Breaking News

ಎಡಮಂಗಲ: ಬಿಲ್ಲವ ಸಮಾಜದವರ ಸಭೆ, ಸಾಧಕರಿಗೆ ಸನ್ಮಾನ

Advt_Headding_Middle
Advt_Headding_Middle

ಎಡಮಂಗಲ ಗ್ರಾಮ ನೂಜಾಡಿಯ ತಾಲೂಕು ಬಿಲ್ಲವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿಯವರ ಬ್ರಹ್ಮಶ್ರೀ ನಿಲಯದಲ್ಲಿ ನ ೧೧ರಂದು ಎಡಮಂಗಲ ಎಣ್ಮೂರು ಮುರುಳ್ಯ ಗ್ರಾಮದ ಬಿಲ್ಲವ ಸಮಾಜದವರ ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಅಲೆಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಎಣ್ಮೂರು ಮುರುಳ್ಯ ಎಡಮಂಗಲ ಗ್ರಾಮಗಳ ಅಲ್ಲದೆ ಇತರ ಗ್ರಾಮಗಳ ವರದಿಯನ್ನು ಸಮರ್ಪಕವಾಗಿ ಸುದ್ದಿ ಪತ್ರಿಕೆಯಲ್ಲಿ ವರದಿ ಮಾಡಿ ಗ್ರಾಮೀಣ ಬಾಗದ ಎಲ್ಲಾ ಜನರ ಹಾಗೂ ಬಿಲ್ಲವ  ಸಮಾಜದಲ್ಲಿ ಗುರುತಿಸಿಕೊಂಡಿರುವ ಪತ್ರಿಕಾ ಪ್ರತಿನಿಧಿ ಹಗೂ ಸುದ್ದಿಯ ಗೌರವ ವರದಿಗಾರರನ್ನು ಸನ್ಮಾನಿಸಲಾಯಿತು.  

ಸವಣೂರು ಸಿ.ಎ ಬ್ಯಾಂಕ್ ಉಪಾದ್ಯಕ್ಷ ಕರುಣಾಕರ ಪೂಜಾರಿ ಪಟ್ಟೆ ,ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಸಂಜೀವ ಪೂಜಾರಿ,ತಾಲೂಕು ಸಮಿತಿ ಗೌರವಾಧ್ಯಕ್ಷ ಪುರಂದರ ಪೂಜಾರಿ. ಅರಣ್ಯ ರಕ್ಷಕ ಮಂಜುನಾಥ ಪೂಜಾರಿ, ಕಾರ್ಯದರ್ಶಿ ವಿಜಯ ಕುಮಾರ್ ಕೂಟಾಜೆ ಉಪಸ್ಥಿತರಿದ್ದರು.

ಕಳಂಜ ಗ್ರಾಮದ ಬಿಲ್ಲವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಕಳಂಜ ,ಸುನಿಲ್ ಪೂಜಾರಿ ,ವಿಶ್ವನಾಥ ಪೂಜಾರಿ ನೂಜಾಡಿ ,ಶೀನಪ್ಪ ಸುವರ್ಣ, ಶಶಿಕಲಾ ಬಾಲಕೃಷ್ಣ ಪೂಜಾರಿ ,ಜಲಜಾಕ್ಷಿ ನೂಜಾಡಿ,ಚಂದ್ರಹಾಸ ನೂಜಾಡಿ, ರಾಘವ ಪೂಜಾರಿ ಎಡಮಂಗಲ ,ಜನಾರ್ಧನ ನಾಲ್ತಾರ್ ,ರವಿಪ್ರಸಾದ್ ನರ್ಲಡ್ಕ, ರಾಮಕೃಷ್ಣ ಪೂಜಾರಿ , ರಾಮಚಂದ್ರ ಪೂಜಾರಿ ಮೊದಲಾದವರು ಬಾಗವಹಿಸಿದ್ದರು.ಉಪಾದ್ಯಕ್ಷ ಸುಮಂತ್ ಅಲೆಕ್ಕಾಡಿ ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವನೆಗೈದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.