Breaking News

ಎಲ್.ಐ.ಸಿ. ಸುಳ್ಯ ಉಪಗ್ರಹ ಶಾಖೆಯ ಉದ್ಘಾಟನಾ ಸಮಾರಂಭ

Advt_Headding_Middle
Advt_Headding_Middle

ಸುಳ್ಯದ ಮುಖ್ಯ ರಸ್ತೆಯ ಕೃಷ್ಣ ಬಿಲ್ಡಿಂಗ್‌ನಲ್ಲಿ ೧೦ ವರ್ಷಗಳಿಂದ ವ್ಯವಹರಿಸುತ್ತಿದ್ದ ಭಾರತೀಯ ಜೀವ ವಿಮಾ ನಿಗಮ ಉಪಗ್ರಹ ಶಾಖೆಯ ಕಛೇರಿಯನ್ನು ಸುಳ್ಯ ಜ್ಯೋತಿ ಆಸ್ಪತ್ರೆಯ ಎದುರುಗಡೆ ಇರುವ ಗಣೇಶ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಿಸಲಾಗಿದ್ದು ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭವು ನ.೧೪ರಂದು ನಡೆಯಿತು.
ಕರ್ನಾಟಕ ಝೋನ್‌ನ ರಿಜನಲ್ ಮ್ಯಾನೇಜರ್ ಮಹಮ್ಮದ್ ಅಜಿಝುದ್ದೀನ್‌ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಉಡುಪಿ ವಲಯದ ಸೀನಿಯರ್ ಮ್ಯಾನೇಜರ್ ವಿಶ್ವೇಶ್ವರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾರುಕಟ್ಟೆ ವಿಭಾಗದ ಪ್ರಬಂದಕ,ವೆಂಕಟ್ರಮಣ ಶಿರೂರು, ಪುತ್ತೂರು ಶಾಖೆಯ ಮ್ಯಾನೇಜರ್ ಚಂದ್ರಶೇಖರ್,
ಕಾಂಪ್ಲೆಕ್ಸ್‌ನ ಮಾಲಕ ಗಣೇಶ್ , ಸುಳ್ಯ ಶಾಖೆಯ ಮ್ಯಾನೇಜರ್ ಟಿ. ಶ್ಯಾಮಸುಂದರ್, ಎ.ಓ.
ವೇಲುಮೋಹನ್, ಎ.ಎ.ಓ.ಮಹಾಲಿಂಗ ನಾಯ್ಕ್, ಮುಖ್ಯ ವಿಮಾ ಸಲಹೆಗಾರರು, ಡೆವಲಪ್‌ಮೆಂಟ್ ಆಫೀಸರ್‍ಸ್, ಎಲ್.ಐ.ಸಿ. ಪ್ರತಿನಿದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಮ್.ಡಿ. ಆರ್.ಟಿ., ಶಂಕರ್‌ಲಿಂಗಮ್‌ರವರನ್ನು ಸನ್ಮಾನಿಸಲಾಯಿತು. ಶತಕ ವೀರರಾದ ಮಾದವ ಜಾಲ್ಸೂರು, ಸೋಮನಾಥ್ ಕೇರ್ಪಳ, ಡಿ.ವಿ. ರಶ್ಮಿ, ಭರತ್, ನಾಗವೇಣಿರವರನ್ನು ಗೌರವಿಸಲಾಯಿತು.ಪ್ರತಿನಿಧಿ ಶಂಕರ ಭಟ್ ಪ್ರಾರ್ಥಿಸಿದರು, ಟಿ.ಶ್ಯಾಮ್ ಸುಂದರ್ ಸ್ವಾಗತಿಸಿದರು, ವಿಜಯಕುಮಾರ್ ವಂದಿಸಿದರು, ಸೋಮನಾಥ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.