ಗ್ರೀನ್‌ವ್ಯೂ – ಮಕ್ಕಳ ದಿನಾಚರಣೆ

Advt_Headding_Middle
Advt_Headding_Middle

ಶಿಕ್ಷಣದ ಜೊತೆಗೆ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು – ಪ್ರಣವ ಮೂಡಿತ್ತಾಯ


ಗ್ರೀನ್‌ವ್ಯೂ ಶಾಲೆಯಲ್ಲಿ ಮಕ್ಕಳ ದಿನಚರಣೆ ಕಾರ್ಯಕ್ರಮ ನ. 14 ರಂದು ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿ ಪ್ರಣವ ಮೂಡಿತ್ತಾಯ ಮುಖ್ಯತಿಥಿಯಾಗಿ ಭಾಗವಹಿಸಿ, ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ವ್ರದ್ಧಿಸಿಕೊಂಡಾಗ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು. ಶಾರದಾ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಜೀವಿತಾ ಬಿ.ಎಸ್. ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಶಾಲಾ ಉಪನಾಯಕಿ ರೋಧ ಅಶ್ರಫ್, ಶಾಲಾಡಳಿತ ಸಮಿತಿ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್, ಸಂಚಾಲಕ ಕೆ.ಎಂ. ಮುಹಿಯುದ್ದೀನ್, ಮುಖ್ಯ ಶಿಕ್ಷಕ ಅಮರನಾಥ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸೈಮಾ ಎನ್.ಎ.ಸ್ವಾಗತಿಸಿ, ರಾಕಿಬ್ ಹುಸೇನ್ ವಂದಿಸಿದರು. ಹುಸ್ನಾ ಕರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.