ಪಂಜ: ಅಕ್ರಮವಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪತ್ತೆ ; ಸುಮಾರು 4 ಲಕ್ಷ ರೂ.ಮೌಲ್ಯದ ಸೊತ್ತು ವಶ

Advt_Headding_Middle
Advt_Headding_Middle

ಅಕ್ರಮವಾಗಿ ಮರದ ದಿಮ್ಮಿ ಸಾಗಟ ಮಾಡುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕೇಸು ದಾಖಲಿಸಿ ಕೊಂಡ ಪ್ರಕರಣ ಪಂಜದಿಂದ ವರದಿಯಾಗಿದೆ.


ಪಂಜ ಅರಣ್ಯ ಇಲಾಖೆ ವ್ಯಾಪ್ತಿಯ ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಅಲಂಗಾರು ನೆಲ್ಯಾಡಿ ರಸ್ತೆಯ ಸೂರ್ಲಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ಮರದ ೧೦೭ ದಿಮ್ಮಿಗಳನ್ನು ಸಾಗಟ ಮಾಡುತ್ತಿದ್ದ ಲಾರಿ( ಕೆಎ೧೯ಬಿ ೭೮೨೫) ಪತ್ತೆ ಹಚ್ಚಿ ಇಲಾಖಾ ವಶಕ್ಕೆ ತೆಗೆದುಕೊಂಡು ಅರಣ್ಯ ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ. ಲಾರಿಯನ್ನು ತಡೆದು ನಿಲ್ಲಿಸುವಾಗ ಲಾರಿಯ ಚಾಲಕನು ಓಡಿ ಕತ್ತಲಿನಲ್ಲಿ ಪರಾರಿಯಾಗಿರುತ್ತಾನೆ. ಉಳಿದ ಆರೋಪಿಗಳು ಪತ್ತೆಯಾಗಿರುವುದಿಲ್ಲ. ಲಾರಿ, ಮರದ ದಿಮ್ಮಿ ಸೇರಿ ಸುಮಾರು ೪.ಲಕ್ಷ ರೂ.ಮೌಲ್ಯದ ವಶಪಡಿಸಿಕೊಂಡಿರುತ್ತಾರೆ.ವಲಯಾರಣ್ಯಾಧಿಕಾರಿ ಗಿರೀಶ್ ರವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆದಿದ್ದು, ಉಪವಲಯರಣ್ಯಧಿಕಾರಿಯಾದ ರವಿಪ್ರಕಾಶ್ ,sಸಂತೋಷ್ ಕೆ, ಅರಣ್ಯ ರಕ್ಷಕರಾದ ಬಾಲಚಂದ್ರ, ದೇವಿಪ್ರಸಾದ್, ಭೀಮಪ್ಪ ಎಸ್ ಐ, ಅರಣ್ಯ ವೀಕ್ಷಕ ಮೋಹನ ಎಂ, ವಾಹನ ಚಾಲಕ ಪದ್ಮಕುಮಾರ್ ಪಾಲ್ಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.