರ್ ಕುತ್ತಮೊಟ್ಟೆಯವನ್ನು ಸನ್ಮಾನಿಸಲಾಯಿತು. ಸಂಸ್ಥೆ ಪಾಲುದಾರರದ ರಶೀದ್ ಮಲಪ್ಪುರಂ,ಅಬ್ದುಲ್ ಮಜೀದ್ ಮಲಪುರಂ ಮಾತನಾಡಿ..ನಮ್ಮಲಿ ಎಲ್ಲಾ ತರಹದ ಬಿರಿಯಾನಿ, ತಾಜ ಕೇರಳ ಶೈಲಿಯ ಮೀನಿನ ಊಟ,ಮಲಬಾರ್ ಸ್ಪೆಷಲ್ ಆಹಾರಗಳು, ಎಲ್ಲಾ ರೀತಿಯ ಚಿಕನ್ ಖಾದ್ಯ ಗಳು, ಚೈನೀಸ್ ಆಹಾರಗಳು, ಅರೇಬಿಯನ್ ಸ್ಪೆಷಲ್ ಅಹಾರ ಪದಾರ್ಥಗಳು,ಅಲ್ ಪಹಾಮ್ ,ತಂದೂರಿ,ಊರಿನ ಶೈಲಿಯ ಅಹಾರ ಪದಾರ್ಥಗಳು,ಬಗ್ಗೆ ಬಗೆಯ ಜ್ಯೂಸ್ ,ಐಸ್ ಕ್ರೀಮ್, ದೊರೆಯುತ್ತದೆ.


ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ. ಹವಾನಿಯಂತ್ರಿತ ಕೊಠಡಿಯಿದೆ ಸ್ಥಳೀಯ ಉಚಿತ ಡೋರ್ ಡೆಲಿವರಿ ವ್ಯವಸ್ಥೆ ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.