Breaking News

ಸುಬ್ರಹ್ಮಣ್ಯ: ಜೇಸಿ ಸಪ್ತಾಹ ಭಾಷಣ ಕಲೆ ತರಬೇತಿ ಕಾರ್ಯಗಾರ-ಪರಿಣಾಮಕಾರಿ ಭಾಷಣ ಕಲೆ ವ್ಯಕ್ತಿತ್ವದ ಮೌಲ್ಯವರ್ಧಕ

Advt_Headding_Middle
Advt_Headding_Middle

ಸುಬ್ರಹ್ಮಣ್ಯ: ಭಾಷಣ ಎಂದರೆ ಕೇವಲ ಮಾತನಾಡುವುದಲ್ಲ. ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದುವುದೇ ಆಗಿದೆ. ಪರಿಣಾಮಕಾರಿ ಭಾಷಣ ಕಲೆ ವ್ಯಕ್ತಿತ್ವದ ಮೌಲ್ಯವರ್ಧಕ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳ ಹೇಳಿದರು.
ಜೇಸಿಐ ಪಂಜ ಪಂಚಶ್ರಿ ಇದರ ಜೇಸಿ ಸಪ್ತಾಹ ಪ್ರಯುಕ್ತ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ವಿಷಯವಾಗಿ ಸೋಮವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಾಗಾರವನ್ನು ಜೇಸಿಐ ರಾಷ್ಟ್ರೀಯ ನಿರ್ದೆಶಕ ಚಂದ್ರಶೇಖರ್ ನಾಯರ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ವಿದ್ಯಾರತ್ನ, ಸಪ್ತಾಹ ನಿರ್ದೇಶಕ ವಾಸುದೇವ ಮೇಲ್ಪಾಡಿ, ಬ್ರಿಗೇಡಿಯರ್ ತೀರ್ಥಾನಂದ ಕೊಡಂಕೇರಿ, ವೇದಿಕೆಯಲ್ಲಿದ್ದರು. ಪಂಜ ಪಂಚಶ್ರೀ ಜೇಶಿಐ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಿದ್ದರು. ವಲಯ ತರಬೇತುದಾರರಾದ ಸವಿತಾರ ಮುಡೂರು, ಸೋಮಶೇಖರ ನೇರಳ ತರಬೇತು ನೀಡಿದರು. ಕಾರ್‍ಯಕ್ರಮ ನಿರ್ದೇಶಕ ಪ್ರವೀಣ್ ಕಾಯರ ಸ್ವಾಗತಿಸಿ, ಕಾರ್‍ಯದರ್ಶಿ ಜೀವನ್ ಮಲ್ಕಜೆ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.