ಗೌಡರ ಯುವ ಸೇವಾ ಸಂಘದ ಆಶ್ರಯದಲ್ಲಿ ಸಾಮೂಹಿಕ `ದೀಪಾವಳಿ ಹಬ್ಬ` ಸಂಭ್ರಮ

Advt_Headding_Middle
Advt_Headding_Middle

ನ.೧೦ರಂದು ರಾತ್ರಿ ಸುಳ್ಯ ಕೊಡಿಯಾಲಬೈಲಿನಲ್ಲಿರುವ ಗೌಡರ ಸಮುದಾಯ ಭವನದ ಮುಂಭಾಗದ ಮೈದಾನ ಬಣ್ಣ ಬಣ್ಣದ ಬೆಳಕಿನ ಚಿತ್ತಾರದಿಂದ ಕಣ್ಮನ ಸೆಳೆಯುತ್ತಿತ್ತು. ವಿದ್ಯುದ್ದೀಪಗಳೊಡನೆ ಗೂಡು ದೀಪಗಳು ಸ್ಪರ್ಧೆಯೊಡ್ಡುತ್ತಿದ್ದವು.

 ಸಮುದಾಯ ಭವನದ ಮೆಟ್ಟಿಲುಗಳಲ್ಲಿ ನೂರಾರು ಹಣತೆಗಳು ಕತ್ತಲೆಯನ್ನು ಹೊಡೆದೂಡಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಮಕ್ಕಳು ನಕ್ಷತ್ರ ಕಡ್ಡಿಗಳನ್ನು ಉರಿಸುತ್ತಾ ಸಂಭ್ರಮದಿಂದ ನಲಿದಾಡುತ್ತಿದ್ದರು. ಬೆಳಕಿನ ಹೂ ಅರಳಿಸುವ ಹೂ ಕುಂಡದ ಬೆಳಕಿನ ಪ್ರವಾಹದಲ್ಲಿ ಹೆಂಗಳೆಯರು ಮಿನುಗುತ್ತಿದ್ದರು. ದುರ್ಸು ಬಾಣಗಳನ್ನು ಬಿಡುತ್ತಾ ಶಬ್ದಗಳ ಆಟದಲ್ಲಿ ತೊಡಗಿದ್ದ ಯುವಕರು.

ಇದು ಗೌಡರ ಯುವ ಸೇವಾ ಸಂಘದ ನಗರ ಘಟಕ, ಮಹಿಳಾ ಘಟಕ, ತರುಣ ಘಟಕಗಳ ವತಿಯಿಂದ ನಡೆದ ಸಾಮೂಹಿಕ ದೀಪಾವಳಿ ಹಬ್ಬದ ದೃಶ್ಯ. ಗೌಡ ಸಮಾಜದ ಸುಮಾರು ೩೫೦ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೇರೆ ಸಮಾಜದ ಕೆಲವು ಮಂದಿ ಆಹ್ವಾನಿತರೂ ಬಂದಿದ್ದರು. ದೀಪಾವಳಿಯ ಸಂಭ್ರಮದಲ್ಲಿ ಎಲ್ಲರೂ ಮಿಂದೆದ್ದರು.
ಕಾರ್ಯಕ್ರಮವನ್ನು ಅಮೈ ದಾಮೋದರ ಗೌಡ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮೋಹನ್ ರಾಮ್ ಸುಳ್ಳಿ, ದೊಡ್ಡಣ್ಣ ಬರೆಮೇಲು, ದಿನೇಶ್ ಮಡಪ್ಪಾಡಿ, ಕಾರ್ಯಕ್ರಮ ಸಂಚಾಲಕ ಜಯರಾಮ ದೇರಪ್ಪಜ್ಜನಮನೆ, ಲತಾ ಕುದ್ಪಾಜೆ, ಪವಿತ್ರ ಅಶ್ವತ್ ಕುರುಂಜಿ, ಐ.ಬಿ.ಚಂದ್ರಶೇಖರ್, ದಯಾನಂದ ಡಿ.ಟಿ., ಸಂತೋಷ್ ಮಡ್ತಿಲ, ಎಂ.ಎಸ್. ಭೋಜಪ್ಪ, ವೀರಪ್ಪ ಗೌಡ ಮತ್ತಿತರರು ವೇದಿಕೆಯಲ್ಲಿದ್ದರು.
ದಂಪತಿಗಳಿಗಾಗಿ ಸ್ಪರ್ಧೆಗಳನ್ನು ಎಂ.ಜೆ. ಶಶಿಧರ್ ನಡೆಸಿಕೊಟ್ಟರೆ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೆಲವು ಸ್ಪರ್ಧೆಗಳನ್ನು ಶಿಕ್ಷಕಿಯರಾದ ಜಲಜಾಕ್ಷಿ ಚೆನ್ನಪ್ಪ ಹಾಗೂ ಚಂದ್ರಮತಿಯವರು ನಡೆಸಿಕೊಟ್ಟರು.
ಬಲೀಂದ್ರ ಪೂಜೆ ಹಾಗೂ ಗೋಪೂಜೆಯನ್ನು ಕೂಡಾ ಮಾಡಲಾಯಿತು. ದೇಂಗೋಡಿಯ ಡಿ.ಎನ್. ವೆಂಕಟ್ರಮಣರು ಹಾಗೂ ಜನಾರ್ದನ ಕೊಳೆಂಜಿಕೋಡಿಯವರು ಬಲೀಂದ್ರ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಪುರುಷೋತ್ತಮ ಅಮೈ, ಎಂ.ಎಸ್.ಭೋಜಪ್ಪ ಹಾಗೂ ಹೇಮಲತಾ ದೇಂಗೋಡಿಯವರು ಗೋಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕೊನೆಯಲ್ಲಿ ಸಾಮೂಹಿಕ ನೃತ್ಯ ಕಾರ್ಯಕ್ರಮ ಇತ್ತು. ನಿತ್ಯಾನಂದ ಮುಂಡೋಡಿ, ಎನ್.ಎ.ಜ್ಞಾನೇಶ್ ಆದಿಯಾಗಿ ಗೌಡ ಸಮಾಜದ ಅನೇಕ ಗಣ್ಯರು ಸಂಗೀತದ ಲಯಕ್ಕೆ ಹೆಜ್ಜೆ ಹಾಕಿ ಸೇರಿದ ಯುವಕರಿಗೆ ಸ್ಪೂರ್ತಿ ತುಂಬಿದರು. ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ಕೊನೆಯಲ್ಲಿ ಶುಭ ಹಾರೈಸಿದರು. ಭಜರ್ನರಿ ಭೋಜನದ ವ್ಯವಸ್ಥೆ ಇತ್ತು. ಅಡುಗೆ ಸಿದ್ಧಗೊಳಿಸಿದ ಕೇನ್ಯದ ಶ್ರೀನಿವಾಸರನ್ನೂ ಸನ್ಮಾನಿಸಲಾಯಿತು. ಎ.ವಿ.ತೀರ್ಥರಾಮ, ಕೆ.ಸಿ.ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.