ಸುಬ್ರಹ್ಮಣ್ಯ: ಕೆಎಸ್‌ಎಸ್ ಕಾಲೇಜಿನ ರಾ.ಸೇ.ಯೋ ಶಿಬಿರ ನ.21 ರಿಂದ ಆರಂಭ

Advt_Headding_Middle
Advt_Headding_Middle

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ ವಾರ್ಷಿಕ ವಿಶೇಚ ಶಿಬಿರವು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಐನಕಿದುವಿನಲ್ಲಿ ನ.21 ರಿಂದ 27 ರ ತನಕ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರೋ ರಂಗಯ್ಯ ಶೆಟ್ಟಿಗಾರ್ ತಿಳಿಸಿದ್ದಾರೆ.

ಶಿಬಿರದಲ್ಲಿ ಪ್ರತಿನಿತ್ಯ ಬೆಳಗ್ಗೆ ಧ್ವಜಾರೋಹಣ ನಡೆಯಲಿದೆ. ಮೊದಲ ದಿನ ಐನಕಿದು-ಸುಬ್ರಹ್ಮಣ್ಯ ಪ್ರಾ.ಕೃ.ಪ ಸಹಕಾರಿ ಬ್ಯಾಂಕು ಸುಬ್ರಹ್ಮಣ್ಯ ಇದರ ಮಾಜಿ ಅಧ್ಯಕ್ಷ ಸೋಮಸುಂದರ ಕೂಜುಗೋಡು, ನಂತರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಜಯಪ್ರಕಾಶ್ ಕೂಜುಗೋಡು, ನೀವೃತ್ತ ಇಂಜಿನೀಯರ್ ಕೆ ಶಿವಕುಮಾರ್, ನಿಸರ್ಗ ಯುವಕ ಮಂಡಲ ಅಧ್ಯಕ್ಷ ಭರತ ಆಚಾರಿಗದ್ದೆ ಮಾಜಿ ಯೋಧ ಕುಶಾಲಪ್ಪ ಗೌಡ ನೆತ್ತಾರ, ಪಂಚಾಯತ್ ಸದಸ್ಯೆ ರತ್ನಾವತಿ ನೆರವೇರಿಸಲಿರುವರು.
ನ.೨೧ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕಾರ‍್ಯಕ್ರಮ ಉದ್ಘಾಟಿಸುವರು, ಕಾಲೇಜು ಪ್ರಾಂಶುಪಾಲ ಪ್ರೋ ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ಹರಿಹರ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ, ಶ್ರೀ ಹರಿಹರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು, ಗ್ರಾ.ಪಂ ಸದಸ್ಯ ನವೀನ್ ಕಟ್ರೆಮನೆ, ಪತ್ರಕರ್ತ ಬಾಲಕೃಷ್ಣ ಭೀಮಗುಳಿ, ಐನಕಿದು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಎಸ್‌ಡಿಎಂಸಿ ಅಧ್ಯಕ್ಷ ಚಿನ್ನಮ್ಮ, ಕೆಎಸ್‌ಎಸ್ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ ಉಪಸ್ಥಿತರಿರುವರು.

ಶಿಬಿರದಲ್ಲಿ ಪ್ರತಿ ದಿನವೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿದ್ದು ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಶಿಬಿರದಲ್ಲಿ ಶಿವಿರಾರ್ಥಿಗಳಿಗೆ ಸ್ಪರ್ಧೆಗಳು, ಗ್ರಾಮ ಸಮೀಕ್ಷೆ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳಿರುತ್ತವೆ. ನ.೨೭ರಂದು ಶಿಬಿರದ ಸಮಾರೋಪ ಸಮಾರಂಭ ಣಡೆಯಲಿದೆ ಎಂದವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.