Breaking News

ಸವಿತಾ ಸಮಾಜದ ವತಿಯಿಂದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರಮದಾನ

Advt_Headding_Middle
Advt_Headding_Middle

ಹರಿಹರಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದ್ದು, ಸಭಾಭವನವೂ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ತ್ರಿವೇಣಿ ಸಂಗಮ ಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ಊರವರು ಶ್ರಮದಾನ ಕಾರ್ಯದಲ್ಲಿ ತೊಡಗಿದ್ದು, ನ.6ರಂದು ಸಂಜೆಂದ ಮಧ್ಯರಾತ್ರಿಯವರೆಗೆ ಸುಳ್ಯ ತಾಲೂಕು ಸವಿತಾ ಸಮಾಜ ಬಾಂಧವರು ಶ್ರಮದಾನದಲ್ಲಿ ಪಾಲ್ಗೊಂಡರು.


ಸ್ಥಳೀಯರಾದ ದೇವಿದಾಸ್‌ರವರ ನೇತೃತ್ವದಲ್ಲಿ ನಡೆದ ಈ ಶ್ರಮದಾನದಲ್ಲಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ವಸಂತ ಮೂರಾಜೆ, ಪ್ರ.ಕಾರ್ಯದರ್ಶಿ ಗುರುರಾಜ ಅಜ್ಜಾವರ, ಖಜಾಂಜಿ ಹಾಗೂ ಬಾರ್ಬರ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಸುಳ್ಯ, ನೂತನ ಮಹಿಳಾ ಘಟಕದ ಅಧ್ಯಕ್ಷರಾದ ಇಂದಿರಾ ಪದ್ಮನಾಭ, ಕಾರ್ಯದರ್ಶಿ ಭಾರತಿ ಬಂಟ್ವಾಳ್, ಯುವ ಘಟಕದ ಕಾರ್ಯದರ್ಶಿ ಉದಯ ಜಟ್ಟಿಪಳ್ಳ, ಖಜಾಂಜಿ ನವೀನ್ ಸೂಂತೋಡು, ಮಾತೃ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಜಟ್ಟಿಪಳ್ಳ, ನಿಕಟಪೂರ್ವ ಅಧ್ಯಕ್ಷ ಹರೀಶ್ ಬಂಟ್ವಾಳ್, ಬಾರ್ಬರ್‍ಸ್ ಅಸೋಸಿಯೇಶನ್ ಕಾರ್ಯದರ್ಶಿ ಅವಿನಾಶ್ ಕೇರ್ಪಳ, ಖಜಾಂಜಿ ರೋಹಿತಾಕ್ಷ ಗುತ್ತಿಗಾರು ಹೀಗೆ ಸುಮಾರು ೫೨ ಮಂದಿ ಭಾಗವಹಿಸಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಗೌಡ ಕುದ್ಕುಳಿ, ಪೂರ್ವಾಧ್ಯಕ್ಷ ಡಾ| ಚಂದ್ರಶೇಖರ ಕಿರಿಭಾಗ, ಗ್ರಾ.ಪಂ. ಅಧ್ಯಕ್ಷ ಹಿಮ್ಮತ್ ಕೆ.ಸಿ. ಮೊದಲಾದವರು ಸ್ಥಳಕ್ಕೆ ಬಂದು ಸವಿತಾ ಸಮಾಜದವರ ಸೇವೆಯನ್ನು ಶ್ಲಾಘಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.