Breaking News

ಸುಬ್ರಹ್ಮಣ್ಯ: ಮೀನು ಹಿಡಿಯಲು ತೆರಳಿದ ಇಬ್ಬರು ಯುವಕರು ನೀರುಪಾಲು

Advt_Headding_Middle
Advt_Headding_Middle

ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವ್ಯಾಪ್ತಿ ಯ
ಕುಮಾರ ಧಾರ ನದಿಯ ದಗನಕಜೆ ಎಂಬಲ್ಲಿ ಮೀನು ಹಿಡಿಯಲು ತೆರಳಿದ್ದ ತಂಡದ ಪೈಕಿ ಇಬ್ಬರು ಯುವಕರು ನೀರಿನಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮ್ರತರಾದ ಯುವಕರು ದೇವಚಳ್ಳ ಗ್ರಾಮದ ದೇವ ಕಾಡು ಹೊನ್ನಪ್ಪರ ಪುತ್ರ ಲತೀಶ್ ಮತ್ತು ಎಲ್ಯಣ್ಣ ಎಂಬವರ ಪುತ್ರ ಲಕ್ಷಿತ್ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಕುರಿತು ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕವಷ್ಟೆ ಪೂರ್ಣ ಮಾಹಿತಿ ಹೊರಬರಲಿದೆ ಎಂದು
ಸುಬ್ರಹ್ಮಣ್ಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾಧವ ಕೂಡಿಗಿ ಅವರು ತಿಳಿಸಿದ್ದಾರೆ. ಈ ಭಾಗದ ಐದು ಮಂದಿಯ ತಂಡ ತೆರಳಿದ್ದ ವೇಳೆ ಘಟನೆ ಸಂಭವಿಸಿದ್ದು ಮೂರು ಮಂದಿ ಪ್ರಾಣಣಾಪಯದಿಂದ ಪಾರಾಗಿ ಬದುಕುಳಿದು ಬಂದಿದ್ದಾಗಿ ಮಾಹಿತಿ ದೊರಕಿದೆ. ಸುಬ್ರಹ್ಮಣ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.