ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಂದ್ರ ಶೀಥಲೀಕರಣ ಘಟಕ: ಉದ್ಘಾಟನಾ ಸಮಾರಂಭ

Advt_Headding_Middle
Advt_Headding_Middle

ಎಡಮಂಗಲ ಹಾ.ಉ.ಸ.ಸಂಘ ಕಟ್ಟಡ ವಿಸ್ತರಣೆಗೊಂಡು ನೂತನವಾಗಿ ಸ್ಥಾಪಿಸಲಾಗಿರುವ ಸಾಂದ್ರ ಶೀಥಲೀಕರಣ ಘಟಕದ ಉದ್ಘಾಟನೆಯು ನ.೧೧ರಂದು ಎಡಮಂಗಲ ಪಂಚಲಿಂಗೇಶ್ವರ ದೇವಳದ ಶಿವ ಪಾರ್ವತಿ ಸಭಾಭವನದಲ್ಲಿ ನಡೆಯಿತು. ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಎಸ್. ಅಂಗಾರರರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರ ಕಠಿಣ ಪರಿಶ್ರಮದ ಫಲದಿಂದ ಸಂಘವು ಬೆಳೆದು ಬಂದಿದೆ. ಅದರ ಫಲವೇ ಇಂದು ಸಾಂದ್ರ ಶೀಥಲೀಕರಣ ಘಟಕ ಸ್ಥಾಪನೆಯಾಗಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು ಪೂರೈಕೆ ಮಾಡಿ, ಸಂಘ ಬೆಳೆಯುವಂತೆ ನೋಡಿಕೊಳ್ಳಿ, ಕೃಷಿಯು ಆಗುತ್ತದೆ. ಒಂದು ಉದ್ಯೋಗವು ಹೌದು ಎಂದು ಹೇಳಿದರು.
ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ರಿಬ್ಬನ್ ಕಟ್ ಮಾಡಿ ಘಟಕವನ್ನು ಉದ್ಘಾಟಿಸಿದರು. ಒಕ್ಕೂಟ ಉಪಾಧ್ಯಕ್ಷರಾದ ಸುಚರಿತ ಶೆಟ್ಟಿ, ನಿರ್ದೇಶಕರಾದ ಶ್ರೀಮತಿ ವೀಣಾ ರೈ, ವ್ಯ.ನಿರ್ದೇಶಕ ಬಿ.ವಿ. ಸತ್ಯನಾರಾಯಣ, ತಾಲೂಕು ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ದೇವಳ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲ, ಧ.ಗ್ರಾ.ಅ. ಯೋಜನೆ ಸುಳ್ಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಸಂಘದ ಅಧ್ಯಕ್ಷ ಜಯಪ್ರಕಾಶ್ ಲೆಕ್ಕಿಸಿರಿಮಜಲು, ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಡಾ. ನಿತ್ಯಾನಂದ ಭಕ್ತ, ಡಾ. ರಾಮಕೃಷ್ಣ ಭಟ್, ಎಡಮಂಗಲ ಗ್ರಾಮ ಪಂ. ಅಧ್ಯಕ್ಷ ಸುಂದರ ಗೌಡ ದೋಳ್ತಿಲ ವೇದಿಕೆಯಲ್ಲಿದ್ದರು. ಪಂಚಲಿಂಗೇಶ್ವರ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಹರಿ ನೂಚಿಲರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.
ಸಂಘದ ಅಧ್ಯಕ್ಷ ಜಯಪ್ರಕಾಶ ಲೆಕ್ಕಿಸಿರಿಮಜಲು ಸ್ವಾಗತಿಸಿದರು, ಹರೀಶ್ ಕುಮಾರ್ ಪ್ರಸ್ತಾವನೆಗೈದರು, ರಾಮಕೃಷ್ಣ ರೈ ಮಾಲೆಂಗಿರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.